ಆ್ಯಪ್ನಗರ

ಪ್ರಿಯಾಂಕಾ ಚೋಪ್ರಾ ಬಟ್ಟೆ ಮೇಲೆ ಯಾಕೆ ಎಲ್ಲರಿಗೂ ಕಣ್ಣು?

ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚಿಗೆ ಸಿನಿಮಾ ಮಾಡುವುದು ಕಮ್ಮಿಯಾಗಿದೆ. ಹಾಗಂತ ಅವರ ಹವಾ ಮಾತ್ರ ಕಡಿಮೆ ಆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಸದಾ ಚರ್ಚೆ ನಡೆಯುತ್ತಿರುತ್ತದೆ.

Vijaya Karnataka Web 18 Feb 2020, 5:15 pm
ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚಿಗೆ ಸಿನಿಮಾ ಮಾಡುವುದು ಕಮ್ಮಿಯಾಗಿದೆ. ಹಾಗಂತ ಅವರ ಹವಾ ಮಾತ್ರ ಕಡಿಮೆ ಆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಸದಾ ಚರ್ಚೆ ನಡೆಯುತ್ತಿರುತ್ತದೆ. ಅವರು ಯಾವುದೇ ಡ್ರೆಸ್‌ ಹಾಕಿಕೊಂಡರೂ ಅದರ ಬಗ್ಗೆ ನೆಟ್ಟಿಗರು ಕಾಮೆಂಟ್‌ ಮಾಡುತ್ತಾರೆ. ಅದರಲ್ಲೂ ಕೆಲವು ದಿನಗಳ ಹಿಂದೆ ಅವರು ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮಕ್ಕೆ ಸಿಕ್ಕಾಪಟ್ಟೆ ಗ್ಲಾಮರಸ್‌ ಆಗಿ ಬಟ್ಟೆ ಹಾಕಿಕೊಂಡು ಬಂದಾಗಿನಿಂದ ಎಲ್ಲರ ಕಣ್ಣು ಅವರ ಕಾಸ್ಟ್ಯೂಮ್‌ಗಳ ಮೇಲೆಯೇ ಇರುತ್ತದೆ.
Vijaya Karnataka Web priyanka chopras dress making headlines in fashion world
ಪ್ರಿಯಾಂಕಾ ಚೋಪ್ರಾ ಬಟ್ಟೆ ಮೇಲೆ ಯಾಕೆ ಎಲ್ಲರಿಗೂ ಕಣ್ಣು?



ಗ್ರ್ಯಾಮಿ ಅವಾರ್ಡ್ಸ್‌ನಲ್ಲಿ ಅತಿಯಾದ ಗ್ಲಾಮರ್‌

ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಅವತಾರ ಕಂಡು ಎಲ್ಲರೂ ಕಂಗಾಲಾಗಿದ್ದರು. ಅಷ್ಟರಮಟ್ಟಿಗೆ ಹಾಟ್‌ ಆಗಿತ್ತು ಅವರ ಕಾಸ್ಟ್ಯೂಮ್‌. ಅದನ್ನು ನೋಡಿದ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಕ್ಲಾಸ್‌ ತೆಗೆದುಕೊಂಡಿದ್ದರು. 'ನೀವು ಭಾರತೀಯ ಸಂಸ್ಕೃತಿಯನ್ನು ಮರೆತಿದ್ದೀರಿ. ಈ ರೀತಿ ಬಟ್ಟೆ ಧರಿಸುವ ಮೂಲಕ ಭಾರತೀಯರಿಗೆಲ್ಲ ಅವಮಾನ ಮಾಡುತ್ತಿದ್ದೀರಿ' ಎಂದು ಅನೇಕರು ಕಾಮೆಂಟ್‌ ಮಾಡಿದ್ದರು. ಆದರೆ ಅದಕ್ಕೆಲ್ಲ ಪ್ರಿಯಾಂಕಾ ಚೋಪ್ರಾ ಕಿಂಚಿತ್ತೂ ತಲೆ ಕೆಡಿಸಿಕೊಳ್ಳಲೇ ಇಲ್ಲ. ಅವರ ತಾಯಿ ಮಧೂ ಚೋಪ್ರಾ ಕೂಡ ಮಗಳ ಪರವಾಗಿ ಮಾತನಾಡಿದರು. ಟ್ರೋಲಿಗರಿಗೆಲ್ಲ ಖಡಕ್‌ ಉತ್ತರ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ಪ್ರಿಯಾಂಕಾ ಕಾಸ್ಟ್ಯೂಮ್‌ ಬಗ್ಗೆ ಜನರು ಮಾತನಾಡುವುದು ಹೆಚ್ಚಾಯಿತು.

ಅದು ಅವಳ ದೇಹ, ಆಕೆ ತಾನು ಬಯಸಿದ್ದನ್ನು ಮಾಡಬಹುದು; ಪ್ರಿಯಾಂಕಾ ಚೋಪ್ರಾ ತಾಯಿ

ಫ್ಯಾಷನ್‌ ಲೋಕದಲ್ಲಿ ಕಣ್ಣು ಕುಕ್ಕುವ ಪಿಗ್ಗಿ

ಇತ್ತೀಚೆಗೆ ಪತಿ ನಿಕ್ ಜೋನಸ್‌ ಜೊತೆಗೆ ಪ್ರಿಯಾಂಕಾ ಚೋಪ್ರಾ ಮಿಲಾನ್‌ ನಗರದಲ್ಲಿ ಕಾಣಿಸಿಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮದ ಸಲುವಾಗಿ ಜೊತೆಯಾಗಿ ತೆರಳಿದ್ದ ಅವರು ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರು ಧರಿಸಿದ್ದ ಕಾಸ್ಟ್ಯೂಮ್‌ ಗಮನ ಸೆಳೆದಿದೆ. ಹಾಲಿವುಡ್‌ ಹಾರರ್‌ ಸಿನಿಮಾಗಳ ಭಯಾನಕ ಪಾತ್ರ ಡ್ರ್ಯಾಕುಲಾ ಪ್ರಿಂಟೆಡ್‌ ಇರುವ ಶರ್ಟ್‌ಡ್ರೆಸ್‌ ಧರಿಸಿ ಪಿಗ್ಗಿ ಕಣ್ಣು ಕುಕ್ಕಿದ್ದಾರೆ. ಹಾಗೆ ನೋಡಿದರೆ ಈ ಬಟ್ಟೆಯಲ್ಲಿ ಹೇಳಿಕೊಳ್ಳುವಂತಹ ವಿಶೇಷ ಏನಿಲ್ಲ. ಮನಸೆಳೆಯುವ ವಿನ್ಯಾಸ ಕೂಡ ಇಲ್ಲ. ಹಾಗಿದ್ದರೂ ಫ್ಯಾಷನ್‌ ಲೋಕದ ಅನೇಕರು ಇದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

Video: ಗ್ಲಾಮರ್ ಉಡುಗೆ ಧರಿಸಿ ಮಿಂಚು ಹರಿಸಿದ ನಟಿ ಪ್ರಿಯಾಂಕಾ ಚೋಪ್ರಾ!

ಬೆಲೆ ಕೇಳಿದರೆ ಅಚ್ಚರಿ ಆಗೋದು ಗ್ಯಾರಂಟಿ!

ಮಿಲಾನ್‌ನಲ್ಲಿ ಪತಿಯ ಜೊತೆ ಸುತ್ತಾಡಲು ಸಿಂಪಲ್‌ ಆಗಿ ಕಾಣುವ ಈ ಬಟ್ಟೆಗಳನ್ನು ಪ್ರಿಯಾಂಕಾ ಆಯ್ದುಕೊಂಡಿದ್ದಾರೆ. ಆದರೆ ಅದರ ಒಟ್ಟಾರೆ ಬೆಲೆ ಕೇಳಿದರೆ ಒಮ್ಮೆ ಶಾಕ್‌ ಆಗುವುದು ಸಹಜ. ಡ್ರ್ಯಾಕುಲಾ ಪ್ರಿಂಟೆಡ್‌ ಶರ್ಟ್‌ಡ್ರೆಸ್‌ನ ಬೆಲೆ ಬರೋಬ್ಬರಿ 62 ಸಾವಿರ ರೂ.! ಅದಕ್ಕಿಂತಲೂ ಅಚ್ಚರಿ ಎಂದರೆ ಅವರು ಧರಿಸಿದ್ದ ಮೊಣಕಾಲುದ್ದದ ಬೂಟ್‌ಗಳ ಬೆಲೆ ಒಂದು ಲಕ್ಷ ರೂ.! 21 ಸಾವಿರ ರೂ. ಬೆಲೆಯ ಸನ್‌ ಗ್ಲಾಸ್‌ ಹಾಗೂ 9,500 ರೂಪಾಯಿಗಳ ಬ್ಯಾಗ್‌ ಕೈಯಲ್ಲಿ ಹಿಡಿದು ಪ್ರಿಯಾಂಕಾ ಮಿಂಚಿದ್ದಾರೆ. ಅವರಿಗೆ ಪತಿ ನಿಕ್‌ ಜೋನಸ್‌ ಸಾಥ್‌ ನೀಡಿದ್ದಾರೆ.

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ಅಧರ ಚುಂಬನ, ಅಭಿಮಾನಿಗಳಲ್ಲಿ ಕಂಪನ; ವಿಡಿಯೋ ವೈರಲ್

ಬದಲಾಯಿತು ಪ್ರಿಯಾಂಕಾ ಫ್ಯಾಷನ್‌ ಸೆನ್ಸ್‌

ಅಂದಹಾಗೆ, ಪ್ರಿಯಾಂಕಾ ಈಗ ಕೇವಲ ಭಾರತೀಯ ನಟಿ ಅಲ್ಲ. ಹಾಲಿವುಡ್‌ ಸಿನಿಮಾಗಳಲ್ಲೂ ನಟಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಮಿಂಚಿದ್ದಾರೆ. 'ಕ್ವಾಂಟಿಕೋ' ವೆಬ್‌ ಸರಣಿಯಿಂದ ಅವರ ಚಾರ್ಮ್‌ ಹೆಚ್ಚಿದೆ. ಅಮೆರಿಕದ ಗಾಯಕ ನಿಕ್‌ ಜೋನಸ್‌ರನ್ನು ಮದುವೆ ಆದ ಬಳಿಕವಂತೂ ಸಂಪೂರ್ಣ ವಿದೇಶಿ ಸಂಸ್ಕೃತಿಗೆ ಅವರು ಮಾರು ಹೋದಂತಿದೆ. ಅಂತಾರಾಷ್ಟ್ರೀಯ ಮಟ್ಟದ ಪಾರ್ಟಿ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವ ಪಿಗ್ಗಿ, ಪಕ್ಕಾ ಹಾಲಿವುಡ್‌ ಸೆಲೆಬ್ರಿಟಿಯ ರೀತಿಯಲ್ಲಿ ಕಂಗೊಳಿಸುತ್ತಾರೆ. ಇತ್ತೀಚೆಗಂತೂ ಅವರ ಫ್ಯಾಷನ್‌ ಸೆನ್ಸ್‌ ಸಂಪೂರ್ಣ ಬದಲಾಗಿದೆ ಎಂದರೆ ಅತಿಶಯೋಕ್ತಿ ಇಲ್ಲ.

ಟ್ರೋಲಿಗರಿಗೆ ಕ್ಲಾಸ್‌ ತೆಗೆದುಕೊಂಡ ಪ್ರಿಯಾಂಕಾ ಚೋಪ್ರಾ ತಾಯಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌