ಆ್ಯಪ್ನಗರ

ಆಲಿಯಾ ಭಟ್‌ ಅದ್ದೂರಿ ಗಿಫ್ಟ್‌‌ಗೆ ರಾಜಮೌಳಿ ಮೆಚ್ಚುಗೆ

ಬಾಲಿವುಡ್‌ನ ಬಹುತೇಕ ಸಿಲೆಬ್ರಿಟಿಗಳು ಆಲಿಯಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕೂಡ ಒಳ್ಳೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

Vijaya Karnataka 21 Mar 2019, 1:24 pm
ಬಾಲಿವುಡ್‌ ಚೆಲುವೆ ಆಲಿಯಾ ಭಟ್‌ ತಮ್ಮ 26ನೇ ಬರ್ತ್‌ಡೇ ಸೆಲೆಬ್ರೇಷನ್‌ನಂದು ತಮ್ಮ ಡ್ರೈವರ್‌ ಮತ್ತು ಹೆಲ್ಪರ್‌ಗೆ ತಲಾ 50 ಲಕ್ಷ ರೂಪಾಯಿಯ ಚೆಕ್‌ಗಳನ್ನು ನೀಡಿ ಗಮನ ಸೆಳೆದಿದ್ದು ಗೊತ್ತೇ ಇದೆ. ತಮ್ಮ ಮನೆಯ ಕೆಲಸದಾಕೆ ಹಾಗೂ ಕಾರು ಚಾಲಕನಿಗೆ ಪ್ಲಾಟ್‌ ಖರೀದಿಸಲು ತಲಾ 50 ಲಕ್ಷ ರೂ. ಧನ ಸಹಾಯ ಮಾಡಿರುವುದು ಈಗ ಆಲಿಯಾ ಭಟ್‌ ಬಗ್ಗೆ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
Vijaya Karnataka Web alia-bhatt1


ತಮ್ಮ ಸಂಪಾದನೆಯ ಮೊತ್ತದಲ್ಲಿ ತಮಗಾಗಿ ಕೆಲಸ ಮಾಡುವ ಸಿಬ್ಬಂದಿ ಬಗ್ಗೆಯೂ ಪ್ರೀತಿಯಿಂದ ನೋಡಿಕೊಳ್ಳುವುದು ನಿಜಕ್ಕೂ ಮೆಚ್ಚುವಂಥ ಸಂಗತಿ. ಈ ವಿಷಯಕ್ಕಾಗಿ ಆಲಿಯಾ ಅವರನ್ನು ಅಭಿನಂದಿಸುತ್ತೇನೆ ಎಂದು ನಿರ್ದೇಶಕ ರಾಜಮೌಳಿ ಹೇಳಿದ್ದಾರೆ. ಅಂದ ಹಾಗೆ ಆಲಿಯಾ ಇದೀಗ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಜತೆಗೆ ಬಾಲಿವುಡ್‌ನ ಬಹುತೇಕ ಸಿಲೆಬ್ರಿಟಿಗಳು ಆಲಿಯಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕೂಡ ಒಳ್ಳೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಲಿಯಾ, ನಾನು ಮಾಡಬೇಕು ಎಂದು ನಾನು ಏನನ್ನೂ ಮಾಡುವುದಿಲ್ಲ. ಅವರು ನನಗಾಗಿ ತುಂಬಾ ಕೆಲಸ ಮಾಡುತ್ತಾರೆ. ನನ್ನ ಲೈಫ್‌ನಲ್ಲಿ ಅವರು ತುಂಬಾ ಸ್ಪೆಷಲ್‌. ಹೀಗಾಗಿ ಈ ಪುಟ್ಟ ಕಾಣಿಕೆ ಕೊಟ್ಟಿದ್ದೇನೆ ಎಂದಿದ್ದಾರೆ.

ಆಲಿಯಾ ಭಟ್ ತನ್ನ ಡ್ರೈವರ್‌ ಮತ್ತು ಹೆಲ್ಪರ್‌ ಮುಂಬಯಿಯಲ್ಲಿ ಎರಡು ಮನೆಗಳನ್ನು ಬುಕ್‌ ಮಾಡಿದ್ದರು. ಅದನ್ನು ಅವರು ಖರೀದಿಸಲು ಸಾಧ್ಯವಾಗಲಿ ಎಂಬ ಉದ್ದೇಶದಿಂದ ಈ ಚೆಕ್‌ ನೀಡಲಾಗಿದೆ. ನನ್ನ ವೃತ್ತಿ ಜೀವನದ ಆರಂಭದಿಂದಲೂ ಅವರು ನನ್ನೊಂದಿಗೆ ಇದ್ದರು. ಅವರಿಗೆ ಆರ್ಥಿಕ ನೆರವು ನೀಡುವ ಮೂಲಕ ನನ್ನ ಥ್ಯಾಂಕ್ಸ್‌ ಹೇಳಲು ಬಯಸುತ್ತೇನೆ ಎಂದು ಆಲಿಯಾ ಭಟ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌