ಆ್ಯಪ್ನಗರ

ಹೊಸ ಚಿತ್ರದಲ್ಲಿ ಶಾರುಖ್‌ ಖಾನ್‌ ನೀಡಲಿದ್ದಾರೆ 'ಡಬಲ್' ಮನರಂಜನೆ!

ಎರಡು ವರ್ಷಗಳ ದೊಡ್ಡ ಗ್ಯಾಪ್ ಪಡೆದುಕೊಂಡ ನಟ ಶಾರುಖ್ ಖಾನ್ ಈಗ ಬ್ಯಾಕ್ ಟು ಬ್ಯಾಕ್‌ ಹೊಸ ಸಿನಿಮಾಗಳ ಘೋಷಣೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅದರಲ್ಲೂ ನಿರ್ದೇಶಕ ಅಟ್ಲೀ ಜೊತೆಗೆ ಅವರು ಮಾಡುತ್ತಿರುವ ಹೊಸ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ.

Vijaya Karnataka Web 22 Sep 2020, 6:01 pm
ತಮಿಳು ಸಿನಿಮಾ ನಿರ್ದೇಶಕ ಅಟ್ಲೀ ಕುಮಾರ್ ಜೊತೆಗೆ ನಟ ಶಾರುಖ್ ಖಾನ್‌ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ಈ ಹಿಂದೆಯೇ ಹೊರಬಿದ್ದಿತ್ತು. ಸಿನಿಮಾದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎಂಬ ವಿಚಾರವೂ ಬಹಿರಂಗಗೊಂಡಿತ್ತು. ಚಿತ್ರಕ್ಕೆ 'ಸಂಕಿ' ಅನ್ನೋ ಟೈಟಲ್ ಕೂಡ ಇಡಲಾಗಿದೆಯಂತೆ. ಸದ್ಯ ಈ ಚಿತ್ರತಂಡದಿಂದ ಒಂದು ಬಿಗ್‌ ಅಪ್‌ಡೇಟ್ ಸಿಕ್ಕಿದೆ. ಅದು ಶಾರುಖ್ ನಿಭಾಯಿಸಲಿರುವ ಪಾತ್ರದ ಬಗ್ಗೆ!
Vijaya Karnataka Web ಮುಂದಿನ ಚಿತ್ರದಲ್ಲಿ ಶಾರುಖ್‌ ಖಾನ್‌ ನೀಡಲಿದ್ದಾರೆ ಡಬಲ್ ಮನರಂಜನೆ!


ಕಳ್ಳ ಪೊಲೀಸ್ ಆಗಲಿದ್ದಾರೆ ಶಾರುಖ್‌

ಮೂಲಗಳ ಪ್ರಕಾರ, ಶಾರುಖ್ ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಒಂದರಲ್ಲಿ ತನಿಖಾಧಿಕಾರಿಯಾಗಿದ್ದರೆ, ಮತ್ತೊಂದರಲ್ಲಿ ದೊಡ್ಡ ಕ್ರಿಮಿನಲ್ ಆಗಿಯೂ ಕಾಣಿಸಿಕೊಳ್ಳಲಿದ್ದಾರಂತೆ. ಇಡೀ ಸಿನಿಮಾದ ಕಥೆ ಈ ಎರಡು ಪಾತ್ರಗಳ ಸುತ್ತವೇ ಸಾಗಲಿದೆಯಂತೆ. ಅಂದಹಾಗೆ, ಶಾರುಖ್ ಈ ಹಿಂದೆ 'ಡುಪ್ಲಿಕೇಟ್‌', 'ಫ್ಯಾನ್‌', 'ರಾ ಓನ್‌', 'ಓಂ ಶಾಂತಿ ಓಂ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ನಟಿ ದೀಪಿಕಾಗೆ 'ಸಂಕಿ' ಕಥೆ ಹೇಳಿದ್ದು, ಅವರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ. ಈ ಸಿನಿಮಾವನ್ನು ಹಿಂದಿ, ತಮಿಳಿನಲ್ಲಿ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. 2021ಕ್ಕೆ ಶೂಟಿಂಗ್ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಿರ್ದೇಶಕ ಅಟ್ಲೀ ಈವರೆಗೂ ಮಾಡಿರುವುದು 4 ಸಿನಿಮಾಗಳು. ಅದರಲ್ಲಿ 'ರಾಜ ರಾಣಿ' ಬಿಟ್ಟು ಮಿಕ್ಕ ಮೂರು ಸಿನಿಮಾಗಳನ್ನು ನಟ ವಿಜಯ್ ಜೊತೆ ಮಾಡಿದ್ದಾರೆ. 'ಥೆರಿ', 'ಮೆರ್ಸಲ್‌', 'ಬಿಗಿಲ್‌' ಸಿನಿಮಾಗಳನ್ನು ವಿಜಯ್ ನಾಯಕತ್ವದಲ್ಲಿ ಮಾಡಿ, ಬ್ಯಾಕ್ ಟು ಬ್ಯಾಕ್ ಯಶಸ್ಸನ್ನು ಕಂಡಿದ್ದಾರೆ ಅಟ್ಲೀ. ಬಿಗಿಲ್ ಕಳೆದ ವರ್ಷ ತೆರೆಕಂಡಿತ್ತು. ಆ ಬಳಿಕ ಸಂಪೂರ್ಣ ಗಮನವನ್ನು ಶಾರುಖ್ ಸಿನಿಮಾದ ಮೇಲೆ ಅಟ್ಲೀ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಇದುವರೆಗೂ ಅಧಿಕೃತವಾಗಿ ಈ ಹೊಸ ಸಿನಿಮಾ ಬಗ್ಗೆ ಇಬ್ಬರು ಕೂಡ ಹೇಳಿಕೆ ನೀಡಿಲ್ಲ!

ನಾಲ್ಕನೇ ಬಾರಿಗೆ ಜೊತೆಯಾದ ಶಾರುಖ್-ದೀಪಿಕಾ! 'ಕಿಂಗ್ ಖಾನ್' ಸಿನಿಮಾದ ಬಗ್ಗೆ ಇಲ್ಲಿದೆ ಹೊಸ ಅಪ್‌ಡೇಟ್‌!

ಆನಂದ್ ಎಲ್. ರೈ ಜೊತೆಗಿನ 'ಜೀರೋ' ಸೋಲಿನ ಬಳಿಕ ಬಿಗ್ ಬ್ರೇಕ್ ಪಡೆದುಕೊಂಡ ಶಾರುಖ್‌, 2 ವರ್ಷಗಳಿಂದ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಸದ್ಯದ ಮಾಹಿತಿ ಪ್ರಕಾರ, ಅಟ್ಲೀ ಸಿನಿಮಾ ನಂತರ ನಿರ್ದೇಶಕ ಸಿದ್ಧಾರ್ಥ್‌ ಆನಂದ್ ಜೊತೆಗೆ ಒಂದು ಥ್ರಿಲ್ಲರ್ ಸಿನಿಮಾ ಮಾಡಲಿದ್ದಾರಂತೆ ಶಾರುಖ್. ಅದರಲ್ಲಿ ಅವರೊಂದಿಗೆ ಜಾನ್‌ ಅಬ್ರಾಹಂ ಕೂಡ ನಟಿಸಲಿದ್ದಾರೆ. ಆನಂತರ ಸಕ್ಸಸ್‌ಫುಲ್ ಸಿನಿಮಾ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಜೊತೆಗೂ ಶಾರುಖ್ ಕೆಲಸ ಮಾಡಲಿದ್ದಾರೆ. ಆ ಸಿನಿಮಾವೂ ವಲಸೆ ಕುರಿತು ಇರಲಿದೆಯಂತೆ.

ಕಾಜೋಲ್ ಕೆಟ್ಟ ಹುಡುಗಿ, ಅವಳ ಜೊತೆ ಕೆಲಸ ಮಾಡೋಕಾಗಲ್ಲ: ಶಾರುಖ್ ಖಾನ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌