ಆ್ಯಪ್ನಗರ

ರೀಲ್‌ ಧೋನಿಯ ಹಾಸಿಗೆ ವಿಷ್ಯ ಫೇಸ್‌ಬುಕ್‌ಲ್ಲಿ ಲೈವ್‌!

ತೆರೆ ಮೇಲೆ ಎಮ್‌.ಎಸ್‌ ಧೋನಿಯಾಗಿ ಮೆರೆದ ನಟ ಸುಶಾಂತ್‌ ಸಿಂಗ್‌ ರಜಪೂತ್‌ ವೆಬ್‌ಸೈಟ್‌ವೊಂದರ ಫೇಸ್‌ಬುಕ್‌ ಲೈವ್‌ನಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.

ವಿಕ ಸುದ್ದಿಲೋಕ 26 May 2017, 1:23 pm
ತೆರೆ ಮೇಲೆ ಎಮ್‌.ಎಸ್‌ ಧೋನಿಯಾಗಿ ಮೆರೆದ ನಟ ಸುಶಾಂತ್‌ ಸಿಂಗ್‌ ರಜಪೂತ್‌ ವೆಬ್‌ಸೈಟ್‌ವೊಂದರ ಫೇಸ್‌ಬುಕ್‌ ಲೈವ್‌ನಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಖಾಸಗಿ ವಿಷಯವನ್ನು ಯಾವುದೇ ಮುಚ್ಚುಮರೆ ಇಲ್ಲದೆ ಹೇಳಿ ಎಲ್ಲರಿಗೂ ಶಾಕ್‌ ನೀಡಿದ್ದಾರೆ ರೀಲ್‌ ಧೋನಿ.
Vijaya Karnataka Web sushant singh rajput likes 69 sex position
ರೀಲ್‌ ಧೋನಿಯ ಹಾಸಿಗೆ ವಿಷ್ಯ ಫೇಸ್‌ಬುಕ್‌ಲ್ಲಿ ಲೈವ್‌!


ಸದ್ಯಕ್ಕೆ ಸುಶಾಂತ್‌ ತಮ್ಮ ಮುಂದಿನ ಚಿತ್ರ 'ರಾಬ್ತಾ' ಪ್ರಚಾರದಲ್ಲಿ ಬಿಝಿಯಾಗಿದ್ದಾರೆ. ಈ ಸಂಬಂಧ ಚಿತ್ರದ ನಾಯಕಿ ಕೃತಿ ಸನನ್‌ ಜತೆ ವೆಬ್‌ಸೈಟ್‌ವೊಂದರ ಫೇಸ್‌ಬುಕ್‌ ಲೈವ್‌ನಲ್ಲಿ ಕಾಣಿಸಿಕೊಂಡಿದ್ದರು ಸುಷಾಂತ್‌. ಇದೇ ವೇಳೆ ಅಭಿಮಾನಿಯೊಬ್ಬರು ಸುಷಾಂತ್‌ಗೆ 'ನೀವು ಇಷ್ಟಪಡುವ ಸೆಕ್ಸ್‌ ಭಂಗಿ ಯಾವುದು?' ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ಮುಚ್ಚುಮರೆಯಿಲ್ಲದೆ ಉತ್ತರಿಸಿದ ಸುಷಾಂತ್‌, 'ನನಗೆ 60 ಅಂದರೆ ಇಷ್ಟ ಹಾಗಾಗಿ 69 ಸೆಕ್ಸ್‌ ಭಂಗಿ ನನ್ನ ಫೇವರಿಟ್‌ ಎಂದಿದ್ದಾರೆ'. ಇನ್ನು ಮತ್ತೊಬ್ಬ ಅಭಿಮಾನಿ 'ನಿಮಗೆ ಪುನರ್ಜನ್ಮದಲ್ಲಿ ನಂಬಿಕೆ ಇದೆಯಾ?' ಎಂದು ಪ್ರಶ್ನಿಸಿದಾಗ, ಮೊದಲು 'ನನ್ನ ನಂಬಿಕೆ ಮುಖ್ಯವಲ್ಲ' ಎಂದ ಸುಶಾಂತ್‌ ಕೊನೆಗೆ 'ಅದರಲ್ಲಿ ನಂಬಿಕೆ ಇಲ್ಲ' ಎಂದು ಹೇಳಿದರು.

ಅಷ್ಟೇ ಅಲ್ಲದೆ ಸುಶಾಂತ್‌ ಮತ್ತು ಕೃತಿ ಒಡನಾಟದ ಬಗ್ಗೆ ಸಾಕಷ್ಟು ಸುದ್ದಿಗಳು ಬಿಟೌನ್‌ ಜಗತ್ತಿನಲ್ಲಿ ಸುಳಿದಾಡುತ್ತಿವೆ. 'ರಾಬ್ತಾ' ಚಿತ್ರವನ್ನು ಜೂನ್ 9 ರಂದು ರಿಲೀಸ್ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ. ಈ ಮಧ್ಯೆ ತೆಲುಗಿನ 'ಮಗಧೀರ' ಚಿತ್ರದ ಕಥೆಯನ್ನು ಕದ್ದು 'ರಾಬ್ತಾ' ನಿರ್ಮಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಈ ಸಂಬಂಧ 'ರಾಬ್ತಾ' ಚಿತ್ರದ ತಡೆಗೆ 'ಮಗಧೀರ' ಚಿತ್ರದ ನಿರ್ಮಾಪಕರಾದ ಅಲ್ಲು ಅರವಿಂದ್ ಹೈದರಾಬಾದ್‌ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌