ಆ್ಯಪ್ನಗರ

ಪಿಂಕ್‌ ರಿಮೇಕ್‌ನಲ್ಲಿ ಶ್ರದ್ದಾ

ಕನ್ನಡತಿ ಶ್ರದ್ಧಾ ಶ್ರೀನಾಥ್‌ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ ಆ ಸಾಲಿಗೆ ಹೊಸ ಸೇರ್ಪಡೆ ಹಿಂದಿಯ ಪಿಂಕ್‌ ರಿಮೇಕ್‌...

Vijaya Karnataka 29 Dec 2018, 8:04 am
ಕನ್ನಡತಿ ಶ್ರದ್ಧಾ ಶ್ರೀನಾಥ್‌ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ ಆ ಸಾಲಿಗೆ ಹೊಸ ಸೇರ್ಪಡೆ ಹಿಂದಿಯ ಪಿಂಕ್‌ ರಿಮೇಕ್‌.
Vijaya Karnataka Web Pink


ಹಿಂದಿಯ ಪಿಂಕ್‌ ಸಿನಿಮಾ ತಮಿಳಿಗೆ ರಿಮೇಕ್‌ ಆಗುತ್ತಿದ್ದು, ಅದರಲ್ಲಿ ಶ್ರದ್ಧಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಶ್ರದ್ಧಾ ಈಗಾಗಲೇ ವಿಕ್ರಂ ವೇದ ಥರಹದ ಸಿನಿಮಾ ಮೂಲಕ ತಮಿಳಿಗರಿಗೆ ಚಿರಪರಿಚಿತರಾಗಿದ್ದಾರೆ. ಈಗ ಪಿಂಕ್‌ನಂತರ ವಿಶೇಷ ಸಿನಿಮಾದ ಮೂಲಕ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.

ಶ್ರದ್ಧಾ ಸದ್ಯ ಹಿಂದಿ ಸಿನಿಮಾದ ಚಿತ್ರೀಕರಣದಲ್ಲಿ ಬಿಝಿ ಇದ್ದಾರೆ. ಅವರು ನಟಿಸಿರುವ ಕನ್ನಡದ ಯಾವುದೇ ಸಿನಿಮಾ ಈ ವರ್ಷ ಬಿಡುಗಡೆಯಾಗಿಲ್ಲ. ತಮಿಳಿನಲ್ಲಿ ಈ ಸಿನಿಮಾವನ್ನು ಎಚ್‌ ವಿನೋದ್‌ ಎಂಬುವವರು ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನಿರ್ದೇಶಕರು ಈಗಾಗಲೇ ಶ್ರದ್ಧಾರನ್ನು ಸಂಪರ್ಕಿಸಿ ಅವರನ್ನು ಒಪ್ಪಿಸಿದ್ದಾರೆ. 2019ಕ್ಕೆ ತಮಿಳು ಪಿಂಕ್‌ ಸಿನಿಮಾದ ಕೆಲಸಗಳು ಆರಂಭವಾಗಲಿದೆ. ಶ್ರದ್ಧಾ ನಟನೆಯ ಗೊದ್ರಾ ಕನ್ನಡ ಸಿನಿಮಾ ಸಹ ಬಿಡುಗಡೆಯಾಗಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌