ಆ್ಯಪ್ನಗರ

ದೀಪಿಕಾ ಪಡುಕೋಣೆಯ ಪಾರ್ಟಿ ವಿಡಿಯೋನಲ್ಲಿ ಏನಿದೆ? ಡ್ರಗ್ಸ್‌ ಸುಳಿವು ಹುಡುಕಿ ಹೊರಟ NCB

ನಟಿ ದೀಪಿಕಾ ಪಡುಕೋಣೆ ಎಂದೋ ಮಾಡಿದ ಪಾರ್ಟಿ ಇಂದು ಅವರಿಗೆ ಮುಳುವಾಗಿದೆ. ಆ ಪಾರ್ಟಿಯಲ್ಲಿ ಅವರು ಡ್ರಗ್ಸ್‌ ಸೇವಿಸಿದ್ದರು ಎಂಬ ಶಂಕೆ ವ್ಯಕ್ತವಾಗಿದ್ದು, ಎನ್‌ಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

Vijaya Karnataka Web 23 Sep 2020, 11:10 am
ನಟಿ ದೀಪಿಕಾ ಪಡುಕೋಣೆಯ ವಾಟ್ಸಪ್‌ ಸಂದೇಶ ಬಹಿರಂಗ ಆಗುತ್ತಿದ್ದಂತೆಯೇ ಅವರಿಗೆ ಡ್ರಗ್ಸ್‌ ಜಾಲದ ಜೊತೆ ನಂಟು ಇದೆ ಎಂಬ ಅನುಮಾನ ಬಲವಾಗಿದೆ. ಅದನ್ನು ಭೇದಿಸಲು ಎನ್‌ಸಿಬಿ ಪೊಲೀಸರು ಮುಂದಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ದೀಪಿಕಾ ಪಡುಕೋಣೆ ಭಾಗಿಯಾಗಿದ್ದ ಪಾರ್ಟಿಯೊಂದರ ಸಿಸಿಟಿವಿ ದೃಶ್ಯಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಲಿದ್ದಾರೆ.
Vijaya Karnataka Web ದೀಪಿಕಾ ಪಡುಕೋಣೆ


'ಟೈಮ್ಸ್ ನೌ' ಸುದ್ದಿ ವಾಹಿನಿಯ ಪ್ರಕಾರ, ಕರೀಷ್ಮಾ ಎಂಬ ಮ್ಯಾನೇಜರ್‌ ಜೊತೆ ದೀಪಿಕಾ ಪಡುಕೋಣೆ ಮಾದಕ ವಸ್ತು ಬೇಕೆಂದು ಬೇಡಿಕೆ ಇಟ್ಟಿದ್ದರು. ಆ ವಿಷಯ ಗೊತ್ತಾಗುತ್ತಿದ್ದಂತೆಯೇ ವಿಚಾರಣೆಯಲ್ಲಿ ಹಾಜರಾಗುವಂತೆ ಕರೀಷ್ಮಾಗೆ NCB ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಕರೀಷ್ಮಾ ಮತ್ತು ದೀಪಿಕಾ ನಡುವೆ ನಡೆದಿತ್ತು ಎನ್ನಲಾದ ವಾಟ್ಸಪ್‌ ಸಂದೇಶ ಸಖತ್‌ ವೈರಲ್‌ ಆಗಿದೆ. 2017ರಲ್ಲಿ ಡ್ರಗ್ಸ್‌ ಬೇಕು ಎಂದು ದೀಪಿಕಾ ವಾಟ್ಸಪ್‌ ಮೂಲಕ ಕೇಳಿಕೊಂಡಿದ್ದರು.

ಮುಂಬೈನ ಕಮಲಾ ಮಿಲ್ಸ್‌ ಬಳಿ ಇರುವ ಒಂದು ರೆಸ್ಟೋರೆಂಟ್‌ನಲ್ಲಿ ಡ್ರಗ್ಸ್‌ ವ್ಯವಹಾರ ನಡೆದಿತ್ತು ಎನ್ನಲಾಗಿದೆ. ಅದೇ ಜಾಗದಲ್ಲಿ ದೀಪಿಕಾ ಪಾರ್ಟಿ ಮಾಡಿದ್ದರು ಎಂಬ ಮಾಹಿತಿ ಕೇಳಿಬಂದಿದೆ. ಅಂದು ನಡೆದ ಪಾರ್ಟಿಯ ಸಿಸಿಟಿವಿ ದೃಶ್ಯಗಳನ್ನು ಈಗ ಎನ್‌ಸಿಬಿ ಪೊಲೀಸರು ಪರಿಶೀಲನೆ ಮಾಡಲಿದ್ದಾರೆ. ಅದರಲ್ಲಿ ಅಗತ್ಯ ಮಾಹಿತಿ ಸಿಗುವ ಸಾಧ್ಯತೆ ಇದೆ. ಪೊಲೀಸರು ಮೂರು ವರ್ಷಗಳ ಹಿಂದಿನ ವಿಡಿಯೋ ತುಣುಕುಗಳನ್ನು ಹುಡುಕಿಕೊಂಡು ಹೊರಟಿರುವುದು ಕೌತುಕ ಮೂಡಿಸಿದೆ.

also read: ಶಾಕಿಂಗ್‌...! ದೀಪಿಕಾ ಪಡುಕೋಣೆ ಡ್ರಗ್ಸ್‌ ಬೇಕು ಎಂದು ಕೇಳಿದ್ದ ವಾಟ್ಸಪ್‌ ಸಂದೇಶ ಬಹಿರಂಗ!

ಸಿನಿಮಾದ ಶೂಟಿಂಗ್‌ ಸಲುವಾಗಿ ಸದ್ಯ ದೀಪಿಕಾ ಗೋವಾದಲ್ಲಿ ಇದ್ದಾರೆ. ಮೂಲಗಳ ಪ್ರಕಾರ ದೆಹಲಿಯಲ್ಲಿ ಇರುವ ತಮ್ಮ ಕಾನೂನು ಸಲಹೆಗಾರರ ತಂಡದ ಜೊತೆ ಅವರು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಒಂದು ವೇಳೆ ಅವರ ವಿರುದ್ಧ ಸೂಕ್ತ ಸಾಕ್ಷಿಗಳು ಸಿಕ್ಕಿದ್ದೇ ಹೌದಾದರೆ ಬಂಧನ ಭೀತಿಯೂ ಎದುರಾಗಲಿದೆ. ಹಾಗಾಗಿ ಶೀಘ್ರವೇ ಅವರು ಗೋವಾದಿಂದ ವಾಪಸ್‌ ಮುಂಬೈಗೆ ಮರಳಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಆ ಬಗ್ಗೆ ದೀಪಿಕಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

also read: ದೀಪಿಕಾ & ಪ್ರಭಾಸ್‌ ಚಿತ್ರಕ್ಕೆ ಕೆಲಸ ಮಾಡಲಿದ್ದಾರೆ ಅಣ್ಣಾವ್ರ ಸಿನಿಮಾಗಳ ಸ್ಟಾರ್‌ ನಿರ್ದೇಶಕ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌