ಆ್ಯಪ್ನಗರ

ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಫಸ್ಟ್ ಲುಕ್ ರಿಲೀಸ್

ಎಲ್ಲರೂ ಕುತೂಹಲದಿಂದ ನಿರೀಕ್ಷಿಸುತ್ತಿರುವ ಬಾಲಿವುಡ್ ಸಿನಿಮಾ 'ಪದ್ಮಾವತಿ'ಯ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿಯಾಗಿ ಭಯಂಕರ ಡೆಡ್ಲಿ ಲುಕ್‌ನಿಂದ ಗಮನಸೆಳೆದಿದ್ದಾರೆ.

Vijaya Karnataka Web 3 Oct 2017, 10:18 am
ಎಲ್ಲರೂ ಕುತೂಹಲದಿಂದ ನಿರೀಕ್ಷಿಸುತ್ತಿರುವ ಬಾಲಿವುಡ್ ಸಿನಿಮಾ 'ಪದ್ಮಾವತಿ'ಯ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿಯಾಗಿ ಭಯಂಕರ ಡೆಡ್ಲಿ ಲುಕ್‌ನಿಂದ ಗಮನಸೆಳೆದಿದ್ದಾರೆ.
Vijaya Karnataka Web sultan alauddin khilji first look out padmavati
ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಫಸ್ಟ್ ಲುಕ್ ರಿಲೀಸ್

ಉದ್ದವಾದ ತಲೆಗೂದಲು, ಭಯಂಕರ ಕಣ್ಣುಗಳೂ, ಮುಖದ ಮೇಲೆ ಕತ್ತಿಯಿಂದ ಇರಿದ ಗುರುತಿನಿಂದ ಖಿಲ್ಜಿ ಫಸ್ಟ್‌ಲುಕ್ ಬಾಲಿವುಡ್ ಅಭಿಮಾನಿಗಳನ್ನು ಸೆಳೆಯುತ್ತಿದೆ. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಐತಿಹಾಸಿಕ ಹಿನ್ನೆಲೆಯಲ್ಲಿ ತೆರೆಗೆ ತರುತ್ತಿರುವ 'ಪದ್ಮಾವತಿ' ಸಿನಿಮಾದಲ್ಲಿನ ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣವೀರ್ ಸಿಂಗ್ ನಟಿಸುತ್ತಿದ್ದಾರೆ. ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ಮಹಾರಾಜ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸುತ್ತಿದ್ದಾರೆ.

ಈಗಾಗಲೆ ಬಿಡುಗಡೆಯಾಗಿರುವ ಪದ್ಮಾವತಿ, ರತನ್ ಸಿಂಗ್ ಫಸ್ಟ್ ಲುಕ್‌ಗೆ ಆನ್‌ಲೈನ್‌ನಲ್ಲಿ ವಿಶೇಷ ಪ್ರತಿಕ್ರಿಯೆ ಲಭ್ಯವಾಗಿದೆ. ಭನ್ಸಾಲಿ ಚಿತ್ರಗಳೆಂದರೆ ಅದ್ದೂರಿತನ, ಅವರದೇ ಆದಂತಹ ಶೈಲಿಗೆ ಹೆಸರುವಾಸಿ. ಈ ಚಿತ್ರದಲ್ಲೂ ಇದೆಲ್ಲಾ ಸ್ಪಷ್ಟವಾಗಿ ಕಾಣಿಸುತ್ತಿದ್ದೆ. ಹಾಗಾಗಿ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

ಡಿಸೆಂಬರ್ 1ರಿಂದ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಇತ್ತೀಚೆಗೆ ಬಿಡುಗಡೆಯಾದ ಖಿಲ್ಜಿ ಫಸ್ಟ್‌ಲುಕ್ ಮೇಲೆ ಸಿನಿರಸಿಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಖತರ್ನಾಕ್ ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

SULTAN ALAUDDIN KHILJI #Khilji pic.twitter.com/Ls2IznAq1c
— Ranveer Singh (@RanveerOfficial) October 2, 2017

SULTAN ALAUDDIN KHILJI #Khilji pic.twitter.com/DNtht5bHcQ
— Ranveer Singh (@RanveerOfficial) October 2, 2017

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌