ಆ್ಯಪ್ನಗರ

ಸಚಿನ್‌ ತೆಂಡುಲ್ಕರ್‌ಗೂ ಟೀಕಿಸಿದ ಶ್ರೀರೆಡ್ಡಿ

ಸಿನಿಮಾದಲ್ಲಿ ನಟಿಯರ ಮೇಲೆ ನಡೆಯುತ್ತಿದೆ ಎನ್ನಲಾದ ಲೈಂಗಿಕ ಶೋಷಣೆ ವಿರುದ್ಧ ವಿಭಿನ್ನ ರೀತಿಯ ಪ್ರತಿಭಟನೆ ಮಾಡಿ ಗಮನ ...

Vijaya Karnataka 15 Sep 2018, 5:00 am
ಸಿನಿಮಾದಲ್ಲಿ ನಟಿಯರ ಮೇಲೆ ನಡೆಯುತ್ತಿದೆ ಎನ್ನಲಾದ ಲೈಂಗಿಕ ಶೋಷಣೆ ವಿರುದ್ಧ ವಿಭಿನ್ನ ರೀತಿಯ ಪ್ರತಿಭಟನೆ ಮಾಡಿ ಗಮನ ಸೆಳೆದಿರುವ ನಟಿ ಶ್ರೀರೆಡ್ಡಿ ಈಗ ಭಾರತದ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ವಿರುದ್ಧವೂ ಇಂಥ ಅಪಾದನೆ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಚಿನ್‌ ತೆಂಡುಲ್ಕರ್‌ ಎಂಬ ರೊಮ್ಯಾಂಟಿಕ್‌ ಪುರುಷ ಹೈದರಾಬಾದ್‌ಗೆ ಬಂದಿದ್ದಾಗ ಸುಂದರ ಯುವತಿಯರು ಅವರೊಂದಿಗೆ ರೊಮ್ಯಾನ್ಸ್‌ ಮಾಡುತ್ತಿದ್ದರು. ಚಾಮುಂಡೇಶ್ವರ್‌ ಸ್ವಾಮಿ ಎಂಬ ಹೈ ಪ್ರೊಫೈಲ್‌ ವ್ಯಕ್ತಿ ಇದಕ್ಕೆ ಮಧ್ಯವರ್ತಿಯಾಗಿದ್ದರು ಎಂದು ಶ್ರೀರೆಡ್ಡಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Vijaya Karnataka Web Hyderabad: Telugu actor Sri Reddy sits during a strip protest outside the Telu...
Telugu actor Sri Reddy sits during a 'strip protest' outside the Telugu Film Chamber of Commerce in Hyderabad on Saturday. Reddy alleges that actresses like herself are sexually exploited in the Tollywood industry.Photo


ತುಂಬಾ ಸಂಭಾವಿತರಂತೆ ಕಾಣುವ ಮತ್ತು ಸಮಾಜ ಸೇವೆಯಲ್ಲಿ ತೊಡಗಿರುವ ವ್ಯಕ್ತಿಗಳೂ ಮಹಿಳೆಯರ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ವಿವಾಹೇತರ ಸಂಬಂಧವಿಟ್ಟುಕೊಳ್ಳಲು ಬಯಸುತ್ತಾರೆ. ನಾನು ಹೇಳುತ್ತಿರುವುದೆಲ್ಲಾ ಸತ್ಯ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ ತೆಂಡುಲ್ಕರ್‌ ವಿರುದ್ಧ ಮಾಡಿದ ಈ ಟೀಕೆ ಶ್ರೀರೆಡ್ಡಿಗೆಯೇ ಭಾರಿಯಾಗಿ ಪರಿಣಮಿಸಿದೆ. ಸಚಿನ್‌ ಅಭಿಮಾನಿಗಳು ಈ ನಟಿಯ ವಿರುದ್ಧ ಗರಂ ಆಗಿ ಹೀಯಾಳಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌