ಆ್ಯಪ್ನಗರ

ಕತ್ರಿನಾ ಕೈಫ್‌ ಸ್ಥಾನಕ್ಕೆ ಸಾರಾ ಆಲಿ ಖಾನ್‌

ಬಿಗ್‌ ಬಜೆಟ್‌ನ ಡಾನ್ಸ್‌ ಸಿನಿಮಾವೊಂದರಲ್ಲಿ ಕತ್ರಿನಾ ಕೈಫ್‌ ನಿರ್ಗಮನದಿಂದ ತೆರವಾದ ನಾಯಕಿ ಸ್ಥಾನಕ್ಕೆ ಸೈಫ್‌ ಆಲಿ ಖಾನ್‌ ಪುತ್ರಿ ಸಾರಾ ...

Vijaya Karnataka 3 Jan 2019, 5:00 am
ಬಿಗ್‌ ಬಜೆಟ್‌ನ ಡಾನ್ಸ್‌ ಸಿನಿಮಾವೊಂದರಲ್ಲಿ ಕತ್ರಿನಾ ಕೈಫ್‌ ನಿರ್ಗಮನದಿಂದ ತೆರವಾದ ನಾಯಕಿ ಸ್ಥಾನಕ್ಕೆ ಸೈಫ್‌ ಆಲಿ ಖಾನ್‌ ಪುತ್ರಿ ಸಾರಾ ಆಲಿ ಖಾನ್‌ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಸ್ಥಾನಕ್ಕೆ ಶ್ರದ್ಧಾ ಕಪೂರ್‌ ಹೆಸರು ಕೂಡಾ ಕೇಳಿ ಬಂದಿದೆಯಾದರೂ ಇತ್ತೀಚೆಗೆ ಕೇದಾರನಾಥ್‌ ಮತ್ತು ಸಿಂಬದಲ್ಲಿ ಸಾರಾ ಅಭಿನಯ ನೋಡಿ ಇಂಪ್ರೆಸ್‌ ಆಗಿರುವ ಈ ಸಿನಿಮಾದ ನಿರ್ದೇಶಕರು ಸಾರಾಗೆ ನಾಯಕಿ ಪಾತ್ರದ ಆಫರ್‌ ನೀಡಲು ನಿರ್ಧರಿಸಿದ್ದಾರಂತೆ.
Vijaya Karnataka Web sara ali khan pairs with varun dhawan
ಕತ್ರಿನಾ ಕೈಫ್‌ ಸ್ಥಾನಕ್ಕೆ ಸಾರಾ ಆಲಿ ಖಾನ್‌


ಕೊರಿಯೊಗ್ರಾಫರ್‌ ರೆಮೊ ಡಿಸೋಜಾ ನಿರ್ದೇಶನದ ಈ ಸಿನಿಮಾದಲ್ಲಿ ವರುಣ್‌ ಧವನ್‌ ನಾಯಕ. ಅವರಿಗೆ ಬಾಲಿವುಡ್‌ನ ಸದ್ಯದ ಹೊಸಮುಖ ಸಾರಾ ಆಲಿ ಖಾನ್‌ ಉತ್ತಮ ಜೋಡಿಯಾಗಬಲ್ಲರು ಎಂದು ಚಿತ್ರತಂಡ ಅಭಿಪ್ರಾಯಪಟ್ಟಿದೆ. ಇನ್ನೂ ಟೈಟಲ್‌ ಇಡದ ಈ ಸಿನಿಮಾದಲ್ಲಿ ಪ್ರಭುದೇವ್‌ ಕೂಡಾ ಇರಲಿದ್ದು, ನಾಯಕಿ ಸ್ಥಾನಕ್ಕೆ ಸಾರಾ ಮಾತ್ರವಲ್ಲದೆ, ಜಾಕ್ವೆಲಿನ್‌ ಫೆರ್ನಾಂಡಿಸ್‌, ಕೃತಿ ಸನನ್‌ ಮುಂತಾದವರೂ ಸ್ಪರ್ಧೆಯಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌