ಸಾಯುವ ಮುನ್ನ ಸುಶಾಂತ್ ಮಾಡಿದ್ದ ವಾಟ್ಸಪ್ ಸಂದೇಶದ ಸ್ಕ್ರೀನ್ ಶಾಟ್ ವೈರಲ್!
ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಪತ್ತೆ ಆಗಿಲ್ಲ. ಈಗ ಅವರು ಮಾಡಿದ ವಾಟ್ಸಪ್ ಸಂದೇಶದ ಸ್ಕ್ರೀನ್ ಶಾಟ್ ಅನ್ನು ಸಹೋದರಿ ಶ್ವೇತಾ ಸಿಂಗ್ ಬಹಿರಂಗಗೊಳಿಸಿದ್ದು, ಅದು ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
Vijaya Karnataka Web | 28 Jul 2020, 3:28 pm
ಜು.14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅಷ್ಟರಮಟ್ಟಿಗೆ ಶಾಕ್ ನೀಡಿತು ಅವರ ಸಾವು. ಬಾಲಿವುಡ್ನಲ್ಲಿ ಯಶಸ್ವಿನ ಮೆಟ್ಟಿಲುಗಳನ್ನು ಏರುತ್ತಿದ್ದ ಆ ಕಲಾವಿದನಿಗೆ ಸಾಯುವಂತಹ ನೋವು ಏನಿತ್ತು ಎಂಬುದು ಸದ್ಯಕ್ಕಂತೂ ನಿಗೂಢ. ಆ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಜಾರಿಯಲ್ಲಿದೆ.
ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುವುದಕ್ಕಿಂತಲೂ ಮುನ್ನ ಸುಶಾಂತ್ ಬದುಕಿನಲ್ಲಿ ಏನೆಲ್ಲ ನಡೆದಿತ್ತು? ಅವರು ಯಾರ ಜೊತೆ ಫೋನ್ನಲ್ಲಿ ಮಾತನಾಡಿದ್ದರು? ಯಾರಿಗೆ ವಾಟ್ಸಪ್ ಸಂದೇಶ ಕಳಿಸಿದ್ದರು? ಈ ಎಲ್ಲ ಪ್ರಶ್ನೆಗಳ ಬೆನ್ನು ಹತ್ತಿ ತನಿಖೆ ಮಾಡುತ್ತಿದ್ದಾರೆ ಪೊಲೀಸರು. ಈ ನಡುವೆ ಸುಶಾಂತ್ ಮಾಡಿದ ಒಂದು ವಾಟ್ಸಪ್ ಮೆಸೇಜ್ನ ಸ್ಕ್ರೀನ್ ಶಾಟ್ ಈಗ ಎಲ್ಲೆಡೆ ಹರಿದಾಡುತ್ತಿದೆ. ಅದನ್ನು ಕಂಡವರು ಅಯ್ಯೋ ಎನ್ನುತ್ತಿದ್ದಾರೆ.
ಸುಶಾಂತ್ ನಿಧನರಾಗಿದ್ದು ಜು.14ರಂದು. ಅದಕ್ಕಿಂತ ಕೇವಲ ನಾಲ್ಕು ದಿನ ಮುನ್ನ, ಅಂದರೆ ಜು.10ರಂದು ಅವರ ಅಕ್ಕ ಶ್ವೇತಾ ಸಿಂಗ್ ಜೊತೆ ಸುಶಾಂತ್ ಚಾಟ್ ಮಾಡಿದ್ದರು. ಅದರ ಸ್ಕ್ರೀನ್ ಶಾಟ್ ಅನ್ನು ಶ್ವೇತಾ ಸಿಂಗ್ ಇಂಟರ್ನೆಟ್ನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಅಭಿಮಾನಿಗಳು ಕೂಡ ಶೇರ್ ಮಾಡುತ್ತಿದ್ದಾರೆ. ಯಾವುದೋ ಬೇಜಾರಿನಲ್ಲಿದ್ದ ಸುಶಾಂತ್ಗೆ ಸಮಾಧಾನ ಮಾಡುವ ಪ್ರಯತ್ನವನ್ನು ಆ ವಾಟ್ಸಪ್ ಸಂದೇಶದ ಮೂಲಕ ಮಾಡಿದ್ದರು ಶ್ವೇತಾ.
also read: ಸುಶಾಂತ್ಗೆ ಇತ್ತು ಗಂಭೀರ ಮಾನಸಿಕ ಖಾಯಿಲೆ! ಪೊಲೀಸ್ ವಿಚಾರಣೆಯಲ್ಲಿ ಸತ್ಯ ಬಾಯ್ಬಿಟ್ಟ ಮನೋವೈದ್ಯರು!
ಸುಶಾಂತ್ ಸಹೋದರಿ ಶ್ವೇತಾ ಅಮೆರಿಕದಲ್ಲಿ ನೆಲೆಸಿದ್ದಾರೆ. 'ನೀನು ಕೂಡ ಇಲ್ಲಿಗೆ ಬಾ' ಎಂದು ತಮ್ಮನಿಗೆ ಅವರು ಆಹ್ವಾನ ನೀಡಿದ್ದರು. 'ಬರಬೇಕು ಎಂದು ನನಗೂ ತುಂಬಾ ಫೀಲ್ ಆಗುತ್ತಿದೆ ಅಕ್ಕಾ..' ಎಂದು ಸುಶಾಂತ್ ರಿಪ್ಲೈ ಮಾಡಿದ್ದರು. 'ದಯವಿಟ್ಟು ಬಂದುಬಿಡು. ಒಂದು ತಿಂಗಳು ಇಲ್ಲೇ ಇರಬಹುದು. ನಾವೆಲ್ಲರೂ ಜೊತೆಯಾಗಿ ಎಂಜಾಯ್ ಮಾಡಬಹುದು. ನಿನಗೂ ಸಮಾಧಾನ ಎನಿಸುತ್ತದೆ' ಎಂದು ಶ್ವೇತಾ ಸಂದೇಶ ಕಳಿಸಿದ್ದರು.
also read: ಸುಶಾಂತ್ ಬಯೋಪಿಕ್ ಎನ್ನಲಾದ 'ಸೂಸೈಡ್ ಆರ್ ಮರ್ಡರ್' ಚಿತ್ರದ ಬಗ್ಗೆ ಶಾಕಿಂಗ್ ಮಾಹಿತಿ!
ಈ ಮಾತುಕಥೆ ನಡೆದು ನಾಲ್ಕು ದಿನ ಕಳೆಯುವುದರೊಳಗೆ ಸುಶಾಂತ್ ನೇಣು ಬಿಗಿದ ಸ್ಥಿತಿಯಲ್ಲಿ ಮುಂಬೈನ ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿದ್ದರು. ಈ ಸುದ್ದಿ ಕುಟುಂಬದವರಿಗೆ ಮಾತ್ರವಲ್ಲದೆ, ಅವರನ್ನು ಪ್ರೀತಿಸುವ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್ ನೀಡಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ನ ಅನೇಕರನ್ನು ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
also read: ದಿಲ್ ಬೇಚಾರಾ ಸಿನಿಮಾ ಲೀಕ್! ಸುಶಾಂತ್ಗೆ ಮತ್ತೆ ಅನ್ಯಾಯ ಮಾಡಿದ ಕಿಡಿಗೇಡಿಗಳು!