ವಿವಾದದ ಕಿಡಿ ಎಬ್ಬಿಸಿರುವ ಪದ್ಮಾವತಿ ಸಿನಿಮಾ ಬ್ರಿಟನ್ನಲ್ಲಿ ಡಿಸೆಂಬರ್ 1 ರಂದೇ ಬಿಡುಗಡೆಯಾಗಲಿದೆ ಎಂದು ಈ ಮೊದಲು ಹೇಳಲಾಗಿತ್ತು. ಈ ನಿಟ್ಟಿನಲ್ಲಿ ಆ ಸಿನಿಮಾಗೆ ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಷನ್ (ಬಿಬಿಎಫ್ಸಿ) ಗ್ರೀನ್ ಸಿಗ್ನಲ್ ಕೂಡಾ ನೀಡಿದೆ. ಆದರೆ ಇದೀಗ ಈ ಸಿನಿಮಾದ ನಿರ್ಮಾಪಕರು ಭಾರತದಲ್ಲಿ ಈ ಸಿನಿಮಾ ಕುರಿತಾದ ವಿವಾದ ತಣ್ಣಗಾಗುವವರೆಗೆ ಬ್ರಿಟನ್ನಲ್ಲೂ ಈ ಸಿನಿಮಾ ಬಿಡುಗಡೆಯಾಗುವುದು ಬೇಡ ಎಂದು ಹೇಳುತ್ತಿದ್ದಾರಂತೆ. ಆದ್ದರಿಂದ ಈ ಸಿನಿಮಾ ಡಿಸೆಂಬರ್ 1 ರಂದು ಬ್ರಿಟನ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಕ್ಷೀಣವಾಗಿದೆ. ಅಲ್ಲಿನ ಸೆನ್ಸಾರ್ ಬೋರ್ಡ್ ಯಾವುದೇ ಕಟ್ಗಳಿಲ್ಲದೆ ಸಿನಿಮಾ ಬಿಡುಗಡೆಗೆ ಒಪ್ಪಿಗೆ ನೀಡಿದ್ದರೂ ಆ ಸಿನಿಮಾ ನಿರ್ಮಾಪಕರು ಚಿತ್ರ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದಾರೆ. ಭಾರತದಲ್ಲಿ ಪದ್ಮಾವತಿ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂಬ ಗೊಂದಲ ಸದ್ಯಕ್ಕೆ ಹಾಗೆಯೇ ಮುಂದುವರಿದಿದೆ. ಈ ಸಿನಿಮಾ ರಜಪೂತ ರಾಣಿ ಪದ್ಮಾವತಿಯ ಕುರಿತಾಗಿದ್ದು, ಈ ಪಾತ್ರವನ್ನು ದೀಪಿಕಾ ಪಡುಕೋಣೆ ಮಾಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಮೂಲಕಥೆಯನ್ನು ತಿರುಚಲಾಗಿದೆ ಎಂದು ಆರೋಪಿಸಿ ಕೆಲವು ಸಮುದಾಯಗಳು ಪ್ರತಿಭಟನೆ ವ್ಯಕ್ತಪಡಿಸಿದ್ದು, ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಬ್ರಿಟನ್ನಲ್ಲೂ ಪದ್ಮಾವತಿ ಸಿನಿಮಾ ಬಿಡುಗಡೆ ಡೌಟು
ವಿವಾದದ ಕಿಡಿ ಎಬ್ಬಿಸಿರುವ ಪದ್ಮಾವತಿ ಸಿನಿಮಾ ಬ್ರಿಟನ್ನಲ್ಲಿ ಡಿಸೆಂಬರ್ 1 ರಂದೇ ಬಿಡುಗಡೆಯಾಗಲಿದೆ ಎಂದು ಈ ಮೊದಲು ...
Vijaya Karnataka 24 Nov 2017, 5:30 am