ಆ್ಯಪ್ನಗರ

ಬುರ್ಕಾದಲ್ಲಿ ಕಾಣಿಸಿಕೊಂಡ 'ಮಿ.ಐರಾವತ' ಬೆಡಗಿ ಊರ್ವಶಿ ರೌಟೇಲಾ

ಇತ್ತೀಚೆಗೆ ಅಬು ಧಾಬಿಗೆ ಭೇಟಿ ನೀಡಿದ್ದಾರೆ ಊರ್ವಶಿ ರೌಟೇಲಾ. ಅಲ್ಲಿನ ಪ್ರಸಿದ್ಧ ಶೇಕ್ ಝಯೇದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡಿದ್ದಾರೆ. ಬುರ್ಕಾ ಧರಿಸಿ ತೆಗೆಸಿಕೊಂಡಿರುವ ಫೋಟೋ ಈಗ ಸಖತ್ ವೈರಲ್ ಆಗಿದೆ.

Vijaya Karnataka Web 7 May 2019, 11:15 pm
ಕನ್ನಡದ ಮಿ.ಐರಾವತ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆಗೆ ಅಭಿನಯಿಸಿರುವ ಊರ್ವಶಿ ರೌಟೇಲಾ ಇತ್ತೀಚೆಗೆ ಬಾತ್‌ ಶವರ್‌ ಕೆಳಗೆ ಪಿಂಕ್‌ ಬಾಡಿ ಸೂಟ್‌ನಲ್ಲಿ ನಿಂತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿತ್ತು. ಈಗ ಬುರ್ಕಾದಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದಿದ್ದಾರೆ ಈ ಬೆಡಗಿ.
Vijaya Karnataka Web urvashi


ಇತ್ತೀಚೆಗೆ ಅಬು ಧಾಬಿಗೆ ಭೇಟಿ ನೀಡಿದ್ದಾರೆ ಊರ್ವಶಿ ರೌಟೇಲಾ. ಅಲ್ಲಿನ ಪ್ರಸಿದ್ಧ ಶೇಕ್ ಝಯೇದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡಿದ್ದಾರೆ. ಬುರ್ಕಾ ಧರಿಸಿ ತೆಗೆಸಿಕೊಂಡಿರುವ ಫೋಟೋ ಈಗ ಸಖತ್ ವೈರಲ್ ಆಗಿದೆ.

ಶೇಕ್ ಝಯೇದ್‌ನ ಸೌಂದರ್ಯ, ಅಲ್ಲಿನ ಆಪ್ಯಾಯ ವಾತಾವರಣಕ್ಕೆ ಬೆರಗಾಗಿದ್ದು, ರಮಧಾನ್ ಶುಭಾಶಯಗಳನ್ನು ತಿಳಿಸಿದ್ದಾರೆ ಊರ್ವಶಿ. ಸದಾ ತಮ್ಮ ಕಾಸ್ಟ್ಯೂಮ್‌ಗಳಿಂದಲೇ ಮಾಧ್ಯಮಗಳ ಕ್ಯಾಮೆರಾ ಕಣ್ಣು ಸೆಳೆಯುವ ಊರ್ವಶಿ, ಇತ್ತೀಚೆಗೆ ಫೋಟೋ ಶೂಟ್‌ ಮಾಡಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಸ್ಟನ್ನಿಂಗ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಟೋನ್ಡ್‌ ಫಿಗರ್‌ ಬಾಲಿವುಡ್‌ ನಟಿಯರನ್ನೂ ದಂಗುಬಡಿಸಿದೆ.

ಸದ್ಯ ಹಿಂದಿಯ ಪಾಗಲ್‌ಪಂಟಿ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ ಊರ್ವಶಿ. ಲಂಡನ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು, ಜಾನ್‌ ಅಬ್ರಹಾಂ ಜತೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕರಣ್‌ ವಾಹಿ ಜತೆ ಹೇಟ್‌ ಸ್ಟೋರಿ 4 ಚಿತ್ರದಲ್ಲಿ ನಟಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌