ಆ್ಯಪ್ನಗರ

2.0 ಮೊದಲ ದಿನವೇ ಬಾಕ್ಸ್ ಆಫೀಸಲ್ಲಿ 100 ಕೋಟಿ ಕಲೆಕ್ಷನ್

ಕಥೆ ಮತ್ತು ಭಾವನಾತ್ಮಕ ಅಂಶಗಳಿಗೆ ಅಷ್ಟಾಗಿ ಪ್ರಾಧಾನ್ಯತೆ ಇಲ್ಲದಿದ್ದರೂ ಗ್ರಾಫಿಕ್ಸ್, ಆ್ಯನಿಮೇಷನ್‌ನಿಂದಾಗಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತದೆ. ಇದೊಂದು ವಿಷುಯಲ್ ವಂಡರ್ ಎಂಬ ವಿಮರ್ಶೆ ವ್ಯಕ್ತವಾಗಿತ್ತು.

Vijaya Karnataka Web 30 Nov 2018, 8:08 pm
ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ತಾರಾಗಣದ ಭಾರತದ ಅತ್ಯಂತ ಅದ್ದೂರಿ ಚಿತ್ರ ಎನ್ನಿಸಿಕೊಂಡಿರು 2.0 ಮೊದಲ ದಿನವೇ ಬಾಕ್ಸ್ ಆಫೀಸಲ್ಲಿ ಹೊಸ ದಾಖಲೆ ಬರೆದಿದೆ. ಶಂಕರ್ ನಿರ್ದೇಶನ ಈ ಸಿನಿಮಾ ಮೊದಲ ದಿನವೇ 100 ಕೋಟಿ ಕಲೆಕ್ಷನ್ ಮಾಡಿದೆ.
Vijaya Karnataka Web 2


ಬಿಡುಗಡೆಯಾದ ದಿನ ಚೆನ್ನೈನಲ್ಲಿ 2 ಕೋಟಿ ಕಲೆಕ್ಷನ್ ಮಾಡಿದ್ದು ವರ್ಲ್ಡ್ ವೈಡ್ ಕಲೆಕ್ಷನ್ 100 ಕೋಟಿ ದಾಟಿದೆ ಎನ್ನುತ್ತಿವೆ ಮೂಲಗಳು. ಬಾಲಿವುಡ್ ಟ್ರೇಡ್ ಪಂಡಿತ ಎನ್ನಿಸಿಕೊಂಡಿರುವ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿದ್ದು ಭಾರತದಲ್ಲಿ 2.0 ಹಿಂದಿ ಆವೃತ್ತಿ 20.25 ಕೋಟಿ ಕಲೆಕ್ಷನ್ ಮಾಡಿದೆ ಎಂದಿದ್ದಾರೆ.

"ಯಾವುದೇ ರಜೆ ಇಲ್ಲ, ಹಬ್ಬದ ಸೀಸನ್ ಅಲ್ಲ ಆದರೂ 2.0 ಸಿನಿಮಾ ಹಿಂದಿ ಡಬ್ಬಿಂಗ್ ಸಿನಿಮಾ ಮೊದಲ ದಿನವೇ 20.25 ಕೋಟಿ ಬಾಚಿದೆ" ಎಂದಿದ್ದಾರೆ ತರಣ್ ಆದರ್ಶ್. ಜಗತ್ತು ಎಂದರೆ ಕೇವಲ ಮನುಷ್ಯರಷ್ಟೇ ಅಲ್ಲ, ಎಲ್ಲಾ ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಎಂಬ ಕಥಾಹಂದರ ಚಿತ್ರದಲ್ಲಿದ್ದು, ಅದನ್ನು ಗ್ರಾಫಿಕ್ಸ್, ಅದ್ಭುತ ಆ್ಯನಿಮೇಷನ್ ಮೂಲಕ ತೆರೆಗೆ ತಂದಿದ್ದಾರೆ ಶಂಕರ್. [2.0 ಸಿನಿಮಾ ವಿಮರ್ಶೆ ]

ಕಥೆ ಮತ್ತು ಭಾವನಾತ್ಮಕ ಅಂಶಗಳಿಗೆ ಅಷ್ಟಾಗಿ ಪ್ರಾಧಾನ್ಯತೆ ಇಲ್ಲದಿದ್ದರೂ ಗ್ರಾಫಿಕ್ಸ್, ಆ್ಯನಿಮೇಷನ್‌ನಿಂದಾಗಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತದೆ. ಇದೊಂದು ವಿಷುಯಲ್ ವಂಡರ್ ಎಂಬ ವಿಮರ್ಶೆ ವ್ಯಕ್ತವಾಗಿತ್ತು. ಏನೇ ಆಗಲಿ ಮೊದಲ ದಿನವೇ ಬಾಕ್ಸ್ ಆಫೀಸಲ್ಲಿ 2.0 ಧೂಳೆಬ್ಬಿಸಿದೆ ಎಂದು ಹೇಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌