ಆ್ಯಪ್ನಗರ

ಸಾರಾ ಅಲಿ ಖಾನ್ ತಂದೆಯಾಗಿ ನಟಿಸಲಿದ್ದಾರೆ ಸೈಫ್‌ ಅಲಿ ಖಾನ್ !

ಇಮ್ತಿಯಾಜ್ ಅಲಿ ಖಾನ್ ನಿರ್ದೇಶನದ ''ಲವ್ ಆಜ್ ಕಲ್ 2'' ಚಿತ್ರದಲ್ಲಿ ಸಾರಾ ಅಲಿ ಖಾನ್ ತಂದೆಯಾಗಿ ಸೈಫ್‌ ಅಲಿ ಖಾನ್ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2009ರಲ್ಲಿ ಬಿಡುಗಡೆಯಾಗಿದ್ದ ''ಲವ್ ಆಜ್ ಕಲ್'' ಚಿತ್ರದಲ್ಲಿ ಸೈಫ್ ಅಲಿ ಖಾನ್ ಹೀರೋ ಆಗಿದ್ದರು.

Times Now 24 Jan 2019, 1:59 pm

ಹೈಲೈಟ್ಸ್‌:

  • ''ಲವ್ ಆಜ್ ಕಲ್ 2'' ಚಿತ್ರದಲ್ಲಿ ಸಾರಾ - ಸೈಫ್‌ ನಟನೆ?
  • ಸಾರಾ ತಂದೆಯಾಗಿ ನಟಿಸಲಿರುವ ಸೈಫ್‌ ಅಲಿ ಖಾನ್
  • ಕಾರ್ತಿಕ್ ಆರ್ಯನ್ - ಸಾರಾ ಅಭಿನಯದ ಚಿತ್ರ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಕಳೆದ ತಿಂಗಳಷ್ಟೇ ಬಿಡುಗಡೆಯಾದ ಅಭಿಷೇಕ್ ಕಪೂರ್ ಪ್ರಮುಖ ಪಾತ್ರ ವಹಿಸಿದ್ದ ಕೇದಾರನಾಥ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ಸಾರಾ ಅಲಿ ಖಾನ್, ಬಿ ಟೌನ್‌ನ ಫೇವರಿಟ್ ಆಗಿದ್ದಾಳೆ ಎಂದರೆ ತಪ್ಪಾಗಲಾರದು. ಅಲ್ಲದೆ, ಸಾರಾ ಎರಡನೇ ಚಿತ್ರ ಹಾಗೂ ರಣವೀರ್ ಸಿಂಗ್ ನಟನೆಯ ಸಿಂಬಾ ಸಹ 200 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದೆ.
ಈಗ, ಇಮ್ತಿಯಾಜ್ ಅಲಿ ಖಾನ್‌ ನಿರ್ದೇಶನದ ''ಲವ್ ಆಜ್ ಕಲ್ 2'' ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಹೀರೋ ಆಗಿ ನಟಿಸಲಿದ್ದು, ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ ಸಾರಾ ಅಲಿ ಖಾನ್ ತಂದೆಯಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಬಿ ಟೌನ್‌ನಲ್ಲಿ ಕೇಳಿ ಬರುತ್ತಿದೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್‌ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂದು ಮಾಧ್ಯಮ ಮೂಲಗಳು ಮಾಹಿತಿ ನೀಡಿವೆ.

ಹೀಗಾಗಿ, ಇದೇ ಮೊದಲ ಬಾರಿಗೆ ಸೈಫ್‌ ಅಲಿ ಖಾನ್ ತನ್ನ ಪುತ್ರಿ ಸಾರಾ ಜೊತೆ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಹಲವೆಡೆ ಕೇಳಿಬರುತ್ತಿದೆ. ಅಲ್ಲದೆ, ಸೈಫ್‌ ಅಲಿ ಖಾನ್‌ ಚಿತ್ರದಲ್ಲಿ ಬರೀ ಅತಿಥಿ ಪಾತ್ರವಲ್ಲ, ಪ್ರಮುಖ ಪಾತ್ರವೊಂದನ್ನೇ ನಿಭಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, 2019 ರ ಮಧ್ಯದಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ ಎಂದೂ ತಿಳಿದುಬಂದಿದೆ.



2009ರ ''ಲವ್ ಆಜ್ ಕಲ್'' ಚಿತ್ರದಲ್ಲಿ ರಿಷಿ ಕಪೂರ್ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಅದೇ ರೀತಿ, ಸೈಫ್ ಅಲಿ ಖಾನ್ ಸಹ ಆ ಚಿತ್ರದ ಸೀಕ್ವೆಲ್‌ ಆದ ''ಲವ್ ಆಜ್ ಕಲ್ 2'' ನಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಸಾರಾ ಹಾಗೂ ಕಾರ್ತಿಕ್ ಆರ್ಯನ್ ಜೋಡಿ ಸಹ ಜನರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಇತ್ತೀಚೆಗೆ ಕರಣ್ ಜೋಹರ್‌ನ 'ಕಾಫಿ ವಿತ್ ಕರಣ್' ಶೋನಲ್ಲಿ ಭಾಗಿಯಾಗಿದ್ದ ಸಾರಾ, ಕಾರ್ತಿಕ್‌ ಜೊತೆಗೆ ನಿಜವಾದ ಜೀವನದಲ್ಲಿ ಕಾಫಿ ಡೇಟ್‌ಗೆ ಹೋಗಲು ಇಷ್ಟಪಡುವುದಾಗಿಯೂ ಹೇಳಿದ್ದಳು.

ಆದರೆ, ಈ ಚಿತ್ರದ ಬಗ್ಗೆ ನಟಿ ಸಾರಾ ಆಗಲೀ ಅಥವಾ ನಟ ಕಾರ್ತಿಕ್ ಆಗಲೀ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌