ಆ್ಯಪ್ನಗರ

ದೇವ್ರ ದೊಡ್ಡವ್ನು: ಅಪಾಯದಿಂದ ಸನ್ನಿ ಪಾರು

ಸನ್ನಿ ಲಿಯೋನ್‌ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಬುಧವಾರ ಅವಘಡದಿಂದ ಪಾರಾಗಿದ್ದು, ಸನ್ನಿ ಸೇರಿದಂತೆ ಉಳಿದ ಪ್ರಯಾಣಿಕರು ಕೂದಲೆಳೆ ಅಂತರದಿಂದ ಬಚಾವ್‌ ಆಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 1 Jun 2017, 1:14 pm
ಮಾಜಿ ಪಾರ್ನ್‌ ಸುಂದರಿ, ಬಾಲಿವುಡ್‌ನ ಹಾಟ್‌ ಬೆಡಗಿ ಸನ್ನಿ ಲಿಯೋನ್‌ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಬುಧವಾರ ಅವಘಡದಿಂದ ಪಾರಾಗಿದ್ದು, ಸನ್ನಿ ಸೇರಿದಂತೆ ಉಳಿದ ಪ್ರಯಾಣಿಕರು ಕೂದಲೆಳೆ ಅಂತರದಿಂದ ಬಚಾವ್‌ ಆಗಿದ್ದಾರೆ.
Vijaya Karnataka Web sunny leones plane almost crashed
ದೇವ್ರ ದೊಡ್ಡವ್ನು: ಅಪಾಯದಿಂದ ಸನ್ನಿ ಪಾರು


ಪತಿ ಡೇನಿಯಲ್‌ ಹಾಗೂ ಸಹಚರರ ಜತೆ ಖಾಸಗಿ ವಿಮಾನದಲ್ಲಿ ಮುಂಬೈಗೆ ತೆರಳುತ್ತಿದ್ದರು ಸನ್ನಿ. ಈ ವೇಳೆ ಪ್ರತಿಕೂಲ ಹವಾಮಾನದ ಪರಿಣಾಮ ವಿಮಾನ ಪತನಗೊಳ್ಳುವ ಭೀತಿ ಎದುರಾಗಿತ್ತು. ಆದರೆ ಪೈಲಟ್‍ನ ಸಮಯಪ್ರಜ್ಞೆ ವಿಮಾನದಲ್ಲಿದ್ದವರ ಜೀವವನ್ನು ಅಪಾಯದಿಂದ ಪಾರು ಮಾಡಿದೆ. ಪತನಗೊಳ್ಳಲಿದ್ದ ವಿಮಾನ ಮಹಾರಾಷ್ಟ್ರದ ದುರ್ಗಮ ಪ್ರದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

Thank the lord we are all alive! Our private plane almost crashed through bad weather. Counting our stars and driving home! Thank you God! pic.twitter.com/9jhTQ1arHX — Sunny Leone (@SunnyLeone) 31 May 2017 ಈ ಸಂಬಂಧ ಟ್ವಿಟರ್‌ನಲ್ಲಿ ವೀಡಿಯೋ ಪೊಸ್ಟ್‌ ಮಾಡಿರುವ ಸನ್ನಿ, ನಾವು ಸೇಫ್ ಆಗಿದ್ದು, ರಸ್ತೆಯ ಮಾರ್ಗದಿಂದ ಸುರಕ್ಷಿತವಾಗಿ ಮನೆಗೆ ತೆರಳುತ್ತಿದ್ದೇವೆ ಎಂದು ಹೇಳಿದ್ದಾರೆ. ದೇವರ ದಯೆಯಿಂದ ನಾವೆಲ್ಲ ಬದುಕಿದೆವು ಎಂದು ಸನ್ನಿ ನಿಟ್ಟುಸಿರು ಬಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌