ಆ್ಯಪ್ನಗರ

ಸುಶಾಂತ್-ರಿಯಾ ಸಂಬಂಧದಲ್ಲಿ ತಲೆ ಹಾಕಿದ್ದ ಪೊಲೀಸ್‌ ಅಧಿಕಾರಿ! ಅಚ್ಚರಿ ಮಾಹಿತಿ ಬಹಿರಂಗ!

ಸುಶಾಂತ್‌ ಮತ್ತು ರಿಯಾ ಚಕ್ರವರ್ತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅವರನ್ನು ಬೇರೆ ಮಾಡಲು ಪೊಲೀಸ್‌ ಅಧಿಕಾರಿಯೊಬ್ಬರು ಪಿತೂರಿ ನಡೆಸಿದ್ದರು ಎಂಬ ಸತ್ಯವನ್ನು ಮುಂಬೈ ಪೊಲೀಸರೇ ಬಾಯಿ ಬಿಟ್ಟಿದ್ದಾರೆ!

Vijaya Karnataka Web 5 Aug 2020, 12:42 pm
ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಮತ್ತು ನಟಿ ರಿಯಾ ಚಕ್ರವರ್ತಿ ನಡುವೆ ಪ್ರೀತಿ ಚಿಗುರೊಡೆದಿತ್ತು ಎಂಬುದನ್ನು ಕೆಲವೇ ದಿನಗಳ ಹಿಂದೆ ಸ್ವತಃ ರಿಯಾ ಒಪ್ಪಿಕೊಂಡರು. ಅವರಿಬ್ಬರ ನಡುವೆ ಒಳ್ಳೆಯ ಆಪ್ತತೆಯೇ ಇತ್ತು. ಆದರೆ ಇಬ್ಬರ ಸಂಬಂಧಕ್ಕೆ ಹುಳಿ ಹಿಂಡಲು ಓರ್ವ ಪೊಲೀಸ್‌ ಅಧಿಕಾರಿ ಪ್ರಯತ್ನ ಮಾಡಿದ್ದರು ಎಂಬುದು ಶಾಕಿಂಗ್‌ ವಿಚಾರ! ಅಚ್ಚರಿ ಎಂದರೆ ಆ ಪೊಲೀಸ್‌ ಅಧಿಕಾರಿ ಬೇರಾವೂ ಅಲ್ಲ; ಸುಶಾಂತ್‌ ಸಂಬಂಧಿ ಓ.ಪಿ. ಸಿಂಗ್‌!
Vijaya Karnataka Web sushant singh rajput case dcp paramjit singh dahiya reveals shocking details about rhea chakraborty
ಸುಶಾಂತ್-ರಿಯಾ ಸಂಬಂಧದಲ್ಲಿ ತಲೆ ಹಾಕಿದ್ದ ಪೊಲೀಸ್‌ ಅಧಿಕಾರಿ! ಅಚ್ಚರಿ ಮಾಹಿತಿ ಬಹಿರಂಗ!


ರಿಯಾ ಮತ್ತು ಸುಶಾಂತ್ ಬಹುಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೈ-ಕೈ ಹಿಡಿದು ಓಡಾಡುತ್ತಿದ್ದರು. ಇಬ್ಬರ ನಡುವಿನ ಆಪ್ತತೆಗೆ ಅನೇಕ ಫೋಟೋಗಳು ಸಾಕ್ಷಿ ಒದಗಿಸುತ್ತವೆ. ಆದರೆ ಈ ಸಂಬಂಧದ ಬಗ್ಗೆ ಸುಶಾಂತ್‌ ಕುಟುಂಬಕ್ಕೆ ಅಸಮಾಧಾನ ಇತ್ತು. ಹಾಗಾಗಿ ಅವರಿಬ್ಬರನ್ನು ಬೇರೆ ಮಾಡಲು ಸುಶಾಂತ್‌ ಭಾವ ಓ.ಪಿ. ಸಿಂಗ್‌ ಪ್ರಯತ್ನ ಮಾಡಿದ್ದರಂತೆ. ಅದಕ್ಕಾಗಿ ತಮ್ಮ ಖಾಕಿ ಪವರ್‌ ಬಳಸಿಕೊಂಡಿದ್ದರು ಎಂಬ ವಿಷಯ ಈಗ ಬಹಿರಂಗ ಆಗಿದೆ.

ಈ ಮಾಹಿತಿಯನ್ನು ಮುಂಬೈ ಪೊಲೀಸ್‌ ಉಪ ಆಯುಕ್ತರಾದ ಪರಮಜಿತ್‌ ಸಿಂಗ್‌ ದಹಿಯಾ ಅವರು ಹೊರ ಹಾಕಿದ್ದಾರೆ. ಹರಿಯಾಣ ಪೊಲೀಸ್‌ ಇಲಾಖೆಯಲ್ಲಿ ಹಿರಿಯ ಐಪಿಎಸ್‌ ಅಧಿಕಾರಿ ಆಗಿರುವ ಓ.ಪಿ. ಸಿಂಗ್‌ ಅವರು ತಮಗೆ ಕರೆ ಮಾಡಿ ಏನೆಲ್ಲ ಮಾತನಾಡಿದ್ದರು ಎಂಬುದನ್ನು ಪರಮಜಿತ್‌ ಸಿಂಗ್‌ ದಹಿಯಾ ಬಹಿರಂಗಪಡಿಸಿದ್ದಾರೆ. ಆ ಸುದ್ದಿ ಈಗ ಎಲ್ಲೆಲ್ಲೂ ವೈರಲ್‌ ಆಗುತ್ತಿದೆ.

also read: ಸುಶಾಂತ್‌ರ 50 ಕೋಟಿ ರೂ. ವಿಚಾರದಲ್ಲಿ ಮುಂಬೈ ಪೊಲೀಸರ ಕಣ್ಣಾಮುಚ್ಚಾಲೆ: ಬಿಹಾರ ಡಿಜಿಪಿ ಆರೋಪ!

'ರಿಯಾ ಅವರಿಗೆ ಕರೆ ಮಾಡಿ ಪೊಲೀಸ್‌ ಠಾಣೆಗೆ ಕರೆಸಿಕೊಂಡು ಅವರ ಮೇಲೆ ಒತ್ತಾಯ ಹೇರಬೇಕು. ಸುಶಾಂತ್‌ರಿಂದ ಆಕೆ ದೂರ ಹೋಗುವಂತೆ ಮಾಡಬೇಕು' ಎಂದು ಓ.ಪಿ. ಸಿಂಗ್‌ ಅವರು ಪರಮಜಿತ್‌ ಸಿಂಗ್‌ ದಹಿಯಾ ಅವರಿಗೆ ಫೋನ್‌ ಮೂಲಕ ತಿಳಿಸಿದ್ದರಂತೆ. ಸುಶಾಂತ್‌ ಜೀವನದ ಮೇಲೆ ರಿಯಾ ಸಂಪೂರ್ಣ ಹಿಡಿತ ಸಾಧಿಸಿದ್ದು, ಅದು ಸುಶಾಂತ್‌ ಕುಟುಂಬಕ್ಕೆ ಇಷ್ಟ ಇರಲಿಲ್ಲ. ಹಾಗಾಗಿಯೇ ಈ ರೀತಿ ಮಾಡಲು ಓ.ಪಿ. ಸಿಂಗ್‌ ತಿಳಿಸಿದ್ದರು ಎಂದು ಪರಮಜಿತ್‌ ಹೇಳಿದ್ದಾರೆ.

also read: ಶಾಕಿಂಗ್‌..! 'ನೋವಿಲ್ಲದೆ ಸಾಯುವುದು ಹೇಗೆ' ಎಂದು ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದ ಸುಶಾಂತ್?

ಆದರೆ ಈ ವಿಚಾರವಾಗಿ ಓ.ಪಿ. ಸಿಂಗ್‌ ಯಾವುದೇ ದೂರು ನೀಡಿರಲಿಲ್ಲ. ಬರೀ ಫೋನ್‌ ಮೂಲಕ ಅನೌಪಚಾರಿಕವಾಗಿ ಹೇಳಿದ್ದರು. 'ಸೂಕ್ತ ದೂರು ದಾಖಲಿಸದ ಹೊರತು ಹೀಗೆಲ್ಲ ಮಾಡಲು ಸಾಧ್ಯವಿಲ್ಲ. ನೀವು ಲಿಖಿತವಾಗಿ ದೂರು ನೀಡಿದ ಬಳಿಕ ಕ್ರಮ ಕೈಕೊಳ್ಳುತ್ತೇವೆ' ಎಂದು ತಾವು ಆ ಸಂದರ್ಭದಲ್ಲಿ ಉತ್ತರ ನೀಡಿದ್ದಾಗಿ ಪರಮಜಿತ್‌ ಹೇಳಿಕೊಂಡಿದ್ದಾರೆ.

also read: ಸುಶಾಂತ್‌ ಕೊಲೆಯಾಗಿದ್ದು ನಿಮ್ಮಂಥವರ ವರ್ತನೆಯಿಂದಲೇ! ಕರೀನಾ ವಿರುದ್ಧ ಕಂಗನಾ ಟೀಮ್‌ ಕಿಡಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌