ಆ್ಯಪ್ನಗರ

ನವೆಂಬರ್ 19ಕ್ಕೆ ದೀಪಿಕಾ ಪಡುಕೋಣೆ ಪಾಣಿಗ್ರಹಣ

ಬಾಲಿವುಡ್‌ನ ಸ್ಟಾರ್‌ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಮದುವೆ ಬರುವ ನವೆಂಬರ್‌ 19 ಕ್ಕೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

Vijaya Karnataka 26 May 2018, 11:47 am
ಬಾಲಿವುಡ್‌ನ ಸ್ಟಾರ್‌ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಮದುವೆ ಬರುವ ನವೆಂಬರ್‌ 19 ಕ್ಕೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇವರಿಬ್ಬರಿಂದ ಅಥವಾ ಇವರ ಕುಟುಂಬದವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವಾದರೂ, ಕೆಲವು ಮೂಲಗಳ ಪ್ರಕಾರ, ನವೆಂಬರ್‌ 19 ಕ್ಕೆ ಇವರ ಮದುವೆ ಮುಂಬಯಿಯಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮದುವೆಯ ಕೆಲವು ದಿನಗಳ ಮೊದಲು ಅಂದರೆ ಸುಮಾರು ನವೆಂಬರ್‌ 10 ರಿಂದ ಮದುವೆ ಶಾಸ್ತ್ರಗಳು ಆರಂಭವಾಗಲಿವೆ.
Vijaya Karnataka Web deepika-padukone


ದೀಪ್‌ವೀರ್‌ ಮದುವೆಯ ಸುದ್ದಿ ಈ ವರ್ಷದ ಆರಂಭದಲ್ಲೇ ಎಲ್ಲೆಡೆ ಹರಡಿತ್ತು. ಈ ಜೋಡಿ ಶ್ರೀಲಂಕಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೇ ವರ್ಷ ಮದುವೆಯಾಗಲಿದ್ದಾರೆ ಎಂಬ ವರದಿ ಬಂದಿತ್ತು. ಆದರೆ ಮದುವೆಯ ದಿನಾಂಕ ತಿಳಿದುಬಂದಿರಲಿಲ್ಲ. ದೀಪಿಕಾ ಪಡುಕೋಣೆಯ ವೆಡ್ಡಿಂಗ್‌ ರಿಸೆಪ್ಷನ್‌ ಬೆಂಗಳೂರಿನಲ್ಲಿ ನಡೆಯಲಿದೆಯಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌