ಶಾರುಖ್ ಖಾನ್ ಅವರ ಮಗಳು ಸುಹಾನ ಖಾನ್ ಮತ್ತೆ ಸುದ್ದಿಯಲ್ಲಿದ್ದಾಳೆ. ಇತ್ತೀಚೆಗೆ ಶಾರುಖ್ ಪತ್ನಿ ಗೌರಿ ಖಾನ್ ಆಯೋಜಿಸಿದ್ದ ಅದ್ಧೂರಿ ಹಾಲೊವಿನ್ ಪಾರ್ಟಿಯಲ್ಲಿ ಸುಹಾನಳೇ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಳು. ಈ ಪಾರ್ಟಿಯಲ್ಲಿ ಶಾರುಖ್ ಖಾನ್ ಪಾಲ್ಗೊಂಡಿರಲಿಲ್ಲ. ಆದರೆ ಅವರ ಸ್ಥಾನವನ್ನು ಸುಹಾನ ತುಂಬಿದಳು. ಹೊಳೆಯುವ ಗೋಲ್ಡ್ ಡ್ರೆಸ್ ಮತ್ತು ಗೋಲ್ಡನ್ ಕಲರ್ನ ಹೀಲ್ಸ್ ಧರಿಸಿದ್ದ ಆಕೆ ಮುದ್ದಾಗಿ ನಳನಳಿಸುತ್ತಿದ್ದಳು. ಬಿಳಿ ಮಿನಿ ಗೌನ್ ಧರಿಸಿದ್ದ ಗೌರಿ ಖಾನ್ರೊಂದಿಗೆ ನಿಂತಿರುವ ಸುಹಾನಳ ಆಕರ್ಷಕವಾದ ಫೋಟೊಗೆ ಎಲ್ಲರೂ ಫಿದಾ ಆಗಿದ್ದಾರೆ. ಈಕೆಗೆ ಬಾಲಿವುಡ್ನಲ್ಲಿ ಉತ್ತಮ ಭವಿಷ್ಯವಿದೆ ಎಂದು ಎಲ್ಲರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಪಾರ್ಟಿಗೆ ಗೌರಿಯ ಗೆಳತಿಯರಾದ ಸುಸಾನೆ ಖಾನ್, ಮಲೈಕಾ ಅರೋರ ಮುಂತಾದವರು ಪಾಲ್ಗೊಂಡಿದ್ದರು.
ಹಾಲೊವಿನ್ ಪಾರ್ಟಿಯಲ್ಲಿ ಮಿಂಚಿದ ಸುಹಾನ ಖಾನ್
ಶಾರುಖ್ ಖಾನ್ ಅವರ ಮಗಳು ಸುಹಾನ ಖಾನ್ ಮತ್ತೆ ಸುದ್ದಿಯಲ್ಲಿದ್ದಾಳೆ...
Vijaya Karnataka 1 Nov 2017, 5:30 am