ಆ್ಯಪ್ನಗರ

ಡ್ರಗ್ಸ್‌ ಕೇಸ್‌ನಲ್ಲಿ ರಾಕುಲ್‌ ವಿಚಾರಣೆ: 4 ಜನರ ಹೆಸರು ಬಾಯಿ ಬಿಡುವುದರ ಜೊತೆಗೆ ಸತ್ಯ ಒಪ್ಪಿಕೊಂಡ ನಟಿ?

ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಅವರ ಮೇಲೆ ಡ್ರಗ್ಸ್‌ ಸೇವನೆಯ ಆರೋಪ ಕೇಳಿಬಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಅವರು ಶುಕ್ರವಾರ (ಸೆ.25) ಎನ್‌ಸಿಬಿ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದ್ದಾರೆ. ಈ ವೇಳೆ ಅನೇಕ ಸತ್ಯಗಳು ಬಯಲಾಗಿವೆ.

Vijaya Karnataka Web 25 Sep 2020, 10:09 pm
ಹಿಂದಿ ಚಿತ್ರರಂಗದ ಅನೇಕರು ಭಾಗಿ ಆಗಿದ್ದಾರೆ ಎನ್ನಲಾಗಿರುವ ಡ್ರಗ್ಸ್‌ ಜಾಲದ ವಿಚಾರಣೆ ಬಿರುಸಿನಿಂದ ನಡೆಯುತ್ತಿದೆ. ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಅವರನ್ನು ಶುಕ್ರವಾರ ವಿಚಾರಣೆಗೆ ಒಳಪಡಿಸಲಾಯಿತು. ಈ ವೇಳೆ ಅವರು ಬಾಲಿವುಡ್‌ನ ನಾಲ್ವರು ಸೆಲೆಬ್ರಿಟಿಗಳ ಹೆಸರನ್ನು ಬಾಯಿ ಬಿಟ್ಟಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆ ವ್ಯಕ್ತಿಗಳು ಯಾರು ಎಂಬ ಕೌತುಕ ಸೃಷ್ಟಿ ಆಗಿದೆ.
Vijaya Karnataka Web ರಾಕುಲ್‌ ಪ್ರೀತ್‌ ಸಿಂಗ್‌


ನಾಲ್ಕು ಜನರಿಗೆ ಡ್ರಗ್ಸ್‌ ಪೂರೈಕೆ
ನಾಲ್ವರ ಹೆಸರನ್ನು ಬಾಯಿ ಬಿಟ್ಟಿದ್ದು ಮಾತ್ರವಲ್ಲದೆ, ಇನ್ನೂ ಕೆಲವು ವಿಚಾರಗಳನ್ನು ರಾಕುಲ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ 'ಟೈಮ್ಸ್‌ ನೌ' ಸುದ್ದಿ ವಾಹಿನಿ ವರದಿ ಪ್ರಸಾರ ಮಾಡಿದೆ. ಆ ನಾಲ್ಕು ಜನರಿಗೆ ಕರಣ್‌ ಜೋಹರ್‌ ಒಡೆತನದ 'ಧರ್ಮ ಪ್ರೊಡಕ್ಷನ್ಸ್‌' ನಿರ್ಮಾಣ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಕ್ಷಿತಿಜ್‌ ರವಿಪ್ರಸಾದ್‌ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಎಂಬುದನ್ನು ರಾಕುಲ್‌ ಬಹಿರಂಗ ಪಡಿಸಿದ್ದಾರೆ ಎಂದು ವರದಿ ಆಗಿದೆ.

ರಿಯಾ ಜೊತೆ ರಾಕುಲ್‌ ಡ್ರಗ್ಸ್‌ ಚಾಟ್‌!
ಅಚ್ಚರಿ ಏನೆಂದರೆ ಈಗಾಗಲೇ ಎನ್‌ಸಿಬಿ ಪೊಲೀಸರ ಅತಿಥಿಯಾಗಿ ನ್ಯಾಯಾಂಗ ಬಂಧನದಲ್ಲಿ ಇರುವ ನಟಿ ರಿಯಾ ಚಕ್ರವರ್ತಿ ಮತ್ತು ರಾಕುಲ್‌ ಪ್ರೀತ್‌ ಸಿಂಗ್ ನಡುವೆ ಮಾದಕ ವಸ್ತುಗೆ ಸಂಬಂಧಪಟ್ಟಂತೆ ಮೆಸೇಜ್‌ ವಿನಿಮಯ ಆಗಿದೆ. ಅದರ ಆಧಾರದ ಮೇಲೆಯೇ ಈ ವಿಚಾರಣೆ ನಡೆದಿದೆ. ಡಗ್ಸ್‌ ಕುರಿತಂತೆ ಚಾಟ್‌ ಮಾಡಿರುವುದು ನಿಜ ಎಂಬುದನ್ನು ಅಧಿಕಾರಿಗಳ ಮುಂದೆ ರಾಕುಲ್ ಒಪ್ಪಿಕೊಂಡಿದ್ದಾರೆ. ಆದರೆ ತಾವು ಎಂದಿಗೂ ಡ್ರಗ್ಸ್‌ ಸೇವಿಸಿಲ್ಲ ಎಂದು ಹೇಳಿದ್ದಾರೆ ಎಂಬುದು ಮೂಲಗಳ ಮಾಹಿತಿ.

also read: ಬಾಲಿವುಡ್‌ ಡ್ರಗ್ಸ್‌ ಮಾಫಿಯಾ: ಎನ್‌ಸಿಬಿ ನೋಟಿಸ್‌ನಿಂದ ಕರಣ್‌ ಜೋಹರ್‌ಗೆ ಶುರುವಾಯ್ತಾ ಢವಢವ?

ಅನೇಕರ ಮೇಲಿದೆ ತೂಗುಗತ್ತಿ!
ಬಾಲಿವುಡ್‌ನ ಇನ್ನೂ ಅನೇಕರ ಮೇಲೆ ಡ್ರಗ್ಸ್‌ ಸೇವನೆ ಆರೋಪ ಇದೆ. ಶನಿವಾರ (ಸೆ.26) ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್‌, ಶ್ರದ್ಧಾ ಕಪೂರ್‌ ಕೂಡ ಎನ್‌ಸಿಬಿ ಅಧಿಕಾರಿಗಳ ವಿಚಾರಣೆಗೆ ಒಳಗಾಗಲಿದ್ದಾರೆ. 'ಧರ್ಮ ಪ್ರೊಡಕ್ಷನ್ಸ್‌' ಹೆಸರು ಕೇಳಿಬಂದಿರುವುದರಿಂದ ಯಾವುದೇ ಕ್ಷಣದಲ್ಲೂ ಕರಣ್‌ ಜೋಹರ್‌ ಅವರನ್ನು ಎನ್‌ಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆಯಬಹುದಾದ ಸಾಧ್ಯತೆ ದಟ್ಟವಾಗಿದೆ.

also read: ಡ್ರಗ್ಸ್‌ ದಂಧೆ: NCB ವಿಚಾರಣೆ ವೇಳೆ ದೀಪಿಕಾಗೆ ಆಗಬಹುದಾದ ದೊಡ್ಡ ಸಮಸ್ಯೆ ತಪ್ಪಿಸ್ತಾರಾ ರಣವೀರ್‌?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌