ಬೇಬಿ ಮತ್ತು ಪಿಂಕ್ ಮುಂತಾದ ಸಿನಿಮಾಗಳಲ್ಲಿ ಅಭೂತಪೂರ್ವ ನಟನೆಯನ್ನು ತೋರಿದ ನಟಿ ತಾಪ್ಸಿ ಪನ್ನು, ಮಹಿಳಾವಾದವೆಂದರೆ ಕೇವಲ ಹೆಚ್ಚುವರಿ ಹಕ್ಕುಗಳನ್ನು ಕೇಳುವುದಲ್ಲ, ಬದಲಾಗಿ ಲಿಂಗ ಸಮಾನತೆಯನ್ನು ಸಾಧಿಸುವುದಾಗಿದೆ ಎಂದು ಹೇಳಿದ್ದಾರೆ. ಮಹಿಳಾ ಸಮಾನತೆ ಕುರಿತಾದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು, ಕೆಲವರು ಫೆಮಿನಿಸಂ ಅಂದರೆ ಮೀಸಲಾತಿ ಕೇಳುವುದು ಅಥವಾ ಪುರುಷರಿಗೆ ಸಮವಾಗಿರಲು ಹೆಚ್ಚುವರಿ ಹಕ್ಕುಗಳನ್ನು ಕೇಳುವುದು ಮಾತ್ರ ಎಂದು ಅಂದುಕೊಂಡಿದ್ದಾರೆ. ಇದು ತಪ್ಪು. ಇದರ ಬದಲು ಲಿಂಗ ಸಮಾನತೆಯನ್ನು ಸಾಧಿಸಲು ಮಹಿಳೆಯರು ಪ್ರಯತ್ನಿಸಬೇಕು ಎಂದು ಅವರು ಹೇಳಿದ್ದಾರೆ. ಮಹಿಳೆಯರು ಮೊದಲು ಶಿಕ್ಷ ಣದಲ್ಲಿ ಸಮಾನತೆ ಸಾಧಿಸಲು ಪ್ರಯತ್ನಿಸಬೇಕು. ಇದರಿಂದ ನಮಗೆ ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಹಕ್ಕು ಸಿಕ್ಕಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಮಹಿಳಾವಾದದ ಬಗ್ಗೆ ತಾಪ್ಸಿ ಖಡಕ್ ಮಾತು
ಬೇಬಿ ಮತ್ತು ಪಿಂಕ್ ಮುಂತಾದ ಸಿನಿಮಾಗಳಲ್ಲಿ ಅಭೂತಪೂರ್ವ ನಟನೆಯನ್ನು ತೋರಿದ ನಟಿ ತಾಪ್ಸಿ ಪನ್ನು, ಮಹಿಳಾವಾದವೆಂದರೆ ಕೇವಲ ಹೆಚ್ಚುವರಿ ...
Vijaya Karnataka Web 23 Aug 2017, 5:30 am