ಆ್ಯಪ್ನಗರ

ಶ್ರದ್ಧಾ ಕಪೂರ್ ಮದುವೆ, ಪ್ರೀತಿಯ ಬಗ್ಗೆ ಮೌನ ಮುರಿದ ಶಕ್ತಿ ಕಪೂರ್

ತನ್ನ ಮಗಳು ಶ್ರದ್ಧಾ ಕಪೂರ್ ಇನ್ನೂ ಐದು ವರ್ಷ ಮದುವೆ ಮಾಡಿಕೊಳ್ಳಲ್ಲ ಎಂದು ಅವರ ತಂದೆ, ಬಾಲಿವುಡ್ ನಟ ಶಕ್ತಿ ಕಪೂರ್ ಸ್ಪಷ್ಟಪಡಿಸಿದ್ದಾರೆ. 'ಸಾಹೋ' ಸಿನಿಮಾದಲ್ಲಿ ಅಭಿನಯಿಸುತ್ತಿರುವ ಶ್ರದ್ಧಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದ ಹಿನ್ನೆಲೆಯಲ್ಲಿ ಅವರು ಈ ರೀತಿ ತಿಳಿಸಿದ್ದಾರೆ.

TIMESOFINDIA.COM 23 Mar 2019, 12:38 pm
ತನ್ನ ಮಗಳು ಶ್ರದ್ಧಾ ಕಪೂರ್ ಇನ್ನೂ ಐದು ವರ್ಷ ಮದುವೆ ಮಾಡಿಕೊಳ್ಳಲ್ಲ ಎಂದು ಅವರ ತಂದೆ, ಬಾಲಿವುಡ್ ನಟ ಶಕ್ತಿ ಕಪೂರ್ ಸ್ಪಷ್ಟಪಡಿಸಿದ್ದಾರೆ. 'ಸಾಹೋ' ಸಿನಿಮಾದಲ್ಲಿ ಅಭಿನಯಿಸುತ್ತಿರುವ ಶ್ರದ್ಧಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದ ಹಿನ್ನೆಲೆಯಲ್ಲಿ ಅವರು ಈ ರೀತಿ ತಿಳಿಸಿದ್ದಾರೆ.
Vijaya Karnataka Web shraddha-kapoor


ರೋಷನ್ ಶ್ರೇಷ್ಠ ಎಂಬ ಫೋಟೋಗ್ರಾಫರ್‌ನ್ನು ಶ್ರದ್ಧಾ ಪ್ರೀತಿಸುತ್ತಿದ್ದಾರೆಂದು, 2020ರಲ್ಲಿ ಇವರು ಸಪ್ತಪದಿ ತುಳಿಯಲಿದ್ದಾರೆಂಬ ಸುದ್ದಿ ಇತ್ತು. ಶ್ರದ್ಧಾ ವಯಸ್ಸು 32 ವರ್ಷಗಳಾಗಿದ್ದು ಮನೆಯಲ್ಲೂ ಮದುವೆ ಬಗ್ಗೆ ಪ್ರಸ್ತಾಪ ಬರುತ್ತಿದೆ ಎಂದು ಬಾಲಿವುಡ್‌ನಲ್ಲಿ ಗುಸುಗುಸು ಕೇಳಿಬಂದಿತ್ತು.

ಈ ಗಾಳಿ ಸುದ್ದಿಗಳ ಬಗೆ ಶಕ್ತಿ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಶ್ರದ್ಧಾ ಕಪೂರ್ ಮದುವೆ ಸುದ್ದಿಗಳಲ್ಲಿ ಹುರುಳಿಲ್ಲ. "ಅವೆಲ್ಲವೂ ಸುಳ್ಳು ಸುದ್ದಿಗಳು. ಅವುಗಳಲ್ಲಿ ಸತ್ಯಾಂಶ ಇಲ್ಲ. ಶ್ರದ್ಧಾಗೆ ಇನ್ನೂ ಐದು ವರ್ಷ ಮದುವೆಯಾಗುವ ಉದ್ದೇಶ ಇಲ್ಲ. ಆಕೆ ಕೈಯಲ್ಲಿ ಸದ್ಯಕ್ಕೆ ಸಾಕಷ್ಟು ಪ್ರಾಜೆಕ್ಟ್‌ಗಳಿವೆ. ಅವುಗಳಲ್ಲಿ ಬಿಝಿಯಾಗಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಆಕೆಯ ಕ್ಯಾಲೆಂಡರ್ ಬ್ಲಾಕ್ ಆಗಿದೆ" ಎಂದಿದ್ದಾರೆ.

ರೋಹನ್ ಪ್ರೀತಿಯ ಬಗ್ಗೆ ಮಾತನಾಡುತ್ತಾ, "ಕಳೆದ ಕೆಲವು ವರ್ಷಗಳಿಂದ 'ಶ್ರದ್ಧಾ ಈತನನ್ನು ಪ್ರೀತಿಸುತ್ತಿದ್ದಾಳೆ' ಎಂದು ಬಹಳಷ್ಟು ಹೆಸರುಗಳು ಕೇಳಿಬಂದವು. ಇದು ಚಿತ್ರೋದ್ಯಮ. ಇಲ್ಲಿ ಇಬ್ಬರು ಕೂಡಿ ಮಾತನಾಡಿಕೊಂಡರೆ ಹಾಗೆಯೇ ಭಾವಿಸುತ್ತಾರೆ. ಅಷ್ಟಕ್ಕೆ ಏನೋ ಆದಂತೆ ಅಲ್ಲ. ರೋಹನ್ ತಂದೆ ರಾಕೇಶ್ ನನ್ನ ಗೆಳೆಯ. ನಾವು ಫ್ಯಾಮಿಲಿ ಫ್ರೆಂಡ್ಸ್. ನನ್ನ ಮಗಳ ಜೀವನದಲ್ಲಿ ನಡೆದ ಪ್ರತಿ ವಿಷಯವನ್ನೂ ನನಗೆ ತಿಳಿಸುತ್ತಾಳೇ. ತಂದೆ ತಾಯಿ ಅನುಮತಿ ಇಲ್ಲದೆ ಆಕೆ ಮದುವೆಯಾಗಲ್ಲ" ಎಂದು ಶಕ್ತಿ ಕಪೂರ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌