ಆ್ಯಪ್ನಗರ

ಬೊಜ್ಜು ಮೈಗಾಗಿ ಜಂಕ್ ತಿನ್ನುತ್ತಿರುವ ರಾಜ್!

ಎಲ್ಲರು ಬೊಜ್ಜು ಕರಗಿಸಲು ಪ್ರಯುತ್ನಪಟ್ಟರೆ, ನಟ ರಾಜ್‌ಕುಮಾರ್ ರಾವ್ ತಮ್ಮ ಸದೃಢ ಮೈಕಟ್ಟಿನ ದೇಹವನ್ನು ಬೊಜ್ಜಿನ ದೇಹವಾಗಿ ಪರಿವರ್ತಿಸುತ್ತಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 5 Jul 2017, 3:12 pm
ಎಲ್ಲರು ಬೊಜ್ಜು ಕರಗಿಸಲು ಪ್ರಯುತ್ನಪಟ್ಟರೆ, ನಟ ರಾಜ್‌ಕುಮಾರ್ ರಾವ್ ತಮ್ಮ ಸದೃಢ ಮೈಕಟ್ಟಿನ ದೇಹವನ್ನು ಬೊಜ್ಜಿನ ದೇಹವಾಗಿ ಪರಿವರ್ತಿಸುತ್ತಿದ್ದಾರೆ.
Vijaya Karnataka Web rajkummar rao puts on 11 kg
ಬೊಜ್ಜು ಮೈಗಾಗಿ ಜಂಕ್ ತಿನ್ನುತ್ತಿರುವ ರಾಜ್!


ಹೆಚ್ಚಾಗುತ್ತಿರುವ ಹೊಟ್ಟೆ ಬೊಜ್ಜು ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳದೆ ಪಿಜ್ಜಾ, ಬರ್ಗರ್‌ ಅಂತ ತನಗೆ ಇಷ್ಟವಾದ ಜಂಕ್‌ ಫುಡ್ಸ್‌ ತಿನ್ನುತ್ತಾ ತುಂಬಾ ಖುಷಿಯಾಗಿದ್ದಾರೆ. ವ್ಯಾಯಾಮ ಮಾಡಿ ಎರಡು ತಿಂಗಳಾಯ್ತಂತೆ, ಪರಿಣಾಮ ಮೈ ತೂಕ 11 ಕೆಜಿ ಹೆಚ್ಚಾಗಿದೆ.

ಇಷ್ಟಕ್ಕೂ ಇವರು ಮೈ ತೂಕ ಹೆಚ್ಚಿಸಿಕೊಂಡಿರುವುದು 'ನೇತಾಜಿ' ಪಾತ್ರಕ್ಕಾಗಿ. ತಮ್ಮ ಮುಂಬರುವ ಚಿತ್ರದಲ್ಲಿ ಸುಭಾಷ್ ಚಂದ್ರಬೋಸ್‌ರ ಪಾತ್ರದಲ್ಲಿ ಕಾಣಿಸಲಿದ್ದು, ಅವರಂತೆ ಕಾಣಿಸಲು ಮೈ ತೂಕ ಹೆಚ್ಚಿಸಿಕೊಂಡಿದ್ದಾರೆ.

ಇಷ್ಟು ದಿನ ಸ್ಟ್ರಿಕ್ಟ್ ಡಯಟ್‌ ಹೆಸರಿನಲ್ಲಿ ತನಗೆ ಇಷ್ಟವಾದ ತಿಂಡಿಗಳಿಂದ ರಾಜ್‌ ಇದೀಗ ಸಿಕ್ಕಿದ ಅವಕಾಶವನ್ನು ಮಿಸ್‌ ಮಾಡಿಕೊಳ್ಳದೆ ಫುಲ್‌ ಟೈಮ್‌ ತಿನ್ನುವುದರಲ್ಲಿಯೇ ಬ್ಯುಸಿಯಾಗಿದ್ದಾರೆ.

ಮತ್ತೊಂದು ಸಿನಿಮಾಕ್ಕೆ ನಿರ್ದೇಶಕರು ತೂಕ ಇಳಿಸಿಕೊಳ್ಳಲು ಹೇಳುವ ಮುನ್ನ ತನ್ನ ಇಷ್ಟದ ತಿಂಡಿಗಳನ್ನು ತಿನ್ನುವ ಇರಾದೆ ರಾಜ್‌ ಅವರದ್ದು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌