ಆ್ಯಪ್ನಗರ

ರಾಷ್ಟ್ರಗೀತೆ ಗಾಯನಕ್ಕೆ ಅದೇನು ಶಾಲೆನಾ: ವಿದ್ಯಾ ಬಾಲನ್‌

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಗಾಯನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗೆ ಮತ್ತೊಬ್ಬ ಬಾಲಿವುಡ್‌ ಸೆಲಿಬ್ರಿಟಿ ಸೇರ್ಪಡೆಯಾಗಿದ್ದಾರೆ.

Vijaya Karnataka Web 29 Oct 2017, 2:38 pm
ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಗಾಯನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗೆ ಮತ್ತೊಬ್ಬ ಬಾಲಿವುಡ್‌ ಸೆಲಿಬ್ರಿಟಿ ಸೇರ್ಪಡೆಯಾಗಿದ್ದಾರೆ. ಒತ್ತಾಯ ಪೂರ್ವಕ ದೇಶಭಕ್ತಿ ಸರಿಯಲ್ಲ ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ 'ಬೇಗಂ ಜಾನ್‌' ವಿದ್ಯಾ ಬಾಲನ್‌.
Vijaya Karnataka Web vidya balan joins the national anthem debate
ರಾಷ್ಟ್ರಗೀತೆ ಗಾಯನಕ್ಕೆ ಅದೇನು ಶಾಲೆನಾ: ವಿದ್ಯಾ ಬಾಲನ್‌


'ಚಿತ್ರ ಪ್ರದರ್ಶನದ ಮುನ್ನ ರಾಷ್ಟ್ರಗೀತೆ ಗಾಯನ ಅವಶ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ. ರಾಷ್ಟ್ರಗೀತೆಯೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಲು ಅದು ಶಾಲೆಯಲ್ಲ. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯ ಅವಶ್ಯಕತೆ ಇಲ್ಲ ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಬಲವಂತದ ದೇಶಭಕ್ತಿ ಅಷ್ಟು ಸಮಂಜಸವಲ್ಲ' ಎಂದು ವಿದ್ಯಾ ಬಾಲನ್‌ ಹೇಳಿದ್ದಾರೆ.

ಮಾತು ಮುಂದುವರೆಸುತ್ತ, ' ನಾನು ನನ್ನ ದೇಶವನ್ನು ತುಂಬಾ ಪ್ರೀತಿಸುತ್ತೇನೆ. ಅದಕ್ಕಾಗಿ ಏನನ್ನೂ ಬೇಕಾದರು ಮಾಡಲು ಸಿದ್ಧಳಿದ್ದೇನೆ. ಆದರೆ ರಾಷ್ಟ್ರಪ್ರೇಮದ ಪಾಠವನ್ನು ಬೇರೆಯವರಿಂದ ಹೇಳಿಸಿಕೊಳ್ಳುವ ಅಗತ್ಯತೆ ನನಗಿಲ್ಲ. ರಾಷ್ಟ್ರಗೀತೆ ನನಗೆ ಎಲ್ಲೇ ಕೇಳಿಸಲಿ, ನಾನು ಎಲ್ಲಿದ್ದರೂ ಎದ್ದು ನಿಂತು ಗೌರವಿಸುತ್ತೇನೆ' ಎಂದು ವಿದ್ಯಾ ಖಡಕ್ಕಾಗಿ ತಮ್ಮ ವಿಚಾರ ಮಂಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌