ಆ್ಯಪ್ನಗರ

ಟ್ವಿಟರ್‌ನಲ್ಲಿ ’ರಾಝಿ’ ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ

ಟ್ರೇಲರ್, ಪೋಸ್ಟರ್‌ಗಳ ಮೂಲಕ ಅತೀವ ಕುತೂಹಲ ಕೆರಳಿಸಿದ್ದ ಬಾಲಿವುಡ್‌ನ ’ರಾಝಿ’ ಚಿತ್ರ ಗುರುವಾರ (ಮೇ 10) ಪ್ರೀಮಿಯರ್ ಪ್ರದರ್ಶನ ಕಂಡಿದ್ದು ಟ್ವಿಟರ್‌ನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

Vijaya Karnataka Web 10 May 2018, 6:49 pm
ಟ್ರೇಲರ್, ಪೋಸ್ಟರ್‌ಗಳ ಮೂಲಕ ಅತೀವ ಕುತೂಹಲ ಕೆರಳಿಸಿದ್ದ ಬಾಲಿವುಡ್‌ನ ’ರಾಝಿ’ ಚಿತ್ರ ಗುರುವಾರ (ಮೇ 10) ಪ್ರೀಮಿಯರ್ ಪ್ರದರ್ಶನ ಕಂಡಿದ್ದು ಟ್ವಿಟರ್‌ನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಬಿಗಿ ನಿರೂಪಣೆ, ಆಲಿಯಾ ಭಟ್ ಅಭಿನಯ, ಮೇಘನಾ ಗುಲ್ಜಾರ್ ಅವರ ಅಚ್ಚುಕಟ್ಟಾದ ನಿರ್ದೇಶನಕ್ಕೆ ಫಿದಾ ಆಗಿದ್ದಾರೆ.
Vijaya Karnataka Web aliya-bhatt1


ಬಾಲಿವುಡ್ ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್ ಟ್ವಿಟರ್‌ನಲ್ಲಿ ಒನ್‌ಲೈನ್ ವಿಮರ್ಶೆ ನೀಡಿದ್ದು, ಚಿತ್ರಕ್ಕೆ ನಾಲ್ಕು ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ. ಒಂದೇ ಮಾತಿನಲ್ಲಿ ಟೆರಿಫಿಕ್ ಎಂದಿದ್ದಾರೆ. ಮೇಘನಾ ಗುಲ್ಜಾರ್ ಅವರ ಅದ್ಭುತ ನಿರೂಪಣೆ, ಪ್ರತಿಭೆಯ ಪವರ್‌ಹೌಸ್ ಆಲಿಯಾ ಭಟ್ ಅಭಿನಯ ಚಿತ್ರದ ಹೈಲೈಟ್ ಎಂದಿದ್ದಾರೆ ತರಣ್.
ಆಲಿಯಾ ಈ ಸಿನಿಮಾದಲ್ಲಿ 1971ರ ಕಾಲಘಟ್ಟದಲ್ಲಿದ್ದ ಕಾಶ್ಮೀರಿ ಹುಡುಗಿಯಾಗಿ ನಟಿಸಿದ್ದಾರೆ. ಮೇ.11ರಂದು ಬಿಡುಗಡೆ ಆಗುತ್ತಿರುವ ಈ ಚಿತ್ರವನ್ನು ಜಂಗ್ಲಿ ಪಿಕ್ಚರ್ಸ್‌ ಮತ್ತು ಧರ್ಮ ಪ್ರೊಡಕ್ಷನ್‌ ಹೌಸ್‌ ಬ್ಯಾನರ್‌ನಲ್ಲಿ ವಿನೀತ್‌ ಜೈನ್‌, ಕರಣ್‌ ಜೋಹತ್‌, ಅಪೂರ್ವ ಮೆಹ್ತಾ, ಹೀರೋ ಯಶ್‌ ಜೋಹರ್‌ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.












ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌