ಆ್ಯಪ್ನಗರ

ಕಾಪಿಕ್ಯಾಟ್‌ ಆದ್ರು ಸೋನಾಕ್ಷಿ ಸಿನ್ಹಾ

ಹಿರಿಯ ನಟ ಶತ್ರುಘ್ನ ಸಿನ್ಹಾ ಪುತ್ರಿ ಮತ್ತು ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಧರಿಸಿದ್ದ ಬಿಳಿ ಲೇಸ್‌ ಡ್ರೆಸ್ಸೊಂದು ...

Vijaya Karnataka 24 Oct 2019, 6:21 pm
ಹಿರಿಯ ನಟ ಶತ್ರುಘ್ನ ಸಿನ್ಹಾ ಪುತ್ರಿ ಮತ್ತು ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಧರಿಸಿದ್ದ ಬಿಳಿ ಲೇಸ್‌ ಡ್ರೆಸ್ಸೊಂದು ಚರ್ಚೆಗೆ ಗ್ರಾಸವಾಗಿದೆ. ಇದೇ ರೀತಿಯ ಉಡುಪನ್ನು ಈ ಮೊದಲು ಮಲೈಕಾ ಅರೋರಾ ಕೂಡ ಧರಿಸಿದ್ದರು. ಆದ್ದರಿಂದ ಫ್ಯಾಷನ್‌ ವಿಷಯದಲ್ಲಿಸೋನಾಕ್ಷಿ ಸಿನ್ಹಾ ಅವರು ಮಲೈಕಾರನ್ನು ಕಾಪಿ ಮಾಡುತ್ತಿದ್ದಾರೆ ಎಂದು ಜನರು ಸೋಷಿಯಲ್‌ ಮೀಡಿಯಾದಲ್ಲಿಕಾಮೆಂಟ್‌ ಮಾಡುತ್ತಿದ್ದಾರೆ.
Vijaya Karnataka Web sonakshi sinha-1


ಮಲೈಕಾ ಅರೋರ ಅವರು ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕೆ ಧರಿಸಿದ್ದ ಬಿಳಿ ಲೇಸ್‌ ಡ್ರೆಸ್‌ ಅನ್ನು ನಾರ್ವೆಯ ಫ್ಯಾಷನ್‌ ಡಿಸೈನರ್‌ವೊಬ್ಬರು ವಿನ್ಯಾಸಗೊಳಿಸಿದ್ದರು. ಲಾಂಗ್‌ ಸ್ಲಿಟ್‌ ಇದ್ದ ಈ ಉದ್ದನೆಯ ವೈಟ್‌ ಲೇಸ್‌ ಉಡುಪಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಸೋನಾಕ್ಷಿ ಕೂಡ ಇದೇ ರೀತಿಯ ಉಡುಪು ಧರಿಸಿ ಫೋಟೋಶೂಟ್‌ ಮಾಡಿಸಿ ಸೋಷಿಯಲ್‌ ಮೀಡಿಯಾದಲ್ಲಿಶೇರ್‌ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌