ಸುಮಾರು 30 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಮಿಸ್ಟರ್ ಇಂಡಿಯಾ ಸಿನಿಮಾ ಸಿಕ್ಕಾಪಟ್ಟೆ ಜನಪ್ರಿಯವಾಗಿತ್ತು. ಈ ಸಿನಿಮಾದಲ್ಲಿ ಅನಿಲ್ ಕಪೂರ್, ಶ್ರೀದೇವಿ ಮತ್ತು ಅಮರೀಷ್ ಪುರಿ ಅದ್ಭುತವಾದ ಅಭಿನಯವನ್ನು ಪ್ರದರ್ಶಿಸಿದ್ದರು. ಹವಾ ಹವಾಯಿ ಹಾಡಿಗೆ ಶ್ರೀದೇವಿಯವರ ಬೋಲ್ಡ್ ಡಾನ್ಸ್ ಮತ್ತು ಮಳೆ ದೃಶ್ಯವೊಂದರ ಹಾಡಿಗೆ ಅನಿಲ್ ಕಪೂರ್ ಮತ್ತು ಶ್ರೀದೇವಿಯವರ ಡ್ಯುಯೆಟ್ ಡಾನ್ಸ್ ಈಗಲೂ ಸಿನಿ ಪ್ರಿಯರ ಮನಸ್ಸಿನಲ್ಲಿ ಹಚ್ಚ ಹಸಿರಾಗಿದ್ದರೆ. ಈಗ ಮಿ. ಇಂಡಿಯಾ ಸಿನಿಮಾದ ಸರಣಿ ಚಿತ್ರ ಬಂದರೆ ತಾವು ಅದರಲ್ಲಿ ಅಭಿನಯಿಸಲು ಆಸಕ್ತಳಾಗಿದ್ದೇನೆ ಎಂದು ನಟಿ ಶ್ರೀದೇವಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲ, ಈ ಸಿನಿಮಾವನ್ನು ತಮ್ಮ ಪತಿ ಬೋನಿ ಕಪೂರ್ ಅವರೇ ನಿರ್ಮಿಸಲಿ ಎಂದು ಆಶಿಸುತ್ತೇನೆ ಎಂದು ಅವರು ಹೇಳಿದ್ದಾರೆ. 30 ವರ್ಷಗಳ ಬಳಿಕವೂ ಜನರು ಆ ಸಿನಿಮಾದ ಬಗ್ಗೆ ಮಾತನಾಡುತ್ತಾರೆ ಎಂದರೆ ಆಶ್ಚರ್ಯವಾಗುತ್ತದೆ ಎಂದು ಶ್ರೀದೇವಿ ನುಡಿ. ಸದ್ಯಕ್ಕೆ ಅವರು ತಮ್ಮ ಮಾಮ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬಿಝಿಯಾಗಿದ್ದಾರೆ.
ಮಿ. ಇಂಡಿಯಾ ಸರಣಿಯಲ್ಲಿ ನಟಿಸಲು ಶ್ರೀದೇವಿ ಒಲವು
ಸುಮಾರು 30 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಮಿಸ್ಟರ್ ಇಂಡಿಯಾ ಸಿನಿಮಾ ಸಿಕ್ಕಾಪಟ್ಟೆ ಜನಪ್ರಿಯವಾಗಿತ್ತು...
Vijaya Karnataka Web 4 Jul 2017, 5:30 am