ಆ್ಯಪ್ನಗರ

ನಟ ಸಲ್ಮಾನ್ ಖಾನ್‌ಗೆ ಕೊನೆಗೂ ಹುಡುಗಿ ಸಿಕ್ಕಿದಳಂತೆ

ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಎಂದು ಕರೆಸಿಕೊಂಡಿರುವ ನಟ ಸಲ್ಮಾನ್ ಖಾನ್‌ಗೆ ಕಡೆಗೂ ಹುಡುಗಿ ಸಿಕ್ಕಿದ್ದಾರಂತೆ. ಹಾಗಂತ ಸ್ವತಃ ಅವರೇ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

Vijaya Karnataka Web 6 Feb 2018, 2:05 pm
ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಎಂದು ಕರೆಸಿಕೊಂಡಿರುವ ನಟ ಸಲ್ಮಾನ್ ಖಾನ್‌ಗೆ ಕಡೆಗೂ ಹುಡುಗಿ ಸಿಕ್ಕಿದ್ದಾರಂತೆ. ಹಾಗಂತ ಸ್ವತಃ ಅವರೇ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಐವತ್ತರ ವರ್ಷ ಗಡಿ ದಾಟಿರುವ ಸಲ್ಮಾನ್ 'ಮುಜೆ ಲಡ್ಕಿ ಮಿಲ್ ಗಯಿ' ಎಂದು ಟ್ವೀಟಿಸುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.
Vijaya Karnataka Web salman khan tweets mujhe ladki mil gayi
ನಟ ಸಲ್ಮಾನ್ ಖಾನ್‌ಗೆ ಕೊನೆಗೂ ಹುಡುಗಿ ಸಿಕ್ಕಿದಳಂತೆ


ಆದರೆ ಸಲ್ಮಾನ್ ಮಾಡಿರುವ ಈ ಟ್ವೀಟ್ ಮದುವೆಗೆ ಸಂಬಂಧಿಸಿದ್ದೇ ಅಲ್ಲವೇ ಎಂಬ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಸ್ವಲ್ಪ ಕಾಲದಿಂದ ಲುಲಿಯಾ ವಾಂಟೂರ್ ಜತೆಗೆ ಆತ್ಮೀಯವಾಗಿದ್ದ ಸಲ್ಮಾನ್ ಬಳಿಕ ಆಕೆಯಿಂದ ದೂರ ಸರಿದಿದ್ದರು. ಲುಲಿಯಾ ಸಹಾ ಸಲ್ಮಾನ್ ಒಳ್ಳೆಯ ಸ್ನೇಹಿತ ಎಂದಿದ್ದರು. ಆ ಮೂಲಕ ಇಬ್ಬರೂ ದೂರವಾಗಿದ್ದಾರೆಂದು ಅಭಿಮಾನಿಗಳು ಸಹ ಭಾವಿಸಿದರು.

Mujhe ladki mil gayi — Salman Khan (@BeingSalmanKhan) February 6, 2018 ಇದೀಗ ಸಲ್ಲು ಹುಡುಗಿ ಸಿಕ್ಕಿದ್ದಾಳೆ ಎಂದು ಟ್ವೀಟ್ ಮಾಡುವ ಮೂಲಕ ಅವರ ಮದುವೆ ಬಗ್ಗೆ ಬಿಸಿಬಿಸಿ ಚರ್ಚೆಗೆ ಶುರುವಾಗಿದೆ. ಇತ್ತೀಚೆಗೆ ತೆರೆಕಂಡ 'ಟೈಗರ್ ಜಿಂದಾ ಹೈ' ಸಿನಿಮಾ ಮೂಲಕ ಭರ್ಜರಿ ಹಿಟ್ ದಾಖಲಿಸಿರುವ ಸಲ್ಮಾನ್ ಇದೀಗ 'ರೇಸ್ 3' ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ರೆಮೊ ಡಿಸೋಜಾ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದಾಗಿದೆ. ಜಾಕ್ವೆಲಿನ್ ಫರ್ನಾಂಡೀಸ್, ಡೈಸಿ ಶಾ ಚಿತ್ರದ ಇಬ್ಬರು ನಾಯಕಿಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌