ಆ್ಯಪ್ನಗರ

#MeToo ಮೂಲಕ ಕೆಲವರು ಲಾಭ ಪಡೆಯುತಿದ್ದಾರೆ: ರವೀನಾ ಟಂಡನ್

ಪ್ರತಿಯೊಬ್ಬರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಕೆಲವರು #MeToo ಅಭಿಯಾನದಿಂದ ಲಾಭ ಪಡೆಯುತ್ತಿದ್ದಾರೆ ಎಂದಿದ್ದಾರೆ ರವೀನಾ ಟಂಡನ್.

TIMESOFINDIA.COM 24 Oct 2018, 5:30 pm
ಬಾಲಿವುಡ್ ತಾರೆ ರವೀನಾ ಟಂಡನ್ ಸಹ ಇದೀಗ #MeToo ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲೈಂಗಿಕ ದುರುಪಯೋಗವನ್ನು ತಡೆಯುವ ಸಲುವಾಗಿ CINTAA ಎಂಬ ಸಮಿತಿಯನ್ನು ಹುಟ್ಟುಹಾಕಿರುವ ಅವರು ಇದೀಗ ಮಿ ಟೂ ಕುರಿತು ತಮ್ಮ ದೃಷ್ಟಿಕೋನ ಏನು ಎಂಬುದನ್ನು ತಿಳಿಸಿದ್ದಾರೆ.
Vijaya Karnataka Web raveena-tandon


ಮಿ ಟೂ ಬಗ್ಗೆ ಮಾತನಾಡಿರುವ ರವೀನಾ ಟಂಡನ್, "ಈ ರೀತಿ ಸನ್ನಿವೇಶಗಳು ಮಹಿಳೆಯರಿಗೆ ಎದುರಾದಾಗ ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂದು ಗೊತ್ತಿಲ್ಲದ ಸಮಯ ಇತ್ತು. ಈ ಬಗ್ಗೆ ಮಾತನಾಡಲು ಈಗ ವೇದಿಕೆ ಸಿಕ್ಕಿದೆ. ನಮ್ಮ ಚಿತ್ರೋದ್ಯಮದಲ್ಲಿ ಆರೋಗ್ಯವಾದ ಸುರಕ್ಷಿತ ವಾತಾವರಣ ನಿರ್ಮಿಸಬೇಕಾಗಿದೆ" ಎಂದಿದ್ದಾರೆ.

"ಪ್ರತಿಯೊಬ್ಬರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಕೆಲವರು #MeToo ಅಭಿಯಾನದಿಂದ ಲಾಭ ಪಡೆಯುತ್ತಿದ್ದಾರೆ" ಎಂದಿದ್ದಾರೆ. ಮಿ ಟೂ ಅಭಿಯಾನ ಆರಂಭವಾದಾಗ ರವೀನಾ ಸಹ ಸಾಕಷ್ಟು ಬೆಂಬಲ ವ್ಯಕ್ತಪಡಿಸಿದ್ದು, ಸಂತ್ರಸ್ತರ ಪರವಾಗಿ ಧ್ವನಿ ಎತ್ತರಿಸಿದ್ದರು. ಬಾಲಿವುಡ್ ಮೌನವಾಗಿರುವುದನ್ನು ಪ್ರಶ್ನಿಸಿದ್ದರು. ಆದರೆ ಅದು ಈಗ ಎರಡು ಅಲಗಿನ ಕತ್ತಿಯಂತಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. [#MeToo ಸುದ್ದಿ ಕವರೇಜ್ ಬಗ್ಗೆ ವಿಕ ನೀತಿ]

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌