ಆ್ಯಪ್ನಗರ

ವಿಕ್ಕಿ ಸಿನಿಮಾ ಆಫರ್‌ ನಿರಾಕರಿಸಿದ ಸಾರಾ ಆಲಿ ಖಾನ್‌

ಉರಿ ಸಿನಿಮಾ ನಟ ವಿಕ್ಕಿ ಕೌಶಲ್‌ ನಟನೆಯ ಫ್ರೀಡಂ ಫೈಟರ್‌ ಉಧಾಮ್‌ ಸಿಂಗ್‌ ಬಯೋಪಿಕ್‌ನಲ್ಲಿ ಅಭಿನಯಿಸಲು ಸಾರಾ ಆಲಿ ಖಾನ್.

Vijaya Karnataka 13 Mar 2019, 8:31 pm
ಉರಿ ಸಿನಿಮಾ ನಟ ವಿಕ್ಕಿ ಕೌಶಲ್‌ ನಟನೆಯ ಫ್ರೀಡಂ ಫೈಟರ್‌ ಉಧಾಮ್‌ ಸಿಂಗ್‌ ಬಯೋಪಿಕ್‌ನಲ್ಲಿ ಅಭಿನಯಿಸಲು ಸಾರಾ ಆಲಿ ಖಾನ್‌ ನಿರಾಕರಿಸಿದ್ದಾರೆ. ಈ ಸಿನಿಮಾ ತಂಡ ತಮ್ಮ ಚಿತ್ರದಲ್ಲಿ ನಟಿಸುವಂತೆ ಸಾರಾಗೆ ಆಫರ್‌ ನೀಡಿತ್ತು. ಆದರೆ ಅವರು, ಸದ್ಯಕ್ಕೆ ತಾನು ಪ್ರಾಯೋಗಿಕ ಮತ್ತು ಟ್ರೆಂಡಿ ಪಾತ್ರಗಳ ನಿರೀಕ್ಷೆಯಲ್ಲಿರುವುದರಿಂದ ಬಯೋಪಿಕ್‌ನಲ್ಲಿ ನಟಿಸಲಾರೆ ಎಂದು ಹೇಳಿದ್ದಾರೆ.
Vijaya Karnataka Web sara


ಕೇದಾರನಾಥ್‌ ಮತ್ತು ಸಿಂಬಾ ಸಿನಿಮಾಗಳ ನಂತರ ಬಹು ಬೇಡಿಕೆಯ ನಟಿಯಾಗಿರುವ ಸಾರಾ ಈಗ ಇಮ್ತಿಯಾಜ್‌ ಆಲಿ ಖಾನ್‌ ನಿರ್ದೇಶನದ ಲವ್‌ ಆಜ್‌ ಕಲ್‌ 2 ಸಿನಿಮಾ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ.

ಈ ಸಿನಿಮಾದ ಪ್ರಿಕ್ವೆಲ್‌ನಲ್ಲಿ ಅವರ ತಂದೆ ಸೈಫ್‌ ಆಲಿ ಖಾನ್‌ ನಾಯಕರಾಗಿದ್ದರು. ಸಿಕ್ವೆಲ್‌ನಲ್ಲಿ ಕಾರ್ತಿಕ್‌ ಆರ್ಯನ್‌ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಡೇಟ್ಸ್‌ ಉಧಾಮ್‌ ಸಿಂಗ್‌ ಸಿನಿಮಾ ಡೇಟ್ಸ್‌ ಜತೆ ಕ್ಲ್ಯಾಷ್‌ ಆಗುವ ಕಾರಣಕ್ಕೂ ಸಾರಾ ಆಲಿ ಖಾನ್‌ ಈ ಸಿನಿಮಾ ಆಫರ್‌ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌