ಆ್ಯಪ್ನಗರ

Deepika Ranveer Marriage: ಸಂಗೀತ್‌ ಕಾರ್ಯಕ್ರಮದಲ್ಲಿ ದೀಪಿಕಾಗಾಗಿ ರಣವೀರ್ ಹಾಡಿದ ಹಾಡು ಯಾವುದು ಗೊತ್ತಾ?

ನೈಸರ್ಗಿಕ ಭವ್ಯ ತಾಣದಲ್ಲಿ ಬಾಲಿವುಡ್ ಜೋಡಿಯ ಮೆಹಂದಿ ಕಾರ್ಯಕ್ರಮ

Vijaya Karnataka Web 14 Nov 2018, 9:40 am
ಮುಂಬಯಿ: ಬಾಲಿವುಡ್‌ನ ಅತ್ಯಂತ ಹಾಟ್‌ ಜೋಡಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಡಲು ಕ್ಷಣಗಣನೆ ಆರಂಭವಾಗಿದೆ.
Vijaya Karnataka Web ರಣವೀರ್‌-ದೀಪಿಕಾ
ರಣವೀರ್‌-ದೀಪಿಕಾ


ಮದುವೆ ಮುನ್ನಾದಿನ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ದೀಪಿಕಾಗಾಗಿ ರಣವೀರ್ ಸಿಂಗ್‌ ಹಾಡು ಹಾಡಿ ಖುಷಿ ನೀಡಿದ್ದಾರೆ.

ಇಟಲಿಯ ಅತ್ಯಂತ ಭವ್ಯ ನೈಸರ್ಗಿಕ ತಾಣವಾಗಿರುವ ಲೇಕ್‌ ಕೊಮೊದಲ್ಲಿ ನಡೆದ ಸಂಗೀತ್‌ ಕಾರ್ಯಕ್ರಮದಲ್ಲಿ ಕೆಲವೇ ಕೆಲವು ಆಯ್ದ ಅತಿಥಿಗಳಿದ್ದರು.

ತೀರಾ ಖಾಸಗಿ ಸಮಾರಂಭದಲ್ಲಿ ಹಾಡು, ನೃತ್ಯ ಜೋರಾಗಿ ಸಾಗಿತ್ತು.

ಮೆಹಂದಿ ನಡೆದ ಸ್ಥಳ


ಸಂಗೀತ್‌ ಕಾರ್ಯಕ್ರಮಕ್ಕೆ ರಣವೀರ್‌ ಎಂಟ್ರಿ ಕೊಟ್ಟಿದ್ದು ತಮ್ಮ ಗುಂಡೇ ಚಿತ್ರದ "ಥೂನೆ ಮಾಂಟ್ರಿ ಎಂಟ್ರಿಯಾ' ಹಾಡಿನ ಮೂಲಕ. ಈ ಹಾಡನ್ನು ದೀಪಿಕಾಗೆ ರಣವೀರ್‌ ಅರ್ಪಿಸಿದರು.

ನಂತರ ಮೆಹಂದಿಗೆ ಸಂಬಂಧಿಸಿ ಹಲವಾರು ಹಾಡುಗಳು ತೇಲಿಬಂದವು.

'ಓ ಹಸೀನಾ ಝುಲ್ಫೋ ವಾಲಿ' ಹಾಡು ಆಗಾಗ ಕೇಳಿಬರುತ್ತಿತ್ತು. ಹಳೆಯ ಮಧುರ ಗೀತೆಗಳು ಮಧ್ಯೆ ಮಧ್ಯೆ ತೇಲಿಬಂದವು.

ಗುರುವಾರ ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌ ಮದುವೆಗೆ ಸಾಕ್ಷಿಯಾಗಲು ಇಟಲಿಯ ಭವ್ಯ ತಾಣ ನವವಧುವಿಗಿಂತ ಹೆಚ್ಚಾಗಿ ಸಿಂಗಾರ ಮಾಡಿಕೊಂಡು ಸಜ್ಜಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌