ಆ್ಯಪ್ನಗರ

'ಸಾಹೋ'ಗಾಗಿ ಪ್ರಭಾಸ್‌, ಶ್ರದ್ದಾ ಸಂಭಾವನೆ ಎಷ್ಟು?

ಸದ್ಯಕ್ಕೆ ಬಹುಬೇಡಿಕೆಯ ನಟರ ಸಾಲಿಗೆ ಸೇರಿಕೊಂಡಿರುವ 'ಬಾಹುಬಲಿ' ಸ್ಟಾರ್‌, ತಮ್ಮ ಮುಂದಿನ ಚಿತ್ರ 'ಸಾಹೋ'ಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

TNN 17 Aug 2017, 11:51 am
ಎಸ್‌.ಎಸ್‌ ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಚಿತ್ರ ಜನರ ಮನಸ್ಸನ್ನು ಗೆದ್ದಿದ್ದಲ್ಲದೆ ಬಾಕ್ಸ್‌ ಆಫೀಸ್‌ನಲ್ಲೂ ದಾಖಲೆ ಬರೆಯಿತು. ಇನ್ನು ಈ ಚಿತ್ರದ ಮೂಲಕ ಟಾಲಿವುಡ್‌ ರೆಬೆಲ್‌ ಸ್ಟಾರ್‌ ಪ್ರಭಾಸ್‌, ಒಬ್ಬ ಯುನಿವರ್ಸಲ್‌ ಸ್ಟಾರ್‌ ಆಗಿ ಹೊರಹೊಮ್ಮಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ.
Vijaya Karnataka Web shraddha took a pay cut to star in saaho with prabhas
'ಸಾಹೋ'ಗಾಗಿ ಪ್ರಭಾಸ್‌, ಶ್ರದ್ದಾ ಸಂಭಾವನೆ ಎಷ್ಟು?


ಅಷ್ಟೇ ಅಲ್ಲದೆ 'ಬಾಹುಬಲಿ' ಸರಣಿ ಚಿತ್ರಗಳ ಯಶಸ್ಸು ಪ್ರಭಾಸ್‌ ಸಂಭಾವನೆಯ ಮೇಲೂ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಬಹುಬೇಡಿಕೆಯ ನಟರ ಸಾಲಿಗೆ ಸೇರಿಕೊಂಡಿರುವ 'ಬಾಹುಬಲಿ' ಸ್ಟಾರ್‌, ತಮ್ಮ ಮುಂದಿನ ಚಿತ್ರ 'ಸಾಹೋ'ಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಬರೋಬ್ಬರಿ 30 ಕೋಟಿ ರೂ. ಎನ್ನುತ್ತಿವೆ ಕೆಲ ಮೂಲಗಳು. 'ಬಾಹುಬಲಿ 2' ಚಿತ್ರಕ್ಕಾಗಿ ಪ್ರಭಾಸ್‌ 20ರಿಂದ 25 ಕೋಟಿ ರೂ. ಸಂಭಾವನೆ ಪಡೆದಿದ್ದು ಸುದ್ದಿಯಾಗಿತ್ತು. ಇದೀಗ ಪ್ರಭಾಸ್‌ ತಮ್ಮ ಸಂಭಾವನೆಯನ್ನು ಮತ್ತಷ್ಟು ಏರಿಸಿಕೊಂಡಿರುವುದು ಅವರಿಗಿರುವ ಬೇಡಿಕೆನ್ನು ತೋರಿಸುತ್ತಿದೆ. ಬಾಲಿವುಡ್‌ ಖಾನ್‌ಗಳು ಪಡೆಯುವ ಸಂಭಾವನೆಗೆ ಪ್ರಭಾಸ್‌ ಹತ್ತಿರದಲ್ಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು 'ಸಾಹೋ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌, ದೊಡ್ಡ ಮಟ್ಟದ ಸಂಭಾವನೆಯನ್ನು ಡಿಮಾಂಡ್‌ ಮಾಡುತ್ತಿದ್ದಾರಂತೆ. ಸಾಮಾನ್ಯವಾಗಿ ಒಂದು ಬಾಲಿವುಡ್‌ ಚಿತ್ರಕ್ಕೆ 4 ಕೋಟಿ ರೂ. ಪಡೆಯುವ ಶ್ರದ್ಧಾ, ಈ ಚಿತ್ರಕ್ಕೆ ಮಾತ್ರ 12 ಕೋಟಿ ರೂ. ಕೊಡಿ ಎಂದು ಕೇಳುತ್ತಿದ್ದಾರಂತೆ. ಪ್ರಭಾಸ್‌ ಪಡೆಯುವ ಅರ್ಧದಷ್ಟಾದರೂ ತಮಗೆ ಬೇಕು ಎನ್ನುತ್ತಿದ್ದಾರಂತೆ ಶ್ರದ್ಧಾ. ಆದರೆ ಮೂಲಗಳ ಪ್ರಕಾರ ಚಿತ್ರ ತಂಡ ಅಂತಿಮವಾಗಿ 9 ಕೋಟಿ ರೂ. ಸಂಭಾವನೆ ನೀಡಲು ಒಪ್ಪಿದೆಯಂತೆ.

ಸುಜೀತ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಸಾಹೋ' ಚಿತ್ರ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಲಿದೆ. ನೀಲ್‌ ನಿತಿನ್‌ ಮುಕೇಶ್‌ ಈ ಚಿತ್ರದಲ್ಲಿ ವಿಲನ್‌ ಪಾತ್ರವನ್ನು ನಿಭಾಯಿಸಲಿದ್ದು, ಮುಂದಿನ ವರ್ಷ ಪ್ರೇಕ್ಷಕರ ಮುಂದೆ 'ಸಾಹೋ' ಬರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌