ಆ್ಯಪ್ನಗರ

ಸುಶಾಂತ್ ಸಿಂಗ್ ರಜಪೂತ್‌ ಕೇಸ್‌ನಲ್ಲಿ ನಿಟ್ಟುಸಿರು ಬಿಟ್ಟ ಸಲ್ಮಾನ್ ಖಾನ್, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಕಾರಣ ಏನು ಎಂದು ಸಾಕಷ್ಟು ಚರ್ಚೆಯಾಗುತ್ತಿದೆ. ಇದರ ಜೊತೆಗೆ ಬಾಲಿವುಡ್‌ನ ಸ್ಟಾರ್ ನಟ, ನಿರ್ದೇಶಕರ ಮೇಲೆ ದೂರು ಕೂಡ ದಾಖಲಾಗಿತ್ತು. ಈ ದೂರನ್ನು ಈಗ ಬಿಹಾರ ಕೋರ್ಟ್ ವಜಾಗೊಳಿಸಿದೆ.

Vijaya Karnataka Web 10 Jul 2020, 11:23 am
ಸಲ್ಮಾನ್ ಖಾನ್, ಏಕ್ತಾ ಕಪೂರ್, ಸಂಜಯ್ ಲೀಲಾ ಬನ್ಸಾಲಿ, ಕರಣ್ ಜೋಹರ್‌ ವಿರುದ್ಧ ದಾಖಲಾದ ದೂರನ್ನು ಬುಧವಾರ ಬಿಹಾರ್ ಕೋರ್ಟ್ ತಿರಸ್ಕರಿಸಿದೆ. ಇದು ಸುಶಾಂತ್ ಸಿಂಗ್ ರಜಪೂತ್ ವಿಚಾರವಾಗಿ ದಾಖಲಾಗಿದ್ದ ದೂರಾಗಿತ್ತು.
Vijaya Karnataka Web sushant singh rajput bihar court dismissed case against salman khan karan johar sanjay leela bhansali
ಸುಶಾಂತ್ ಸಿಂಗ್ ರಜಪೂತ್‌ ಕೇಸ್‌ನಲ್ಲಿ ನಿಟ್ಟುಸಿರು ಬಿಟ್ಟ ಸಲ್ಮಾನ್ ಖಾನ್, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ!


ಮುಜಾಪೂರದ ಮ್ಯಾಜಿಸ್ಟ್ರೇಟ್ ಮುಖೇಶ್ ಕುಮಾರ್ ಅವರು ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಜಾ ದಾಖಲಿಸಿದ್ದ ದೂರನ್ನು ವಜಾಗೊಳಿಸಿದೆ. ಮುಂಬೈನ ಮನೆಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ 3 ದಿನದ ನಂತರದಲ್ಲಿ ವಕೀಲ ಓಜಾ ದೂರು ದಾಖಲಿಸಿದ್ದರು. ಅವರು ನೆಪೋಟಿಸಂ ಹೆಸರಿನಲ್ಲಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಕಂಗನಾ ರಣಾವತ್ ಹೇಳಿದ್ದ ಮಾತನ್ನು ಕೂಡ ಇವರು ಪ್ರಸ್ತಾಪಿಸಿದ್ದರು.

ಈ ಹಿಂದೆ ಓಜಾ ಟಾಪ್ ಸಿನಿಮಾ ಮತ್ತು ರಾಜಕೀಯ ವ್ಯಕ್ತಿಗಳು, ವಿದೇಶಿ ರಾಜ್ಯಗಳ ಮುಖ್ಯಸ್ಥರ ವಿರುದ್ಧ ಕೂಡ ದೂರು ದಾಖಲಿಸಿದ್ದರು. ಹೀಗಾಗಿ ಅವರು ಸಿಜೆಎಂನ (Chief Judicial Magistrate) ಆದೇಶದಿಂದ ಮೊಕದ್ದಮೆ ಹೂಡಿದಾಗಲೂ ಕೂಡ ಹೆದರದೆ ಶಾಂತಿಯುತವಾಗಿದ್ದರು.

'Chief Judicial Magistrate ಆದೇಶಕ್ಕೆ ನಾನು ಸವಾಲು ಹಾಕಿ ಜಿಲ್ಲಾ ಕೋರ್ಟ್‌ಗೆ ಹೋಗುತ್ತೇನೆ. ಸುಶಾಂತ್ ಸಿಂಗ್ ರಜಪೂತ್ ನಿಧನದಿಂದ ಬಿಹಾರದವರು ನೋವಲ್ಲಿದೆ. ಸುಶಾಂತ್‌ನಂತಹ ಆಶಾಭಾವನೆ ಹೊಂದಿದವರು ಕೂಡ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಬಿಹಾರದ ಜನತೆಯಲ್ಲಿ ಭಯ ಹುಟ್ಟಿಸಿದೆ' ಎಂದು ಸುಧೀರ್ ಓಜಾ ಹೇಳಿದ್ದಾರೆ. ಬಿಹಾರದ ಕೆಲ ಮಂದಿ ಸುಶಾಂತ್ ಸಿಂಗ್ ರಜಪೂತ್‌ ಅವರ ದೂರನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ.

Also Read-ಕಂಗನಾ ರಣಾವತ್ ಮೇಲೆ ಚಪ್ಪಲಿ ಎಸೆದು, ಹುಚ್ಚಿ ಎಂದು ಕರೆದಿದ್ದ ಆಲಿಯಾ ಭಟ್ ತಂದೆ ಮಹೇಶ್ ಭಟ್!

ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಬಾಲಿವುಡ್‌ನಲ್ಲಿ ಅಲ್ಲೋಲ-ಕಲ್ಲೋಲವಾಗಿದೆ. ನೆಪೋಟಿಸಂ ಬಗ್ಗೆ ಕಂಗನಾ ರಣಾವತ್, ಮಹೇಶ್ ಭಟ್ ಪುತ್ರಿ ಪೂಜಾ ಭಟ್ ಟ್ವಿಟರ್‌ನಲ್ಲಿ ಮಾತಿನ ಯುದ್ಧ ನಡೆಯುತ್ತಿದೆ.

Also Read-ಸುಶಾಂತ್‌ ಸಿಂಗ್‌ ಮಾಜಿ ಗೆಳತಿ ಅಂಕಿತಾ ಅವರ ಪ್ರಿಯತಮನ ಮೇಲೆ ನೆಟ್ಟಿಗರು ಗರಂ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌