ಆ್ಯಪ್ನಗರ

ಹಿಂದಿಯಲ್ಲೊಂದು 'ಓಂ' ಸಿನಿಮಾ! ನಾಯಕಿಯಾಗಿ ಆಯ್ಕೆ ಆದ 'ದಿಲ್‌ ಬೇಚಾರಾ' ನಟಿ ಸಂಜನಾ

ಮೊದಲ ಸಿನಿಮಾದಲ್ಲಿ ಸುಶಾಂತ್‌ ಸಿಂಗ್‌ ರಜಪೂತ್‌ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಸಂಜನಾ ಸಂಘಿ ಅವರಿಗೆ ಈಗ ಸಖತ್‌ ಬೇಡಿಕೆ ಇದೆ. ಬಾಲಿವುಡ್‌ನಲ್ಲಿ ತಯಾರಾಗಲಿರುವ 'ಓಂ' ಚಿತ್ರಕ್ಕೆ ಅವರು ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

Vijaya Karnataka Web 23 Nov 2020, 2:50 pm
ಸಿನಿಪ್ರೇಕ್ಷಕರ ಕಿವಿಗೆ 'ಓಂ' ಚಿತ್ರದ ಹೆಸರು ಕೇಳುತ್ತಿದ್ದಂತೆಯೇ ಥ್ರಿಲ್‌ ಆಗುತ್ತಾರೆ. ಒಂದು ಕಾಲದಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದ ಸಿನಿಮಾ ಅದು. ಈಗಲೂ 'ಓಂ' ಚಿತ್ರಕ್ಕೆ ಅಷ್ಟೇ ಹವಾ ಇದೆ. ಈಗ ಮತ್ತೆ ಅದೇ ಶೀರ್ಷಿಕೆಯನ್ನು ಬಳಸಿಕೊಂಡು ಬಾಲಿವುಡ್‌ನಲ್ಲಿ ಸಿನಿಮಾ ಮಾಡಲಾಗುತ್ತಿದೆ. ಟೈಟಲ್‌ ಕಾರಣದಿಂದಲೇ ಸಿನಿಪ್ರಿಯರ ವಲಯದಲ್ಲಿ ಇದು ಸಖತ್‌ ನಿರೀಕ್ಷೆ ಸೃಷ್ಟಿಸಿದೆ.
Vijaya Karnataka Web ಆದಿತ್ಯ ರಾಯ್‌ ಕಪೂರ್‌ ಸಂಜನಾ ಸಂಘಿ


'ಓಂ: ದಿ ಬ್ಯಾಟಲ್‌ ವಿಥಿನ್‌' ಚಿತ್ರಕ್ಕೆ ಆದಿತ್ಯ ರಾಯ್‌ ಕಪೂರ್‌ ನಾಯಕ. ಅವರು ನಟಿಸಿರುವ 'ಲುಡೋ' ಸಿನಿಮಾ ಈ ವರ್ಷ ಓಟಿಟಿಯಲ್ಲಿ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆ ಚಿತ್ರದ ಯಶಸ್ಸಿನ ಬಳಿಕ ಅವರು 'ಓಂ' ಸಿನಿಮಾದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾಗೆ ನಾಯಕಿಯ ಆಯ್ಕೆ ಪ್ರಕ್ರಿಯೆ ಕೂಡ ಮುಗಿದಿದೆ. ಆದಿತ್ಯ ರಾಯ್‌ ಕಪೂರ್‌ಗೆ ಜೋಡಿಯಾಗಿ ಸಂಜನಾ ಸಂಘಿ ನಟಿಸಲಿದ್ದಾರೆ.

ಸುಶಾಂತ್‌ ಸಿಂಗ್‌ ರಜಪೂತ್‌ ನಟನೆಯ 'ದಿಲ್‌ ಬೇಚಾರಾ' ಸಿನಿಮಾ ಮೂಲಕ ಸಂಜನಾ ಸಂಘಿ ಬಾಲಿವುಡ್‌ಗೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ಅವರಿಗೆ ದೊಡ್ಡಮಟ್ಟದ ಯಶಸ್ಸು ಸಿಕ್ಕಿತು. ಈಗ ಎರಡನೇ ಸಿನಿಮಾಗೆ ಸಹಿ ಹಾಕಿದ್ದಾರೆ. 'ದಿಲ್‌ ಬೇಚಾರಾ' ಬಳಿಕ ಹಲವು ಸ್ಕ್ರಿಪ್ಟ್‌ಗಳನ್ನು ಕೇಳಿದ್ದ ಅವರಿಗೆ ಯಾವುದೂ ಇಷ್ಟ ಆಗಿರಲಿಲ್ಲ. ಒಂದು ಒಳ್ಳೆಯ ಕಥೆ ಮತ್ತು ಪಾತ್ರಕ್ಕಾಗಿ ಕಾಯುತ್ತಿದ್ದ ಅವರಿಗೆ 'ಓಂ' ಸಿನಿಮಾದ ಕಥೆ ತುಂಬ ಇಷ್ಟ ಆಗಿದೆ.

also read: ಅದ್ವಿತೀಯ ದಾಖಲೆ ಸೃಷ್ಟಿಸಿದ ಸುಶಾಂತ್ ಸಿಂಗ್ ನಟನೆಯ 'ದಿಲ್‌ ಬೇಚಾರಾ' ಸಿನಿಮಾ!

ಮೊದಲ ಸಿನಿಮಾದಲ್ಲಿ ಕ್ಯಾನ್ಸರ್ ಪೀಡಿತ ಯುವತಿಯ ಪಾತ್ರದಲ್ಲಿ ಸಂಜನಾ ಕಾಣಿಸಿಕೊಂಡಿದ್ದರು. ಆದರೆ ಈಗ 'ಓಂ' ಚಿತ್ರದಲ್ಲಿ ಸಂಪೂರ್ಣ ಭಿನ್ನ ಅವತಾರ ತಾಳಲಿದ್ದಾರೆ. ಇದರಲ್ಲಿ ಅವರಿಗೆ ಕೆಲವು ಆ್ಯಕ್ಷನ್ ದೃಶ್ಯಗಳು ಕೂಡ ಇವೆಯಂತೆ. ಅದಕ್ಕಾಗಿ ಈಗಾಗಲೇ ಅವರು ತಯಾರಿ ಕೂಡ ಶುರುಮಾಡಿಕೊಂಡಿದ್ದಾರೆ. ಈ ಪಾತ್ರ ತಮಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬ ಚಾಲೆಂಜಿಂಗ್‌ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

also read: ಸುಶಾಂತ್‌ ವಿರುದ್ಧದ ಮೀಟೂ ಆರೋಪದ ಬಗ್ಗೆ ಸತ್ಯ ಒಪ್ಪಿಕೊಂಡು ಮುಂಬೈ ತೊರೆದ ನಟಿ ಸಂಜನಾ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌