ಆ್ಯಪ್ನಗರ

ಸೋಶಿಯಲ್‌ ಮೀಡಿಯಾ ಖಾತೆ ಡಿಲೀಟ್‌ ಮಾಡಿ ಮೌನಕ್ಕೆ ಶರಣಾದ ಸುಶಾಂತ್‌ ಸಹೋದರಿ! ಕಾರಣ ಏನು?

ಬಾಲಿವುಡ್‌ ನಟ ಸುಶಾಂತ್‌ ನಿಧನರಾಗಿ ಇಂದಿಗೆ (ಅ.14) ಸರಿಯಾಗಿ ನಾಲ್ಕು ತಿಂಗಳು ಕಳೆದಿದೆ. ಅವರ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಹೋರಾಡುತ್ತಿದ್ದ ಸಹೋದರಿಯೇ ಈಗ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ.

Vijaya Karnataka Web 14 Oct 2020, 6:05 pm
ಬಾಲಿವುಡ್‌ನ ಪ್ರತಿಭಾವಂತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಿಧನರಾಗಿ ನಾಲ್ಕು ತಿಂಗಳು ಕಳೆದಿದೆ. ಆ ದುರ್ಘಟನೆ ನಡೆದ ದಿನದಿಂದ ಇಲ್ಲಿಯವರೆಗೆ ಸೋಶಿಯಲ್‌ ಮೀಡಿಯಾದಲ್ಲಿ ಅವರ ಪರವಾಗಿ ಅನೇಕರು ಧ್ವನಿ ಎತ್ತುತ್ತ ಬಂದಿದ್ದಾರೆ. ಅದು ಕೊಲೆಯೋ ಅಥವಾ ಆತ್ಮಹತ್ಯೆಯೇ ಎಂಬುದು ಗೊತ್ತಾಗಬೇಕೆಂದು ಅಭಿಮಾನಿಗಳು ಹಠ ಹಿಡಿದು ಕುಳಿತಿದ್ದಾರೆ. ಇಂಥ ಸಂದರ್ಭದಲ್ಲಿ ಸುಶಾಂತ್‌ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಮೌನಕ್ಕೆ ಜಾರಿದ್ದಾರೆ.
Vijaya Karnataka Web ಸುಶಾಂತ್‌ ಸಿಂಗ್‌ ರಜಪೂತ್‌


ಇಷ್ಟು ದಿನಗಳವರೆಗೂ ಶ್ವೇತಾ ಅವರು ಸುಶಾಂತ್‌ಗಾಗಿ ಸೋಶಿಯಲ್‌ ಮೀಡಿಯಾ ಮೂಲಕ ಹೋರಾಟ ಮಾಡುತ್ತಿದ್ದರು. ಅನೇಕ ಹ್ಯಾಷ್‌ಟ್ಯಾಗ್‌ಗಳ ಮೂಲಕ ಅಭಿಮಾನಿಗಳ ಜೊತೆ ಸೇರಿ ಅವರು ಅಭಿಯಾನ ಮಾಡುತ್ತಿದ್ದರು. ಆದರೆ ಈಗ ಸುಶಾಂತ್‌ ನಿಧನರಾಗಿ ಸರಿಯಾಗಿ ನಾಲ್ಕು ತಿಂಗಳು ಕಳೆದಿರುವಾಗ ತಮ್ಮ ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಡಿಲೀಟ್‌ ಮಾಡಿಕೊಳ್ಳುವ ಮೂಲಕ ಶ್ವೇತಾ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಈ ಬೆಳವಣಿಗೆ ಬಗ್ಗೆ ಸುಶಾಂತ್‌ ಕುಟುಂಬದವರು ಇನ್ನೂ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಗಳನ್ನು ಡಿಲೀಟ್‌ ಮಾಡುವುದಕ್ಕೂ ಮುನ್ನ ಶ್ವೇತಾ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಅದರಲ್ಲಿ ಸುಶಾಂತ್‌ ವಕೌರ್ಟ್‌ ಮಾಡುತ್ತಿರುವ ದೃಶ್ಯವಿತ್ತು. ಸ್ಫೂರ್ತಿದಾಯಕ ವ್ಯಕ್ತಿ, ಅಜರಾಮರ ಎಂದು ಕ್ಯಾಪ್ಷನ್‌ ಕೂಡ ನೀಡಿದ್ದರು. ಆದರೆ ಆ ಬಳಿಕ ಸೋಶಿಯಲ್‌ ಮೀಡಿಯಾ ಖಾತೆಗಳಿಗೆ ಗುಡ್‌ ಬೈ ಹೇಳಿದ್ದಾರೆ.

also read: ಸುಶಾಂತ್‌ ಸಾವಿನ ಬಗ್ಗೆ ಸುಬ್ರಮಣಿಯನ್‌ ಸ್ವಾಮಿ ಕೇಳಿದ ಈ ಪ್ರಶ್ನೆಗೆ ಪೊಲೀಸರ ಬಳಿ ಉತ್ತರ ಇದೆಯೇ?

ಅನುಮಾನಾಸ್ಪದವಾಗಿ ಸಾವಿಗೆ ಈಡಾದ ಸುಶಾಂತ್‌ ಅವರನ್ನು ಕೊಲೆ ಮಾಡಲಾಯಿತೋ ಅಥವಾ ಅವರೇ ನೇಣಿಗೆ ಶರಣಾದರೋ ಎಂಬ ಸತ್ಯ ಸಿಬಿಐ ತನಿಖೆಯ ವರದಿಯಿಂದ ಗೊತ್ತಾಗಬೇಕಿದೆ. ಆದರೆ ಈಗಾಗಲೇ ಏಮ್ಸ್‌ ವೈದ್ಯರು ನೀಡಿದ ವರದಿಯಲ್ಲಿ ಇದು ಆತ್ಮಹತ್ಯೆ ಎಂದು ಹೇಳಲಾಗಿದೆ. ಈ ವರದಿ ಬಗ್ಗೆ ಸುಶಾಂತ್‌ ಕುಟುಂಬದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್‌ ಪ್ರೇಯಸಿ ರಿಯಾ ಚಕ್ರವರ್ತಿ ಮೇಲೆ ಅನೇಕ ಆರೋಪಗಳನ್ನು ಹೊರಿಸಲಾಗಿದೆ.

also read: ರಿಯಾ ಚಕ್ರವರ್ತಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದವರಿಗೆ ಈಗ ಶುರು ಆಗಲಿದೆ ಸಂಕಷ್ಟ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌