ಆ್ಯಪ್ನಗರ

ಬೆಳ್ಳಿ ತೆರೆಗೆ ಮತ್ತೆ ಬರಲಿದ್ದಾರೆ ಕನ್ನಡತಿ ಶಿಲ್ಪಾ ಶೆಟ್ಟಿ

ಸದ್ಯಕ್ಕೆ ಹಿಂದಿ ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿರುವ ಮಂಗಳೂರು ಮೂಲದ ಕನ್ನಡ ನಟಿ ಶಿಲ್ಪಾ ಶೆಟ್ಟಿ ಮತ್ತೆ ...

Vijaya Karnataka 25 Jul 2019, 6:01 pm
ಸದ್ಯಕ್ಕೆ ಹಿಂದಿ ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿರುವ ಮಂಗಳೂರು ಮೂಲದ ಕನ್ನಡ ನಟಿ ಶಿಲ್ಪಾ ಶೆಟ್ಟಿ ಮತ್ತೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮದುವೆ ಮತ್ತು ಮಗುವಾದ ನಂತರ ಸಿನಿಮಾ ನಟನೆಯಿಂದ ಬಹುವರ್ಷಗಳ ಕಾಲ ದೂರವೇ ಉಳಿದಿದ್ದ ಅವರು ಇದೀಗ ಯಾಮಿ ಗೌತಮ್‌ ಮತ್ತು ದಿಲ್ಜೀತ್‌ ದೊಸಾಂಜ್‌ ನಟನೆಯ ಚಿತ್ರವೊಂದರಲ್ಲಿ ನಟಿಸಲು ಒಪ್ಪಿದ್ದಾರೆ.
Vijaya Karnataka Web Mumbai: Bollywood actor Shilpa Shetty Kundra poses for a photograph during the d...
Bollywood actor Shilpa Shetty Kundra poses for a photograph during the dance reality show 'Super Dancer Chapter 3', in Mumbai.Photo)(


ಇನ್ನೂ ಟೈಟಲ್‌ ಫೈನಲ್‌ ಆಗದ ಈ ಸಿನಿಮಾವನ್ನು ರಮೇಶ್‌ ತೌರನಿ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಲಿರುವ ಶಿಲ್ಪಾ ಶೆಟ್ಟಿ ಈ ಮೂಲಕ ಬೆಳ್ಳಿ ತೆರೆಗೆ ಜಬರ್‌ದಸ್ತ್‌ ಆಗಿ ರೀ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಡಿ ಫಿಟ್‌ನೆಸ್‌ಗೂ ಹೆಸರಾಗಿರುವ ಶಿಲ್ಪಾರನ್ನು ಮತ್ತೆ ಬೆಳ್ಳಿ ತೆರೆಯ ಮೇಲೆ ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌