ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ದುರಂತ ಅಂತ್ಯ ಕಂಡ ಸರಿಯಾಗಿ ಒಂದು ತಿಂಗಳ ನಂತರದಲ್ಲಿ ಅವರ ಗರ್ಲ್ಫ್ರೆಂಡ್ ರಿಯಾ ಚಕ್ರವರ್ತಿ ಮೌನ ಮುರಿದಿದ್ದಾರೆ. ಸುದೀರ್ಘ ಪತ್ರ ಬರೆದು ರಿಯಾ ಅವರು ಸುಶಾಂತ್ ಬಗ್ಗೆ ಅವರ ಭಾವನೆಗಳನ್ನು ಹೊರಹಾಕಿದ್ದರು.
ಪ್ರತಿದಿನ ನಿಮ್ಮಿಂದ ನಾನು ಕಲಿತಿದ್ದೇನೆ: ರಿಯಾ
ಇನ್ಸ್ಟಾಗ್ರಾಮ್ನಲ್ಲಿ ಸುಶಾಂತ್ ಬಗ್ಗೆ ರಿಯಾ ಚಕ್ರವರ್ತಿ ಮಾಹಿತಿ ಹಂಚಿಕೊಂಡಿದ್ದಾರೆ. 'ನನ್ನ ಭಾವನೆಗಳನ್ನು ಎದುರಿಸಲು ಇನ್ನೂ ನಾನು ಹರಸಾಹಸ ಮಾಡುತ್ತಿದ್ದೇನೆ. ನನ್ನ ಹೃದಯದಲ್ಲಿ ಸರಿಪಡಿಸಲಾಗದ ನೋವು ಮರಗಟ್ಟಿದೆ. ನಾನು ಪ್ರೀತಿಯಲ್ಲಿ ನಂಬಿಕೆ ಇಟ್ಟು, ಅದರ ಶಕ್ತಿ ತಿಳಿಸಿದ ಒಬ್ಬನೇ ವ್ಯಕ್ತಿ ಇವರು. ಸರಳ ಗಣಿತದ ಸಮೀಕರಣವು ಜೀವನದ ಅರ್ಥವನ್ನು ಹೇಗೆ ಅರ್ಥೈಸಬಲ್ಲದು ಎಂದು ನೀವು ನನಗೆ ಹೇಳಿಕೊಟ್ಟಿದ್ದೀರಿ ಮತ್ತು ನಾನು ಪ್ರತಿದಿನ ನಿಮ್ಮಿಂದ ಕಲಿತಿದ್ದೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ' ಎಂದು ರಿಯಾ ಹೇಳಿದ್ದಾರೆ.
ನನ್ನ ಶೂಟಿಂಗ್ ತಾರೆ ಸುಶಾಂತ್ ಸಿಂಗ್!
'ನೀವೀಗ ತುಂಬ ಶಾಂತಿಯಿರುವ ಜಾಗದಲ್ಲಿ ಇದ್ದೀರಿ ಎಂದು ಭಾವಿಸುತ್ತೇನೆ. ಚಂದ್ರ, ನಕ್ಷತ್ರಗಳು, ಗ್ಯಾಲಕ್ಸಿಗಳೆಲ್ಲವೂ 'ದಿ ಗ್ರೇಟೆಸ್ಟ್ ಫಿಸಿಸಿಸ್ಟ್'ನ್ನು ಬಾಚಿ ಸ್ವಾಗತಿಸುತ್ತವೆ. ಪರಾನುಭೂತಿ ಮತ್ತು ಸಂತೋಷದಿಂದ ತುಂಬಿರುವ ನೀವು ಶೂಟಿಂಗ್ ಸ್ಟಾರ್. ನನ್ನ ಶೂಟಿಂಗ್ ತಾರೆ ಮತ್ತೆ ನನ್ನ ಬಳಿಗೆ ಮರಳಿ ಬರಲಿ ಎಂದು ಬಯಸುತ್ತೇನೆ' ರಿಯಾ ಹೇಳಿದ್ದಾರೆ.
ವಿಶ್ವ ಕಂಡ ಶ್ರೇಷ್ಠ ಅದ್ಭುತ ನೀವು!
'ಸುಂದರವಾದ ವ್ಯಕ್ತಿ ಹೇಗಿರುತ್ತದ್ದರೋ ಆ ಗುಣಗಳೆಲ್ಲವೂ ನಿಮಗಿತ್ತು. ವಿಶ್ವ ಕಂಡ ಶ್ರೇಷ್ಠ ಅದ್ಭುತ ನೀವು. ನಮ್ಮಿಬ್ಬರ ಮಧ್ಯೆ ಇದ್ದ ಪ್ರೀತಿ ನಿಜವಾಗಿತ್ತು. ನಮ್ಮಿಬ್ಬರ ಆಚೆಯೂ ಈ ಪ್ರೀತಿಯಿದೆ ಎಂದು ನೀವು ಹೇಳಿದ್ದಿರಿ. ಎಲ್ಲವನ್ನು ಮುಕ್ತವಾದ ಹೃದಯದಿಂದ ಪ್ರೀತಿಸಿದಿರಿ. ನಮ್ಮ ಲವ್ ಏನೆಂದು ನೀವು ತೋರಿಸಿದ್ದೀರಿ. ನೀವು ಹೋಗಿ ಒಂದು ತಿಂಗಳಾಯ್ತು, ಆದರೆ ಜೀವನಪೂರ್ತಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ' ಎಂದು ರಿಯಾ ಪತ್ರ ಬರೆದಿದ್ದಾರೆ.
Also Read-ಬೆಂಗಳೂರಿನ ರಿಯಾ ಚಕ್ರವರ್ತಿಗೆ ಸುಶಾಂತ್ ಪರಿಚಯವಾಗಿದ್ದು ಯಾವಾಗ? ಈ ನಟಿ ಕುರಿತ ಪೂರ್ಣ ಮಾಹಿತಿ ಇಲ್ಲಿದೆ!
9 ಗಂಟೆಗಳ ಕಾಲ ರಿಯಾ ತನಿಖೆ ಮಾಡಿದ ಪೊಲೀಸರು!
ಸುಶಾಂತ್ ಸಿಂತ್ ರಜಪೂತ್ ಮತ್ತು ನಟಿ ರಿಯಾ ಚಕ್ರವರ್ತಿ ನಡುವೆ ಒಳ್ಳೆಯ ಒಡನಾಟ ಇತ್ತು ಎಂಬುದು ಇಡೀ ಬಾಲಿವುಡ್ಗೆ ಗೊತ್ತಿರುವ ವಿಚಾರ. ಸದಾ ಇವರಿಬ್ಬರೂ ಜೊತೆಯಾಗಿ ಕಾಲ ಕಳೆಯುತ್ತಿದ್ದರು. ಸುಶಾಂತ್ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ರಿಯಾ ಅವರನ್ನು 9 ಗಂಟೆಗಳ ಕಾಲ ರಿಯಾ ಅವರನ್ನು ವಿಚಾರಣೆ ಮಾಡಲಾಗಿದೆ.
Also Read-ಸುಶಾಂತ್-ರಿಯಾ ಸಂಬಂಧದ ಬಗ್ಗೆ ಸತ್ಯ ಬಾಯಿಬಿಟ್ಟು, ನಂತರ ಪೋಸ್ಟ್ ಡಿಲಿಟ್ ಮಾಡಿದ ಮಹಿಳೆ!