ಆ್ಯಪ್ನಗರ

ತನ್ನ ಫಾಮ್‍ಹೌಸ್ ಸಮೀಪದ ಗ್ರಾಮಗಳಿಗೆ ಆಪತ್ಬಾಂಧವನಾದ ಸಲ್ಮಾನ್ ಖಾನ್

ನಟ ಸಲ್ಮಾನ್ ಖಾನ್ ಸದ್ದಿಲ್ಲದಂತೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಲಾಕ್‍ಡೌನ್, ಕೊರೊನಾ ಮಾಹಾಮಾರಿ ಕಾರಣ ಸಂಕಷ್ಟಕ್ಕೀಡಾಗಿರುವವರಿಗೆ ಮುಂಚೂಣಿಯಲ್ಲಿ ನಿಂತು ಸಹಾಯಹಸ್ತ ಚಾಚಿದ್ದಾರೆ. ತನ್ನ ಫಾಮ್‌ಹೌಸ್ ಸಮೀಪದ ಹಳ್ಳಿಗಳಿಗೆ ಬೇಕಾದ ಆಹಾರ ಸಾಮಗ್ರಿಯನ್ನು ನೀಡಿದ್ದಾರೆ.

Vijaya Karnataka Web 4 May 2020, 9:56 pm

ಕೊರೊನಾ ಮಹಾಮಾರಿ ಕಾರಣ ಲಾಕ್‌ಡೌನ್ ಆರಂಭವಾದ ದಿನದಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಹಲವಾರು ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಸುಮಾರು 25 ಸಾವಿರ ಮಂದಿ ಸಿನಿ ಕಾರ್ಮಿಕರಿಗೆ ಆರ್ಥಿಕ ಸಹಾಯ ಮಾಡುತ್ತಿರುವುದಾಗಿ ತಿಳಿಸಿ ಎಲ್ಲರ ಖಾತೆಗಳಿಗೂ ಹಣ ವರ್ಗಾಯಿಸಿದರು.
Vijaya Karnataka Web ಸಲ್ಮಾನ್ ಖಾನ್


ಅಷ್ಟೇ ಅಲ್ಲದೆ ಈ ಕಷ್ಟ ಕಾಲದಲ್ಲಿ ಮುಂಚೂಣಿಯಲ್ಲಿ ನಿಂತು ಮಾದರಿಯಾಗಿದ್ದಾರೆ. ಇತ್ತೀಚೆಗೆ ಜನರಿಗಾಗಿ ಹೋರಾಡುತ್ತಿರುವ ಯೋಧರಿಗೆ ಅವರೇ ಒಂದು ಹಾಡನ್ನು ಹಾಡಿ ಗೌರವ ಸೂಚಿಸಿದ್ದರು. ಇದೀಗ ತನ್ನ ಫಾಮ್‌ಹೌಸ್ ಸಮೀಪದಲ್ಲಿನ ಗ್ರಾಮಗಳಿಗೆ ಸಹ ಅವರು ಸಹಾಯ ಹಸ್ತ ಚಾಚಿದ್ದಾರೆ.

ಸಲ್ಮಾನ್ ಖಾನ್ ಇತ್ತೀಚೆಗೆ ತನ್ನ ಪಾನ್ವೇಲ್ ಫಾಮ್‌ಹೌಸ್ ಸಮೀಪದಲ್ಲಿರುವ ಗ್ರಾಮಗಳಲ್ಲಿ ಸಂಕಷ್ಟಕ್ಕೀಡಾಗಿರುವವರಿಗೆ ಆಹಾರ ಸಾಮಗ್ರಿ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಒಂದರಲ್ಲಿ, ಸಲ್ಮಾನ್ ಖಾನ್ ಎತ್ತಿನ ಗಾಡಿ ಹಾಗೂ ಟ್ರ್ಯಾಕ್ಟರ್‌ನಲ್ಲಿ ಅಗತ್ಯ ಸಾಮಗ್ರಿಗಳನ್ನು ತುಂಬಿ ಸಮೀಪದ ಗ್ರಾಮಗಳಿಗೆ ರವಾನಿಸುತ್ತಿರುವುದನ್ನು ಕಾಣಬಹುದು.

ಹೀಗೆ ಮಾಡಿ ಸಾಕು ಕೊರೊನಾ ಸುಳಿಯಲ್ಲ ಅಂದ್ರು ಸಲ್ಮಾನ್ ಖಾನ್!

View this post on Instagram @jacquelinef143 @vanturiulia @rahulnarainkanal @imkamaalkhan @niketan_m @waluschaa @abhiraj88 A post shared by Salman Khan (@beingsalmankhan) on May 3, 2020 at 8:50am PDT

ಈ ವಿಡಿಯೋದಲ್ಲಿ ಬಾಲಿವುಡ್ ತಾರೆಗಳಾದ ಜಾಕ್ವೆಲಿನ್ ಫರ್ನಾಂಡಿಸ್, ಲೂಲಿಯಾ ವಂತೂರ್, ಕಮಲ್ ಖಾನ್, ನಿಕೇತನ್ ಮಾಧೋಕ್, ವಾಲೂಸ್ಚ್ ಡಿಸೋಜಾ ಇನ್ನಿತರರು ಸಹ ಅಗತ್ಯ ಸಾಮಗ್ರಿಯನ್ನು ವಾಹನಗಳಿಗೆ ಲೋಡ್ ಮಾಡುತ್ತಿರುವುದನ್ನು ಕಾಣಬಹುದು. ಈ ಕೆಲಸಕ್ಕೆ ತನಗೆ ಸಹಾಯ ಮಾಡಿದ ಎಲ್ಲರಿಗೂ ಸಲ್ಮಾನ್ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌