ಆ್ಯಪ್ನಗರ

ಜಿಮ್‌ನಲ್ಲೂ ಡೇಟಿಂಗ್‌ ಮಾಡೋ ಸೆಲೆಬ್ರಿಟಿಗಳು!

ಬಾಲಿವುಡ್‌ನ ಈ ಕ್ಯೂಟ್‌ ದಂಪತಿ ಇತ್ತೀಚೆಗೆ ಜಿಮ್‌ನ್ನೇ ಡೇಟಿಂಗ್‌ ಸ್ಥಳವಾಗಿಸಿಕೊಂಡು ವರ್ಕೌಟ್‌ನಲ್ಲಿ ಬಿಝಿಯಾಗಿರುತ್ತಾರೆ.

TNN 8 Jun 2017, 12:06 pm
ಇತ್ತೀಚಿನ ದಿನಗಳಲ್ಲಿ ಜಿಮ್‌ ಡೇಟಿಂಗ್‌ ಎನ್ನುವುದು ಹೊಸ ಟ್ರೆಂಡ್‌ ಆಗಿ ಬೆಳೆಯುತ್ತಿದೆ. ಈ ಟ್ರೆಂಡ್‌ನ್ನ ಈಗ ಬಾಲಿವುಡ್‌ ಸೆಲೆಬ್ರಿಟಿಗಳು ಫಾಲೋ ಮಾಡುತ್ತಿರುವುದು ವಿಶೇಷ.
Vijaya Karnataka Web shahid mira are inspiring us all to make gym dates
ಜಿಮ್‌ನಲ್ಲೂ ಡೇಟಿಂಗ್‌ ಮಾಡೋ ಸೆಲೆಬ್ರಿಟಿಗಳು!


ಕಾಫೀ ಶಾಪ್‌ಗಳಲ್ಲಿ ಕುಳಿತು ಸಿಪ್‌ ಬೈ ಸಿಪ್‌ ಕಾಫೀ ಕುಡಿಯುತ್ತ ಗಂಟೆಗಟ್ಟಲೆ ಡೇಟಿಂಗ್‌ ಮಾಡುವುದೀಗ ದಿನಗಳಲ್ಲಿ ಹಳೆಯದಾಯಿತು. ಜಿಮ್‌ ಡೇಟಿಂಗ್‌ ಎನ್ನುವುದು ಈಗ ಹೊಸ ಟ್ರೆಂಡ್‌ ಆಗಿ ಜೋಡಿಗಳನ್ನು ಮೋಡಿ ಮಾಡುತ್ತಿದೆ. ಸದ್ಯಕ್ಕೆ ಇದನ್ನು ಬಾಲಿವುಡ್‌ ಸೆಲೆಬ್ರಿಟಿಗಳು ಹೆಚ್ಚಾಗಿ ಅನುಸರಿಸುತ್ತಿದ್ದಾರೆ.

ಹೌದು, ಬಾಲಿವುಡ್‌ನ ಕ್ಯೂಟ್‌ ದಂಪತಿ ಶಾಹೀದ್‌-ಮೀರಾ ಜಿಮ್‌ನ್ನೇ ಡೇಟಿಂಗ್‌ ಸ್ಥಳವಾಗಿಸಿಕೊಂಡು ವರ್ಕೌಟ್‌ನಲ್ಲಿ ಬಿಝಿಯಾಗಿರುತ್ತಾರೆ. ವಿಭಿನ್ನ ರೀತಿಯ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಶಾಹೀದ್‌ ಕಪೂರ್‌, ತಮ್ಮ ಫಿಟ್‌ನೆಸ್‌ಗೆ ಹೆಚ್ಚು ಮಹತ್ವ ನೀಡುತ್ತಾರೆ.

ಇದೀಗ ಪತಿ ಜತೆ ಮೀರಾ ರಜಪೂತ್‌ ಸಹ ಫಿಟ್‌ ಆಗಿರುವತ್ತ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ. ಮೀರಾ ಫಿಟ್‌ನೆಸ್‌ನತ್ತ ಗಮನ ನೀಡಲು ಶಾಹೀದ್‌ ಅವರೇ ಕಾರಣ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಶಾಹೀದ್‌-ಮೀರಾ ಒಟ್ಟಿಗೆ ಜಿಮ್‌ ಹೋಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಈ ಮೂಲಕ ಉಳಿದವರಿಗೂ ಸ್ಪೂರ್ತಿಯಾಗಿದ್ದಾರೆ ಶಾಹೀದ್‌-ಮೀರಾ. ಬಿಟೌನ್‌ ಕ್ಯೂಟ್‌ ದಂಪತಿಗೆ ಮಿಶಾ ಎಂಬ ಮಗಳಿರುವುದು ನಿಮಗೆಲ್ಲ ಗೊತ್ತೇ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌