ಆ್ಯಪ್ನಗರ

ರೇಖಾ-ಸಂಜಯ್‌ ಮದುವೆ ಗಾಸಿಪ್

ಬಾಲಿವುಡ್‌ ನಟ ಸಂಜಯ್‌ದತ್‌ ಹಾಗೂ ಎವರ್‌ ಗ್ರೀನ್ ಬ್ಯೂಟಿ ರೇಖಾ ವಿವಾಹವಾಗಿಲ್ಲ ಎಂದು ರೇಖಾ-'ದಿ ಅನ್‌ಟೋಲ್ಡ್‌ ಸ್ಟೋರಿ' ಬರಹಗಾರ ಯಾಸರ್‌ ಉಸ್ಮಾನ್ ಸ್ಪಷ್ಟ ಪಡಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 6 Mar 2017, 11:03 am
ಮುಂಬಯಿ: ಬಾಲಿವುಡ್‌ ನಟ ಸಂಜಯ್‌ದತ್‌ ಹಾಗೂ ಎವರ್‌ ಗ್ರೀನ್ ಬ್ಯೂಟಿ ರೇಖಾ ವಿವಾಹವಾಗಿಲ್ಲ ಎಂದು ರೇಖಾ-'ದಿ ಅನ್‌ಟೋಲ್ಡ್‌ ಸ್ಟೋರಿ' ಬರಹಗಾರ ಯಾಸರ್‌ ಉಸ್ಮಾನ್ ಸ್ಪಷ್ಟ ಪಡಿಸಿದ್ದಾರೆ.
Vijaya Karnataka Web rekha and sanjay marriage gossip
ರೇಖಾ-ಸಂಜಯ್‌ ಮದುವೆ ಗಾಸಿಪ್


ಕೆಲವೊಂದು ಮಾಧ್ಯಮಗಳು ಉಸ್ಮಾನ್ ಬರೆದ ಪುಸ್ತಕದಲ್ಲಿ ರೇಖಾ ಮತ್ತು ಸಂಜಯ್‌ದತ್ 1984ರಲ್ಲಿ ಮದುವೆಯಾಗಿದ್ದರು ಎಂದು ಹೇಳಲಾಗಿದೆ ಎಂದು ಪ್ರಸಾರ ಮಾಡಿದ್ದೆವು.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಬರಹಗಾರ ಆ ಸುದ್ದಿಯನ್ನು ಸಂಪೂರ್ಣ ತಳ್ಳಿ ಹಾಕಿದ್ದು 'ಆ ಪುಸ್ತಕವನ್ನು ಕಳೆದ ವರ್ಷವೇ ಪ್ರಕಟಿಸಲಾಗಿದೆ. ಪತ್ರಕರ್ತರು ಏನಾದರೂ ಹೇಳುವ ಮುಂಚೆ ಆ ಪುಸ್ತಕವನ್ನು ಸಂಪೂರ್ಣವಾಗಿ ಓದಬೇಕೆಂದು ಅಪೇಕ್ಷಿಸುತ್ತೇನೆ' ಎಂದು ಹೇಳಿದರು.

ಆ ಪುಸ್ತಕದಲ್ಲಿ ರೇಖಾ ಹೆಸರು ಜೊತೆ ಶೈಲೇಂದ್ರ ಸಿಂಗ್, ಕಮಲ್ ಹಾಸನ್, ನಿರ್ಮಾಪಕ ರಾಜೀವ್ ಕುಮಾರ್ ಹಾಗೂ ಸಂಜಯ್‌ದತ್‌ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ರೇಖಾ ಸಂಜಯ್‌ದತ್‌ರವರ ಕಷ್ಟದ ದಿನಗಳಲ್ಲಿ ಒಬ್ಬ ಒಳ್ಳೆಯ ಸ್ನೇಹಿತೆ ಆಗಿ ಆತನ ಜೊತೆಗಿದ್ದಳು ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌