ಆ್ಯಪ್ನಗರ

'ಹಾಫ್‌ ಗರ್ಲ್‌ಫ್ರೆಂಡ್‌' ಈಗ ಸೈನಾ ನೆಹ್ವಾಲ್‌

ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ತೆರೆ ಮೇಲೆ ಸೈನಾ ಆಗಿ ಮೆರೆಯಲಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 26 Apr 2017, 11:38 am
ಖ್ಯಾತ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಜೀವನಾಧಾರಿತ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಸಹಜವಾಗಿತ್ತು . ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ತೆರೆ ಮೇಲೆ ಸೈನಾ ಆಗಿ ಮೆರೆಯಲಿದ್ದಾರೆ.
Vijaya Karnataka Web shraddha kapoor to portray saina nehwals character in her biopic
'ಹಾಫ್‌ ಗರ್ಲ್‌ಫ್ರೆಂಡ್‌' ಈಗ ಸೈನಾ ನೆಹ್ವಾಲ್‌


ಸದ್ಯಕ್ಕೆ ಶ್ರದ್ಧಾ ಕಪೂರ್‌ ಬಾಲಿವುಡ್‌ನಲ್ಲಿ ಟಾಕ್‌ ಕ್ರಿಯೇಟ್‌ ಮಾಡಿರುವ ನಟಿ. 'ಹಾಫ್‌ ಗರ್ಲ್‌ಫ್ರೆಂಡ್‌' ಮತ್ತು 'ಹಸೀನಾ' ಚಿತ್ರಗಳಲ್ಲಿನ ಲುಕ್‌ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಶ್ರದ್ಧಾ. ದೇಶದ ಘನತೆ ಹೆಚ್ಚಿಸಿದ ಖ್ಯಾತ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಅವರ ಜೀವನಾಧಾರಿತ ಚಿತ್ರಕ್ಕೆ ಆಯ್ಕೆಯಾಗುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಅಮೋಲ್‌ ಗುಪ್ತೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಭೂಷಣ್‌ ಕುಮಾರ್‌ ನಿರ್ಮಾಣ ಮಾಡುತ್ತಿದ್ದಾರೆ. ಈ ಮೊದಲು ಸೈನಾ ಪಾತ್ರವನ್ನು ದೀಪಿಕಾ ಪಡುಕೋಣೆ ನಿಭಾಯಿಸಲಿದ್ದಾರೆ ಎನ್ನುವ ಮಾತುಗಳು ಗಿರಕಿ ಹೊಡೆಯುತ್ತಿದ್ದವು. ಶ್ರದ್ಧಾ ಆಯ್ಕೆಯಾಗುವ ಮೂಲಕ ಎಲ್ಲ ಅಂತೆ-ಕಂತೆಗಳಿಗೆ ತೆರೆ ಬಿದ್ದಂತಾಗಿದೆ.

ಈ ಒಂದು ಸುದ್ದಿ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಅವರಿಗೂ ಅಚ್ಚರಿಯ ಜತೆ ಖುಷಿಯನ್ನೂ ತಂದಿದೆ. 'ನನ್ನ ಜೀವನಾಧಾರಿತ ಚಿತ್ರ ಬರಲಿದೆ ಎಂಬ ಮಾಹಿತಿಯಷ್ಟೇ ಗೊತ್ತಿತ್ತು. ಆದರೆ ಈ ಚಿತ್ರಕ್ಕೆ ಶ್ರದ್ಧಾ ಕಪೂರ್‌ ಆಯ್ಕೆಯಾಗಿರುವುದು ನಿಜಕ್ಕೂ ಸಂತೋಷ ತಂದಿದೆ. ಶ್ರದ್ದಾ ಟ್ಯಾಲೆಂಟೆಡ್‌ ನಟಿ. ಅವರು ನನ್ನ ಪಾತ್ರವನ್ನು ತೆರೆಯ ಮೇಲೆ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ' ಎಂದು ಟ್ವೀಟ್‌ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌