ಆ್ಯಪ್ನಗರ

'ಪಠಾಣ್' ಸಿನಿಮಾಕ್ಕಾಗಿ ಬದಲಾಯ್ತು ಶಾರುಖ್ ಅವತಾರ! 'ಕಿಂಗ್‌ ಖಾನ್‌' ಸ್ಟೈಲ್‌ಗೆ ಫ್ಯಾನ್ಸ್ ಫಿದಾ!

'ಬಾಲಿವುಡ್ ಬಾದ್‌ಷಾ' ಶಾರುಖ್ ಖಾನ್ ಅವರ ಸಿನಿಮಾಗಳು ಇಲ್ಲದೇ ಅಭಿಮಾನಿಗಳು ಸತತ ಎರಡು ವರ್ಷಗಳಿಂದ ಬೇಸರದಲ್ಲಿದ್ದರು. ಆ ಬೇಸರವನ್ನು ಮರೆಸುವಂತಹ ನ್ಯೂಸ್‌ವೊಂದು ಈಗ ಹೊರಬಿದ್ದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Vijaya Karnataka Web 1 Dec 2020, 3:42 pm
ಕಳೆದ ಎರಡು ವರ್ಷಗಳಿಂದ ಬೇಸರದಲ್ಲಿದ್ದ ಫ್ಯಾನ್ಸ್‌ಗೆ ಭರ್ಜರಿ ಉಡುಗೊರೆ ನೀಡಲು ಶಾರುಖ್ ಖಾನ್‌ ಸಜ್ಜಾಗಿರುವಂತೆ ಕಾಣುತ್ತಿದೆ. ಶಾರುಖ್‌ ವೃತ್ತಿಜೀವನದಲ್ಲೇ ಇಷ್ಟೊಂದು ದೊಡ್ಡ ಗ್ಯಾಪ್ ಎಂದಿಗೂ ಆಗಿರಲಿಲ್ಲ. ಸಹಜವಾಗಿಯೇ ಅದರಿಂದ ಅಭಿಮಾನಿಗಳಿಗೆ ಬೇಸರವಾಗಿತ್ತು. ಈಗ ಹೊಸ ಲುಕ್‌ನಲ್ಲಿ ಅವರನ್ನೆಲ್ಲ ರಂಜಿಸಲು ಅಖಾಡಕ್ಕೆ ಇಳಿದಿದ್ದಾರೆ ಕಿಂಗ್ ಖಾನ್!
Vijaya Karnataka Web Shah Rukh Khan


'ಪಠಾಣ್‌'ಗಾಗಿ ಹೊಸ ಲುಕ್‌
ವಯಸ್ಸು 55 ದಾಟಿದರೂ ಶಾರುಖ್ ಮಾತ್ರ ಇನ್ನು ಯಂಗ್ ಆಗಿಯೇ ಇದ್ದಾರೆ. 'ಜೀರೋ' ಸೋಲಿನ ನಂತರ ಸಿಕ್ಕಾಪಟ್ಟೆ ಗ್ಯಾಪ್ ಮಾಡಿದ್ದ ಅವರು, ಕಥೆಗಳ ಆಯ್ಕೆಯಲ್ಲಿ ತುಂಬ ತಲೆ ಕೆಡಿಸಿಕೊಂಡಿದ್ದರು. ಕೊನೆಗೆ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಅವರು, ಫ್ಯಾನ್ಸ್‌ಗೆ ಒಂದಾದ ಮೇಲೊಂದರಂತೆ ಸಿನಿಮಾ ನೀಡಲು ಸಜ್ಜಾಗಿದ್ದಾರೆ. ಸದ್ಯ ಆರಂಭಿಕವಾಗಿ 'ಪಠಾಣ್‌' ಸಿನಿಮಾದ ಶೂಟಿಂಗ್‌ನಲ್ಲಿ ತಲ್ಲೀನರಾಗಿದ್ದಾರೆ. 'ವಾರ್' ಖ್ಯಾತಿಯ ಸಿದ್ಧಾರ್ಥ್‌ ಆನಂದ್ ನಿರ್ದೇಶನದ ಸಿನಿಮಾದಲ್ಲಿ ಶಾರುಖ್‌ ಉದ್ದ ಕೂದಲು ಬಿಟ್ಟು, ಸ್ಟೈಲಿಶ್‌ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದಿತ್ಯ ಚೋಪ್ರಾ ಇದರ ನಿರ್ಮಾಪಕರು.

ಪ್ರಮುಖ ಪಾತ್ರಗಳಲ್ಲಿ ಜಾನ್‌, ದೀಪಿಕಾ
ಈ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ ಕೂಡ ನಟಿಸಲಿದ್ದಾರೆ. ಶಾರುಖ್ ಜೊತೆ 'ಓಂ ಶಾಂತಿ ಓಂ' ಮೂಲಕವೇ ಬಾಲಿವುಡ್‌ ಪ್ರವೇಶಿಸಿದ ದೀಪಿಕಾ, ಆನಂತರ 'ಚೆನ್ನೈ ಎಕ್ಸ್‌ಪ್ರೆಸ್‌', 'ಹ್ಯಾಪಿ ನ್ಯೂ ಇಯರ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಈಗ ನಾಲ್ಕನೇ ಬಾರಿಗೆ 'ಪಠಾಣ್‌'ನಲ್ಲಿ ಶಾರುಖ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ಜಾನ್ ಅಬ್ರಾಹಂ ಇಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಅವರಿಗೆ ಭಾರಿ ಪ್ರಮಾಣದ ಸಂಭಾವನೆ ನೀಡಲಾಗಿದೆಯಂತೆ.

ನಿಮ್ಮ ದೊಡ್ಡ ಪ್ರತಿಸ್ಪರ್ಧಿ ಯಾರು ಅಂತ ಕೇಳಿದ್ದಕ್ಕೆ ನೋಟ್‌ಬುಕ್ ಎಸೆದು ಉತ್ತರ ಕೊಟ್ಟಿದ್ದ ಶಾರುಖ್ ಖಾನ್!

ಸಾಲು ಸಾಲು ಸಿನಿಮಾಗಳಲ್ಲಿ ಶಾರುಖ್‌
'ಜೀರೋ' ಸೋಲಿನ ನಂತರ ಸುದೀರ್ಘ ಗ್ಯಾಪ್ ಮಾಡಿದ್ದ ಶಾರುಖ್ ಈಗ 'ಪಠಾಣ್' ಒಪ್ಪಿಕೊಂಡು, ಶೂಟಿಂಗ್‌ನಲ್ಲೂ ಭಾಗವಹಿಸಿದ್ದಾರೆ. ಆದಾದ ಬಳಿಕ ರಾಜ್‌ಕುಮಾರ್ ಹಿರಾನಿ ಜೊತೆ ವಲಸೆ ಕುರಿತ ಸಿನಿಮಾವೊಂದನ್ನು ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ತಮಿಳು ನಿರ್ದೇಶಕ ಅಟ್ಲೀ ಕುಮಾರ್‌ಗೂ ಶಾರುಖ್ ಕಾಲ್‌ಶೀಟ್ ನೀಡಿದ್ದು, ಭರ್ಜರಿ ಮಾಸ್ ಕಮರ್ಷಿಯಲ್ ಸಿನಿಮಾವೊಂದನ್ನು ಮಾಡುವ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಶಾರುಖ್ ಖಾನ್ ನೀಡಿದ್ದ ಆಫರ್ ರಿಜೆಕ್ಟ್ ಮಾಡಿದ್ದೇಕೆ 'ಲೇಡಿ ಸೂಪರ್‌ಸ್ಟಾರ್' ನಯನತಾರಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌