ಆ್ಯಪ್ನಗರ

ಬದಲಾಯ್ತು ಶಾರುಖ್‌ ಖಾನ್‌ ಹೆಸರು! ರಾಜ್‌ ಮಲ್ಹೋತ್ರಾ ಎಂದು ಹೆಸರು ಇಟ್ಟುಕೊಂಡಿದ್ದೇಕೆ?

ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ವೃತ್ತಿಜೀವನ ನಿಧಾನಗತಿಯಲ್ಲಿ ಸಾಗುತ್ತಿದೆ. ಅವರು ದೊಡ್ಡ ಯಶಸ್ಸು ಕಾಣದೇ ಬಹಳ ದಿನಗಳಾಗಿವೆ. ಈ ಸಂದರ್ಭದಲ್ಲಿ ಹೆಸರು ಬದಲಾಯಿಸಿಕೊಳ್ಳುವ ಮೂಲಕ ಅವರು ಸುದ್ದಿ ಆಗಿದ್ದಾರೆ.

Vijaya Karnataka Web 20 Oct 2020, 12:35 pm
ದೇಶಾದ್ಯಂತ ಶಾರುಖ್‌ ಖಾನ್‌ ಎಂಬ ಹೆಸರಿಗೆ ಮತ್ತೊಮ್ಮೆ ಪರಿಚಯ ಬೇಕಿಲ್ಲ. ಅಷ್ಟರಮಟ್ಟಿಗೆ ಅವರು ಫೇಮಸ್‌. ಭಾರತ ಮಾತ್ರವಲ್ಲದೆ ವಿದೇಶದಲ್ಲಿರುವ ಅಭಿಮಾನಿಗಳಿಗೂ ಶಾರುಖ್‌ ಖಾನ್‌ ಹೆಸರು ಚಿರಪರಿಚಿತ. ಆದರೆ ಅಂಥ ಕಿಂಗ್‌ ಖಾನ್‌ ಈಗ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ! ರಾಜ್‌ ಮಲ್ಹೋತ್ರಾ ಎಂದು ಹೆಸರು ಇಟ್ಟುಕೊಂಡಿದ್ದಾರೆ! ಯಾಕೆ?
Vijaya Karnataka Web ಶಾರುಖ್‌ ಖಾನ್‌


ಅಷ್ಟಕ್ಕೂ ಶಾರುಖ್‌ ಖಾನ್‌ ಅವರು ಹೆಸರು ಬದಲಾಯಿಸಿಕೊಂಡಿರುವುದು ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ. ಅಂದರೆ ಟ್ವಿಟರ್‌ ಖಾತೆಯಲ್ಲಿ ತಮ್ಮ ಹೆಸರನ್ನು ರಾಜ್‌ ಮಲ್ಹೋತ್ರಾ ಎಂದು ಬದಲಾಯಿಸಿಕೊಂಡಿದ್ದಾರೆ. ಅದಕ್ಕೆ ಬಲವಾದ ಕಾರಣ ಕೂಡ ಇದೆ. ನಟಿ ಕಾಜೋಲ್‌ ಜೊತೆ ಅವರು ನಟಿಸಿದ್ದ 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರ ಈಗ 25 ವರ್ಷಗಳನ್ನು ಪೂರೈಸಿದೆ. ಈ ಸಲುವಾಗಿ ಅವರು ಹೆಸರು ಬದಲಾಯಿಸಿಕೊಂಡಿದ್ದಾರೆ.

'DDLJ' ಸಿನಿಮಾದಲ್ಲಿ ರಾಜ್‌ ಮಲ್ಹೋತ್ರಾ ಎಂಬ ಪಾತ್ರವನ್ನು ಶಾರುಖ್‌ ನಿಭಾಯಿಸಿದ್ದರು. ಅದು ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. 1995ರ ಅ.20ರಂದು ಬಿಡುಗಡೆಯಾಗಿದ್ದ ಆ ಚಿತ್ರ, 2020ರ ಅ.20ಕ್ಕೆ ಸರಿಯಾಗಿ 25 ವರ್ಷ ಪೂರೈಸಿದೆ. ಆ ಸಂತೋಷಕ್ಕೆ ಟ್ವಿಟರ್‌ನಲ್ಲಿ ತಮ್ಮ ಹೆಸರನ್ನು ರಾಜ್‌ ಮಲ್ಹೋತ್ರಾ ಎಂಬ ಬದಲಾಯಿಸಿಕೊಳ್ಳುವ ಮೂಲಕ ಶಾರುಖ್‌ ಸಂಭ್ರಮಿಸಿದ್ದಾರೆ. ಅದೇ ರೀತಿ ಕಾಜೋಲ್‌ ಕೂಡ ಸಿಮ್ರನ್‌ ಎಂದು ಹೆಸರು ಚೇಂಚ್‌ ಮಾಡಿಕೊಂಡಿದ್ದಾರೆ.

also read: DDLJ ಚಿತ್ರಕ್ಕೆ 25 ವರ್ಷದ ಸಂಭ್ರಮ: ಲಂಡನ್‌ನಲ್ಲಿ ಅನಾವರಣ ಆಗಲಿದೆ ಶಾರುಖ್‌ & ಕಾಜೋಲ್‌ ಪ್ರತಿಮೆ!

ಇನ್ನೊಂದು ಗುಡ್‌ನ್ಯೂಸ್‌ ಏನೆಂದರೆ, ಶಾರುಖ್‌ ಮತ್ತು ಕಾಜೋಲ್‌ ಅವರ ಪ್ರತಿಮೆಯನ್ನು ಲಂಡನ್‌ನಲ್ಲಿ ಅನಾವರಣಗೊಳಿಸಲಾಗುತ್ತಿದೆ! ಲಂಡನ್‌ನಲ್ಲಿಯೂ ಇದರ ಶೂಟಿಂಗ್‌ ಆಗಿತ್ತು. ಅಲ್ಲಿ ಚಿತ್ರೀಕರಿಸಿದ ಒಂದು ದೃಶ್ಯದ ರೀತಿಯಲ್ಲಿಯೇ ಇಬ್ಬರ ಪ್ರತಿಮೆ ನಿರ್ಮಾಣ ಆಗಲಿದೆ. ಲಂಡನ್‌ನ Leicester Squareನಲ್ಲಿ ಈಗಾಗಲೇ ಅನೇಕ ಕ್ಲಾಸಿಕ್‌ ಸಿನಿಮಾಗಳ ಪಾತ್ರದ ಪ್ರತಿಮೆಗಳಿವೆ. ಅವುಗಳ ಸಾಲಿಗೆ ಶಾರುಖ್‌ ಮತ್ತು ಕಾಜೋಲ್‌ ಪ್ರತಿಮೆಗಳು ಕೂಡ ಸೇರಿಕೊಳ್ಳಲಿವೆ. ಕಂಚಿನಿಂದ ನಿರ್ಮಾಣಗೊಂಡ ಈ ಪ್ರತಿಮೆಗಳ ರೂಪದಲ್ಲಿ 'DDLJ' ಸಿನಿಮಾದ 25ನೇ ವರ್ಷದ ಸಂಭ್ರಮವನ್ನು ಆಚರಿಸಲಾಗುತ್ತಿದೆ.

also read: ಕಪ್ಪು ಮೈಬಣ್ಣದವರು ಎಂಬ ಕಾರಣಕ್ಕೆ ಶಾರುಖ್‌ ಖಾನ್‌ ಪುತ್ರಿ ಸುಹಾನಾಗೆ ತೀವ್ರ ಅವಮಾನ!


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌