ಆ್ಯಪ್ನಗರ

ಕೊರೆವ ಚಳಿಯಲ್ಲಿ ನಟಿಸಿದ ವರುಣ್‌ ಧವನ್‌

ಕಲಂಕ್‌ ಸಿನಿಮಾದ ಶೂಟಿಂಗ್‌ ಕಾರ್ಗಿಲ್‌ನಲ್ಲಿ ನಡೆಯುತ್ತಿದ್ದು, ಇಲ್ಲಿನ ಮೈ ಕೊರೆಯುವ ಮೈನಸ್‌ ಮೂರು ಡಿಗ್ರಿ ಸೆಲ್ಷಿಯಸ್‌ ...

Vijaya Karnataka 12 Oct 2018, 1:42 pm
ಕಲಂಕ್‌ ಸಿನಿಮಾದ ಶೂಟಿಂಗ್‌ ಕಾರ್ಗಿಲ್‌ನಲ್ಲಿ ನಡೆಯುತ್ತಿದ್ದು, ಇಲ್ಲಿನ ಮೈ ಕೊರೆಯುವ ಮೈನಸ್‌ ಮೂರು ಡಿಗ್ರಿ ಸೆಲ್ಷಿಯಸ್‌ ಉಷ್ಣತೆಯಲ್ಲಿ ನಟ ವರುಣ್‌ ಧವನ್‌ ಮೈ ಮೇಲೆ ಶರ್ಟ್‌ ಇಲ್ಲದೆ ನಟಿಸಿ ಗಮನ ಸೆಳೆದಿದ್ದಾರೆ. ಈ ಅಸಹನೀಯ ಚಳಿಯಲ್ಲಿ ತೆರೆದ ಎದೆಯಲ್ಲಿರುವ ತಮ್ಮ ಫೋಟೊವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ಕಾರ್ಗಿಲ್‌ನಲ್ಲಿ ಹಿಮ ಬೀಳುವ ವೇಳೆ ಶೂಟಿಂಗ್‌ ಮಾಡಲಾಗಿದೆ. ಈ ಚಳಿಯಲ್ಲಿ ನಟನೆ ಮಾಡಲು ತರಬೇತಿ ನೀಡಲಾಗಿತ್ತು. ಆದರೆ ಮೈನಸ್‌ ಮೂರು ಡಿಗ್ರಿ ಉಷ್ಣಾಂಶದಲ್ಲಿ ತೆರೆದ ಮೈಯಲ್ಲಿ ಹೇಗೆ ನಟಿಸಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ದೇವರು ದೊಡ್ಡವನು ಎಂದು ಬರೆದುಕೊಂಡಿದ್ದಾರೆ. ಅಭಿಷೇಕ್‌ ವರ್ಮನ್‌ ನಿರ್ಮಾಣದ ಈ ಸಿನಿಮಾದಲ್ಲಿ ಆಲಿಯಾ ಭಟ್‌, ಕುನಾಲ್‌ ಕೇಮು ಮುಂತಾದವರಿದ್ದಾರೆ.
Vijaya Karnataka Web Mumbai: Bollywood actor Varun Dhawan walks the ramp during a show at Lakme Fashi...
Bollywood actor Varun Dhawan walks the ramp during a show at Lakme Fashion Week Winter Festive 2018 showcasing the collection of designer Kunal Rawal in Mumbai on Saturday, August 25, 2018.Photo)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌