ಆ್ಯಪ್ನಗರ

ಸ್ಟಾರ್ ಹೀರೋಯಿನ್ ಪೂಜಾ ಹೆಗ್ಡೆ ನಡುರಾತ್ರಿ ಟ್ವೀಟ್ ಕಂಪನ

ನಟಿ ಪೂಜಾ ಹೆಗ್ಡೆ ಇನ್‍ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದ್ದು ಈ ಬಗ್ಗೆ ಟ್ವೀಟ್ ಮಾಡಿ ನೆಟ್ಟಿಗರಿಗೆ ತಿಳಿಸಿದ್ದಾರೆ. ಒಂದು ಗಂಟೆಗೂ ಅಧಿಕ ಕಾಲ ಟೆಕ್ನಿಕಲ್ ಟೀಂ ಹೆಣಗಾಡಿ ಖಾತೆಯನ್ನು ಮತ್ತೆ ಪಡೆದಿದೆ.

Vijaya Karnataka Web 28 May 2020, 2:04 pm

ಸ್ಟಾರ್ ಹೀರೋಯಿನ್ ಪೂಜಾ ಹೆಗ್ಡೆ ಸದಾ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಬೆಡಗಿ. ಅದರಲ್ಲೂ ಅಭಿಮಾನಿಗಳಿಗೆ ಹತ್ತಿರವಾಗಲು ಇನ್‍ಸ್ಟಾಗ್ರಾಮ್ ಖಾತೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಸರಿಸುಮಾರು ಅವರಿಗೆ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
Vijaya Karnataka Web ಪೂಜಾ ಹೆಗ್ಡೆ


ಇಂತಹ ಇನ್‍ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ. ಟೆಕ್ನಿಕಲ್ ಟೀಂ ಸಹಾಯದಿಂದ ಒಂದು ಗಂಟೆಗೂ ಹೆಚ್ಚು ಹೊತ್ತು ಶ್ರಮಿಸಿ ಆ ಖಾತೆಯನ್ನು ಮತ್ತೆ ಸರಿಪಡಿಸಿದ್ದಾರೆ. ಈ ಸಂಗತಿಯನ್ನು ಸ್ವತಃ ಪೂಜಾ ಹೆಗ್ಡೆ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

"ಹಾಯ್ ಆಲ್, ಇನ್‍ಸ್ಟಾ ಖಾತೆ ಹ್ಯಾಕ್ ಆಗಿದೆ ಎಂದು ನಮ್ಮ ತಂಡ ಈಗಷ್ಟೇ ತಿಳಿಸಿತು. ಸದ್ಯಕ್ಕೆ ನಾವು ಅದನ್ನು ಸರಿಪಡಿಸುವ ಕೆಲಸದಲ್ಲಿದ್ದೇವೆ. ಆದಕಾರಣ ನನ್ನ ಖಾತೆಯಿಂದ ಯಾವುದೇ ವೈಯಕ್ತಿಕ ಸಂದೇಶ ಬಂದರೆ ಅದನ್ನು ನಂಬಬೇಡಿ. ಅದೇ ರೀತಿ ನಿಮ್ಮ ಖಾಸಗಿ ವಿವರಗಳನ್ನು ಕೇಳಿದರೆ ತಿಳಿಸಬೇಡಿ. ಧನ್ಯವಾದಗಳು" ಎಂದು ಪೂಜಾ ಹೆಗ್ಡೆ ನಡುರಾತ್ರಿ 12.37ಕ್ಕೆ ಟ್ವಿಟ್ ಮಾಡಿ ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕ್ವಾರಂಟೇನ್‌ನಲ್ಲಿ ಆ ಹೀರೋ ಜೊತೆ ಇರಲು ಬಯಸುತ್ತೇನೆ: ನಟಿ ಪೂಜಾ ಹೆಗ್ಡೆ

ಡಿಜಿಟಲ್ ಟೀಂ ಸಹಾಯದಿಂದ ತನ್ನ ಖಾತೆಯನ್ನು ಸರಿಪಡಿಸಲಾಗಿದೆ ಎಂದು ನಡುರಾತ್ರಿ 1.05ಕ್ಕೆ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ. "ಹ್ಯಾಕ್ ಆಗಿರುವ ಇನ್‍ಸ್ಟಾಗ್ರಾಮ್ ಖಾತೆಯನ್ನು ಸರಿಪಡಿಸಲು ಒಂದು ಗಂಟೆಗೂ ಹೆಚ್ಚು ಕಾಲ ಶ್ರಮಿಸಿದ್ದೇವೆ. ಇಂತಹ ಸಮಯದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ನನ್ನ ಟೆಕ್ನಿಕಲ್ ಟೀಂಗೆ ಧನ್ಯವಾದಗಳು. ಕೊನೆಗೂ ನನ್ನ ಖಾತೆ ನನ್ನ ಕೈಗೆ ಬಂದಿದೆ. ಒಂದು ಗಂಟೆ ಹಿಂದೆ ನನ್ನ ಖಾತೆಯಿಂದ ಬಂದ ಪೋಸ್ಟ್‌ಗಳು, ಮೆಸೇಜ್‌ಗಳನ್ನು ತೊಲಗಿಸಿದ್ದೇವೆ" ಎಂದಿದ್ದಾರೆ ಪೂಜಾ ಹೆಗ್ಡೆ.

ತಾಯಿಯಾಗುತ್ತಿರುವ 'ಮೈನೇ ಪ್ಯಾರ್ ಕಿಯಾ' ಬೆಡಗಿ ಭಾಗ್ಯಶ್ರೀ!

ಟಾಲಿವುಡ್‍ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆಗೆ ಅಲಾ ವೈಕುಂಠಪುರಮುಲೋ ಸಿನಿಮಾ ಮೂಲಕ ಈ ವರ್ಷದ ಆರಂಭದಲ್ಲೇ ಒಳ್ಳೆಯ ಯಶಸ್ಸನ್ನು ತನ್ನ ಖಾತೆಗೆ ಜಮೆ ಮಾಡಿಕೊಂಡರು. ಸದ್ಯಕ್ಕೆ ಅವರು ಪ್ರಭಾಸ್ ನಾಯಕ ನಟನಾಗಿರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌