ಆ್ಯಪ್ನಗರ

ಟ್ವಿಟರ್‌ನಿಂದ ಸೋನು ನಿರ್ಗಮನ.. ಕಾರಣ?

ಖ್ಯಾತ ಗಾಯಕ ಸೋನು ನಿಗಮ್‌ ಬುಧವಾರ ಮುಂಜಾನೆ ಒಟ್ಟು 24 ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ತಮ್ಮ ಟ್ವಿಟರ್‌ ಖಾತೆಯಿಂದ ನಿರ್ಗಮಿಸಿದ್ದಾರೆ.

TNN 24 May 2017, 2:21 pm
ಖ್ಯಾತ ಗಾಯಕ ಸೋನು ನಿಗಮ್‌ ಬುಧವಾರ ಮುಂಜಾನೆ ಒಟ್ಟು 24 ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ತಮ್ಮ ಟ್ವಿಟರ್‌ ಖಾತೆಯಿಂದ ನಿರ್ಗಮಿಸಿದ್ದಾರೆ. ಅಷ್ಟೇ ಅಲ್ಲದೆ ಟ್ವಿಟರ್‌ ಖಾತೆಯಿಂದ ನಿರ್ಗಮಿಸುವ ಮುನ್ನ ಟ್ವಿಟರ್‌ನಲ್ಲಿನ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಮಾಧ್ಯಮಗಳಿಗೆ ಸಲಹೆ ಕೂಡ ನೀಡಿದ್ದಾರೆ.
Vijaya Karnataka Web sonu nigam quits twitter in 24 tweets he explains why
ಟ್ವಿಟರ್‌ನಿಂದ ಸೋನು ನಿರ್ಗಮನ.. ಕಾರಣ?


ಗಾಯಕ ಅಭಿಜಿತ್ ಭಟ್ಟಾಚಾರ್ಯ ಅವರ ಟ್ವಿಟರ್‌ ಅಕೌಂಟ್‌ನ್ನು ಟ್ವಿಟರ್‌ ಸಸ್ಪೆಂಡ್‌ ಮಾಡಿರುವ ಹಿನ್ನೆಲೆಯಲ್ಲಿ ಸೋನು ನಿಗಮ್‌ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. 'ಇಂದು ನನ್ನ 7 ಲಕ್ಷ ಫಾಲೋವರ್ಸ್‌ನ್ನು ಇಂದು ನಾನು ತೊರೆಯುತ್ತಿದ್ದೇನೆ. ಇದರಿಂದ ಹಲವರಿಗೆ ನನ್ನ ಮೇಲೆ ಬೇಸರ ಹಾಗೂ ಕೋಪ ಉಂಟಾಗಬಹುದು. ಕೆಲವರಿಗೆ ಖುಷಿಯೂ ಆಗಿರುತ್ತೆ' ಎಂದು ಟ್ವೀಟ್‌ ಮಾಡಿದ್ದಾರೆ. ತಾವು ಟ್ವಿಟರ್‌ ಖಾತೆಯಿಂದ ನಿರ್ಗಮಿಸುತ್ತಿರುವುದಕ್ಕೆ ಒಟ್ಟು 24 ಕಾರಣಗಳನ್ನು ನೀಡಿದ್ದಾರೆ ಸೋನು.

ಅದರಲ್ಲಿ ಒಂದು 'ಬಿಜೆಪಿ ಸೆಕ್ಸ್‌ ರಾಕೆಟ್‌ ನಡೆಸುತ್ತಿದೆ, ಬಿಜೆಪಿ ನಾಯಕರು ಇದರಲ್ಲಿ ತೊಡಗಿಕೊಂಡಿದ್ದಾರೆ ಎಂದು ಶೆಹ್ಲ ರಷೀದ್ ಟ್ವೀಟ್ ಮಾಡಿದ್ದರು. ಆ ಟ್ವೀಟ್‌ನ್ನು ಗಾಯಕ ಅಭಿಜಿತ್‌ ಭಟ್ಟಾಚಾರ್ಯ ಖಂಡಿಸಿದ್ದರು. ಟ್ವೀಟ್‌ನ್ನು ಖಂಡಿಸುವ ಭರದಲ್ಲಿ ಅಭಿಜಿತ್ ಸಹ ಅನುಚಿತ ಶಬ್ದಗಳ ಬಳಕೆ ಮಾಡಿದ್ದರ ಪರಿಣಾಮವಾಗಿ ಅಭಿಜಿತ್‌ ಟ್ವಿಟರ್‌ ಖಾತೆಯನ್ನು ರದ್ದುಗೊಳಿಸಿದೆ.

ಆದರೆ ಬಿಜೆಪಿಯನ್ನು ಕೆಟ್ಟದಾಗಿ ಟೀಕಿಸಿದ ಶೆಹ್ಲ ರಷೀದ್‌ ಟ್ವಿಟರ್‌ ಖಾತೆಯನ್ನು ಯಾಕೆ ಅಮಾನತುಗೊಳಿಸಿಲ್ಲ' ಎಂದು ಸೋನು ಪ್ರಶ್ನಿಸಿದ್ದಾರೆ. ಟ್ವಿಟರ್‌ನ ತಾರತಮ್ಯ ನೀತಿ ಖಂಡಿಸಿ ಶೀಘ್ರದಲ್ಲೇ ತಮ್ಮ ಖಾತೆಯಿಂದ ಹೊರಬರುವುದಾಗಿ ಸೋನು ಹೇಳಿದ್ದಾರೆ. ಕಳೆದ ತಿಂಗಳು ಸೋನು ನಿಗಮ್‌, ಮಸೀದಿಗಳಲ್ಲಿ ಆಜಾನ್‌ ಬಳಕೆಯ ಕುರಿತು ಟ್ವೀಟ್‌ ಮಾಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌