ಆ್ಯಪ್ನಗರ

ಬೆಂಗಾಲಿ ಮಹಿಳೆಯರನ್ನು ಟ್ರೋಲ್‌ ಮಾಡಿದವರಿಗಾಗಿ ಸೈಬರ್‌ ಪೊಲೀಸರ ಹುಡುಕಾಟ!

ನೀವು ಸುಶಾಂತ್ ಸಿಂಗ್‌ ರಜಪೂತ್‌ ಅವರ ಅಪ್ಪಟ ಅಭಿಮಾನಿಯೇ ಆಗಿರಬಹುದು. ಹಾಗಂತ ಬೆಂಗಾಲಿ ಮಹಿಳೆಯರ ತಂಟೆಗೆ ಹೋದರೆ ಸೈಬರ್‌ ಕ್ರೈಮ್‌ ಪೊಲೀಸರು ನಿಮ್ಮನ್ನು ಹುಡುಕಿಕೊಂಡು ಬರುವುದು ಗ್ಯಾರಂಟಿ!

Vijaya Karnataka Web 5 Aug 2020, 6:55 pm
ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣ ಇಡೀ ದೇಶದಲ್ಲಿ ಚರ್ಚೆ ಆಗುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಂತೂ ಬಗೆಬಗೆಯ ವಾದ-ವಿವಾದ ನಡೆಯುತ್ತಿದೆ. ಸುಶಾಂತ್‌ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರ ಅಭಿಮಾನಿಗಳು ಹೋರಾಡುತ್ತಿದ್ದಾರೆ. ಆದರೆ ಕೆಲವು ಅಭಿಮಾನಿಗಳು ಸಂಯಮದ ಗಡಿ ಮೀರುತ್ತಿದ್ದಾರೆ. ಇದು ಪೊಲೀಸರ ಗಮನಕ್ಕೂ ಬಂದಿದೆ!
Vijaya Karnataka Web sushant singh rajput rhea chakraborty case cyber police to take action against who abuse bengali women
ಬೆಂಗಾಲಿ ಮಹಿಳೆಯರನ್ನು ಟ್ರೋಲ್‌ ಮಾಡಿದವರಿಗಾಗಿ ಸೈಬರ್‌ ಪೊಲೀಸರ ಹುಡುಕಾಟ!


ನಟಿ ರಿಯಾ ಚಕ್ರವರ್ತಿ ಮತ್ತು ಸುಶಾಂತ್‌ ನಡುವೆ ಪ್ರೀತಿ ಚಿಗುರೊಡೆದಿತ್ತು ಎಂಬುದು ಈಗಾಗಲೇ ಜಗಜ್ಜಾಹೀರಾಗಿರುವ ವಿಚಾರ. ಸುಶಾಂತ್‌ ಸಾವಿಗೆ ರಿಯಾನೇ ಕಾರಣ ಎಂದು ಸುಶಾಂತ್‌ ತಂದೆ ಕೆ.ಕೆ. ಸಿಂಗ್‌ ಪಾಟ್ನಾದಲ್ಲಿ ದೂರು ದಾಖಲಿಸಿದ್ದಾರೆ. ಆನಂತರ ಎಲ್ಲರಿಂದಲೂ ರಿಯಾ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ. ರಿಯಾ ಮೂಲತಃ ಬೆಂಗಾಲಿ ಕುಟುಂಬದವರು ಎಂಬ ಕಾರಣಕ್ಕೆ ಎಲ್ಲ ಬೆಂಗಾಲಿ ಮಹಿಳೆಯರಿಗೆ ಅಗೌರವ ತೋರುವ ನೀಚ ಕೃತ್ಯವೂ ಆನ್‌ಲೈನ್‌ನಲ್ಲಿ ಶುರುವಾಗಿದೆ.

ಸುಶಾಂತ್‌ ಸಾವಿನಿಂದ ನೊಂದು, ಆಕ್ರೋಶ ವ್ಯಕ್ತಪಡಿಸುತ್ತಿರುವ ಅನೇಕ ಅಭಿಮಾನಿಗಳು ಎಲ್ಲ ಬೆಂಗಾಲಿ ಮಹಿಳೆಯರನ್ನು ಒಂದೇ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಆ ಮಹಿಳೆಯರೆಲ್ಲ ದುಡ್ಡಿಗಾಗಿ ಗಂಡಸರ ಸ್ನೇಹ ಬೆಳೆಸುತ್ತಾರೆ ಎಂಬ ರೀತಿಯಲ್ಲಿ ಕಾಮೆಂಟ್‌ ಮಾಡಲಾಗುತ್ತಿದೆ. ಇದರ ವಿರುದ್ಧ ಬೆಂಗಾಲಿ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಲ್ಲಿನ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.

also read: ಸುಶಾಂತ್‌ ಮಾಜಿ ಮ್ಯಾನೇಜರ್‌ ದಿಶಾ ಅವರದ್ದು ರೇಪ್‌ ಆ್ಯಂಡ್‌ ಮರ್ಡರ್‌: ಮಾಜಿ ಸಿಎಂ ಆರೋಪ!

ಮಹಿಳಾ ಆಯೋಗದ ದೂರನ್ನು ಆಧರಿಸಿ ಈಗಾಗಲೇ ಕೊಲ್ಕತ್ತಾ ಸೈಬರ್‌ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೆಂಗಾಲಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮತ್ತು ಕಾಮೆಂಟ್‌ ಮಾಡುತ್ತಿರುವವರನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಇತ್ತೀಚೆಗೆ ಸೆಲೆಬ್ರಿಟಿಗಳನ್ನು ಕೆಟ್ಟದಾಗಿ ಟ್ರೋಲ್‌ ಮಾಡುವ ಟ್ರೆಂಡ್‌ ಹೆಚ್ಚಿದೆ. ಕೆಲವೇ ದಿನಗಳ ಹಿಂದೆ ನಟಿ ಆಲಿಯಾ ಭಟ್‌ ಸಹೋದರಿ ಶಹೀನ್‌ ಭಟ್‌ ಅವರಿಗೂ ಆನ್‌ಲೈನ್‌ನಲ್ಲಿ ಕೊಲೆ ಮತ್ತು ರೇಪ್‌ ಬೆದರಿಕೆ ಹಾಕಲಾಗಿತ್ತು.

also read: ಸುಶಾಂತ್-ರಿಯಾ ಸಂಬಂಧದಲ್ಲಿ ತಲೆ ಹಾಕಿದ್ದ ಪೊಲೀಸ್‌ ಅಧಿಕಾರಿ! ಅಚ್ಚರಿ ಮಾಹಿತಿ ಬಹಿರಂಗ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌