ಆ್ಯಪ್ನಗರ

ಸಂಜು ರಿಯಲ್‌ ಸ್ಟೋರಿ ನಿರ್ಮಿಸಲಿರುವ ಆರ್‌ಜಿವಿ

ರಣಬೀರ್‌ ಕಪೂರ್‌ ಅಭಿನಯದ ಸಂಜು ಸಿನಿಮಾದ ಯಶಸ್ಸಿನಿಂದ ಪ್ರೇರಿತರಾಗಿರುವ ಸಿನಿಮಾ ನಿರ್ಮಾಪಕ ರಾಮ್‌ ಗೋಪಾಲ್‌ ವರ್ಮ ಇದೀಗ ಸಂಜಯ್‌ ದತ್‌ ಜೀವನದ ನೈಜ ಮತ್ತು ಜನರಿಗೆ ತುಂಬಾ ಕುತೂಹಲ ಇರುವ ವಿಷಯಗಳನ್ನು ಆಧರಿಸಿ ಸಿನಿಮಾ ಮಾಡಲಿದ್ದಾರೆ.

Vijaya Karnataka 21 Jul 2018, 11:25 am
ರಣಬೀರ್‌ ಕಪೂರ್‌ ಅಭಿನಯದ ಸಂಜು ಸಿನಿಮಾದ ಯಶಸ್ಸಿನಿಂದ ಪ್ರೇರಿತರಾಗಿರುವ ಸಿನಿಮಾ ನಿರ್ಮಾಪಕ ರಾಮ್‌ ಗೋಪಾಲ್‌ ವರ್ಮ ಇದೀಗ ಸಂಜಯ್‌ ದತ್‌ ಜೀವನದ ನೈಜ ಮತ್ತು ಜನರಿಗೆ ತುಂಬಾ ಕುತೂಹಲ ಇರುವ ವಿಷಯಗಳನ್ನು ಆಧರಿಸಿ ಸಿನಿಮಾ ಮಾಡಲಿದ್ದಾರೆ. ಸಂಜಯ್‌ ದತ್‌ ಅವರ ಇನ್ನೊಂದು ಬಯೋಪಿಕ್‌ ನಿರ್ಮಿಸಲು ತಾವು ನಿರ್ಧರಿಸಿದ್ದು, ಇದಕ್ಕೆ ಸಂಜು: ದ ರಿಯಲ್‌ ಸ್ಟೋರಿ ಎಂದು ಹೆಸರಿಡಲು ನಿರ್ಧರಿಸಿದ್ದೇನೆ. ಇದರ ಕೆಲಸ ಶೀಘ್ರವೇ ಆರಂಭವಾಗಲಿದೆ ಎಂದು ಅವರು ವಿವರಿಸಿದ್ದಾರೆ.
Vijaya Karnataka Web ram gopal verma new


ಈಗಿನ ಸಂಜು ಸಿನಿಮಾದಲ್ಲಿ ಸಂಜಯ್‌ ದತ್‌ ಅವರ ಡ್ರಗ್‌ ವ್ಯಸನ, ಅಪ್ಪ ಮತ್ತು ಮಗನ ಬಾಂಧವ್ಯ ಇತ್ಯಾದಿಗಳ ಮೇಲೆ ಹೆಚ್ಚು ಬೆಳಕು ಚೆಲ್ಲಲಾಗಿದೆ. ಇದರಲ್ಲಿ ಅವರನ್ನು ಹೀರೊ ಆಗಿ ಬಿಂಬಿಸಲಾಗಿದೆ. ಆದರೆ ಅವರ ಅಸಲಿ ಮುಖ ಬೇರೆಯೇ ಇದೆ ಎಂದು ಬಹುತೇಕ ಜನರು ಪ್ರತಿಕ್ರಿಯಿಸಿದ್ದರು. ಆದ್ದರಿಂದ ಆರ್‌ಜಿವಿ ನಿರ್ಮಿಸಲಿರುವ ಸಂಜಯ್‌ ದತ್‌ ಬಯೋಪಿಕ್‌ನಲ್ಲಿ ಸಂಜಯ್‌ ದತ್‌ರ ಅಸಲಿ ಮುಖ ತೋರಿಸುವ ಪ್ರಯತ್ನ ನಡೆಯಲಿದೆಯಂತೆ. ಮುಖ್ಯವಾಗಿ ಮುಂಬಯಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಸಂಜಯ್‌ ಪಾತ್ರ ಮತ್ತು ಆಮೇಲಿನ ಬೆಳವಣಿಗೆಗಳು ಈ ಸಿನಿಮಾದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌