ಗುಳಿ ಕೆನ್ನೆಯ ಚೆಲುವೆ ದೀಪಿಕಾ ಪಡುಕೋಣೆಯವರ ಫ್ಯಾಷನ್ ಸೆನ್ಸ್ ಬಗ್ಗೆ ಎರಡು ಮಾತಿಲ್ಲ. ಯುವಜನರ ಪಾಲಿಗೆ ಫ್ಯಾಷನ್ ಐಕಾನ್ ಆಗಿರುವ ಅವರ ಫ್ಯಾಷನ್ ಆಯ್ಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಖ್ಯಾತವಾಗಿವೆ. ಆದರೆ ಇತ್ತೀಚೆಗೆ ಅವರು ಧರಿಸಿದ್ದ ಕಪ್ಪು ರೆಡಿಮೇಡ್ ಸೀರೆ ಟ್ರೋಲಿಂಗ್ಗೆ ಗುರಿಯಾಗಿದೆ. ನಿಯತಕಾಲಿಕೆಯೊಂದರ ಫ್ಯಾಷನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಡಿಪ್ಪಿ ಈ ಸೀರೆ ಧರಿಸಿದ್ದರು. ಈ ಸೀರೆಯಲ್ಲಿ ಅತ್ಯಂತ ಗ್ಲಾಮರಸ್ ಮತ್ತು ಸೆಕ್ಸಿ ಲುಕ್ನಲ್ಲಿ ಕಂಗೊಳಿಸುತ್ತಿದ್ದ ಅವರ ವಿರುದ್ಧ ಈಗ ಟೀಕೆಗಳು ವ್ಯಕ್ತವಾಗಿವೆ. ಸಣ್ಣ ಸೆರಗು ಹೊಂದಿದ್ದ ಈ ಹೊಳೆಯುವ ಕಪ್ಪು ಸೀರೆಗೆ ದೀಪಿಕಾ ಡೀಪ್ ನೆಕ್ನ ಸ್ಟೈಲಿಶ್ ಬ್ಲೌಸ್ ಮತ್ತು ಸೊಂಟಕ್ಕೆ ಸಪೂರವಾದ ಕಪ್ಪು ಬೆಲ್ಟ್ ಧರಿಸಿದ್ದರು. ಫ್ಯಾಷನ್ ಡಿಸೈನರ್ ಸವ್ಯಸಾಚಿ ಮುಖರ್ಜಿ ಈ ಸೀರೆಯನ್ನು ವಿನ್ಯಾಸಗೊಳಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ದೀಪಿಕಾ ಇಂಥ ಉಡುಪುಗಳನ್ನು ಧರಿಸುವುದನ್ನು ಬಿಟ್ಟು ತಮ್ಮ ಕರಿಯರ್ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದ್ದಾರೆ.
ದೀಪಿಕಾ ಪಡುಕೋಣೆ ಸೀರೆಗೆ ಟ್ರೋಲಿಂಗ್
ಗುಳಿ ಕೆನ್ನೆಯ ಚೆಲುವೆ ದೀಪಿಕಾ ಪಡುಕೋಣೆಯವರ ಫ್ಯಾಷನ್ ಸೆನ್ಸ್ ಬಗ್ಗೆ ಎರಡು ಮಾತಿಲ್ಲ...
Vijaya Karnataka 15 Nov 2017, 5:30 am