ಆ್ಯಪ್ನಗರ

ಸುಪ್ರೀಂಗೆ ಸಲ್ಲಿಸಿದ್ದ ಶ್ರೀದೇವಿ ಸಾವಿನ ತನಿಖೆ ಅರ್ಜಿ ವಜಾ

ಶ್ರೀದೇವಿ ಸಾವಿನ ಕುರಿತು ಅನೇಕ ಅನುಮಾನ ಮತ್ತು ಗೊಂದಲಗಳಿವೆ. ಈ ಬಗ್ಗೆ ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆ ನಡೆಸಬೇಕು ಎಂದು ಸಿನಿಮಾ ನಿರ್ಮಾಪಕ ಸುನಿಲ್ ಸಿಂಗ್ ಅರ್ಜಿ ಸಲ್ಲಿಸಿದ್ದರು.

TIMESOFINDIA.COM 11 May 2018, 5:36 pm
ಬಾಲಿವುಡ್‌ನ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಟಿ ಶ್ರೀದೇವಿ ಫೆಬ್ರವರಿ 24ರಂದು ದುಬೈನ ಹೋಟೆಲ್ ಒಂದರಲ್ಲಿ ಬಾತ್‍ಟಬ್‌ಗೆ ಬಿದ್ದು ಮೃತಪಟ್ಟಿದ್ದರು. ಈ ಘಟನೆ ಅವರ ಅಭಿಮಾನಿಗಳನ್ನು ತೀವ್ರ ಆಘಾತಕ್ಕೆ ದೂಡಿತ್ತು. ಅವರ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‍ ವಜಾಗೊಳಿಸಿದೆ.
Vijaya Karnataka Web sridevi


ಶ್ರೀದೇವಿ ಸಾವಿನ ಕುರಿತು ಅನೇಕ ಅನುಮಾನ ಮತ್ತು ಗೊಂದಲಗಳಿವೆ. ಈ ಬಗ್ಗೆ ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆ ನಡೆಸಬೇಕು ಎಂದು ಸಿನಿಮಾ ನಿರ್ಮಾಪಕ ಸುನಿಲ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಒಳಗೊಂಡ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಶುಕ್ರವಾರ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಆರಂಭದಲ್ಲಿ ಹೇಳಿತ್ತು. ಆದರೆ ಈಗ ಅರ್ಜಿಯನ್ನು ವಜಾಗೊಳಿಸಿದೆ.

ದುಬೈನ ಪಂಚಾತಾರ ಹೋಟೆಲ್‍ ಒಂದರ ಬಾತ್‍ಟಬ್‍ಗೆ ಆಕಸ್ಮಿಕವಾಗಿ ಬಿದ್ದು ಫೆ.24ರಂದು ಶ್ರೀದೇವಿ ಮೃತಪಟ್ಟಿದ್ದರು. ಈ ಸಂಬಂಧ ತನಿಖೆಗೆ ಕೋರಿ ಸುನಿಲ್ ಸಿಂಗ್ ಮಾ. 9ರಂದು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ಬಗ್ಗೆ ಭಾರತ ಮತ್ತು ದುಬೈ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂಬ ಕಾರಣ ನೀಡಿ ನ್ಯಾಯಾಲಯದ ಈ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿತ್ತು.

ಶ್ರೀದೇವಿ ಸಾವಿನ ಸಮಯದಲ್ಲಿ ತಾನೂ ದುಬೈನಲ್ಲಿದ್ದೆ. ಈ ಬಗ್ಗೆ ಹೋಟೆಲ್ ಸಿಬ್ಬಂದಿ ಜತೆಗೆ ವಿಚಾರಿಸಿದ್ದೆ. ಪ್ರಾಥಮಿಕ ವರದಿ ಮತ್ತು ತನಿಖಾ ವರದಿಗಿಂತಲೂ ಹೋಟೆಲ್ ಸಿಬ್ಬಂದಿ ನೀಡಿದ ಮಾಹಿತಿ ಬೇರೆ ಇತ್ತು. ಶ್ರೀದೇವಿ ಸಾವು ರಾಷ್ಟ್ರೀಯ ಪ್ರಾಮುಖ್ಯತೆಯುಳ್ಳದ್ದು. ಅಂದು ಏನಾಯಿತು ಎಂಬುದನ್ನು ಅವರ ಅಭಿಮಾನಿಗಳು, ಮಾಧ್ಯಮಗಳು ತಿಳಿದುಕೊಳ್ಳಬೇಕಾಗಿವೆ ಎಂದಿದ್ದಾರೆ ಸುನಿಲ್ ಸಿಂಗ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌