ಆ್ಯಪ್ನಗರ

ವಿದ್ಯಾ ಬಾಲನ್ ಅಭಿನಯದ ಗಣಿತಶಾಸ್ತ್ರಜ್ಞೆ 'ಶಕುಂತಲಾದೇವಿ' ಲುಕ್‌ಗೆ ನೆಟ್ಟಿಗರಿಂದ ಬಹುಪರಾಕ್

ವಿದ್ಯಾ ಬಾಲನ್ ಯಾವಾಗಲೂ ಬೇರೆ ಬೇರೆಯ ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ವಿಭಿನ್ನ ಕಥೆಗಳುಳ್ಳ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈ ಬಾರಿ ಅವರು ಮಹಿಳಾ ಪ್ರಧಾನ ಬಯೋಪಿಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಚಿತ್ರದ ಮೊದಲ ಲುಕ್ ಬಿಡುಗಡೆಯಾಗಿದೆ.

Vijaya Karnataka Web 16 Sep 2019, 2:21 pm
'ಮಿಷನ್ ಮಂಗಲ್' ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಗೊಂಡು ಯಶಸ್ಸು ಪಡೆದಿತ್ತು. ಅಷ್ಟೇ ಅಲ್ಲದೆ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದಿತ್ತು. ಈ ಚಿತ್ರದಲ್ಲಿ ವಿದ್ಯಾ ಇಸ್ರೋ ವಿಜ್ಞಾನಿಯಾಗಿ ಕಾಣಿಸಿಕೊಂಡಿದ್ದರು. ಈ ಬಾರಿ ಅವರು ಕನ್ನಡತಿ, ಗಣಿತಶಾಸ್ತ್ರಜ್ಞೆ 'ಹ್ಯೂಮನ್ ಕಂಪ್ಯೂಟರ್' ಶಕುಂತಲಾ ದೇವಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಶಕುಂತಲಾ ದೇವಿ ಚಿತ್ರದ ಫಸ್ಟ್ ಲುಕ್ ಬಗ್ಗೆ ಬರೆದುಕೊಂಡಿರುವ ವಿದ್ಯಾ "ಅವರೊಬ್ಬರು ಅತ್ಯದ್ಭುತ " ಎಂದಿದ್ದಾರೆ.
Vijaya Karnataka Web vidya balan

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿದ್ಯಾ "ಇಂತಹ ಅದ್ಭುತ ಪಾತ್ರಕ್ಕಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ತುಂಬ ಉತ್ಸುಕಳಾಗಿದ್ದೇನೆ. ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಲು ಬಾಬ್ ಕಟ್‌ ಮಾಡಿಸಿಕೊಳ್ಳುತ್ತಿದ್ದೇನೆ. ಕರ್ಲಿ ಬಾಬ್ ಕೂದಲು ಹಾಗೂ ದಕ್ಷಿಣ ಭಾರತದ ಟ್ರೆಡಿಷನಲ್ ಈ ಮುಖ ಈ ಪಾತ್ರಕ್ಕೆ ಉತ್ತಮ ಹೊಂದಾಣಿಕೆಯಾಗಿದೆ. ಶಕುಂತಲಾ ದೇವಿ ಅವರ ಆಕರ್ಷಕ ವ್ಯಕ್ತಿತ್ವ, ಅವರ ಜೀವನ ನನ್ನನ್ನು ಹೆಚ್ಚಾಗಿ ಸೆಳೆದಿದೆ. ೨೦ನೇ ವಯಸ್ಸಿನಿಂದ ವೃತ್ತಿಜೀವನದ ಕೊನೆಯವರೆಗಿನ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ " ಎಂದು ತಿಳಿಸಿದ್ದರು.

ಶಕುಂತಲಾ ದೇವಿ ಶ್ರೇಷ್ಠ ಗಣಿತ ಮಾಂತ್ರಿಕರು, ಭಾರತೀಯ ಲೇಖಕಿ. ಬ್ರಿಟಿಷ್ ಸಾಮ್ರಾಜ್ಯಕ್ಕೆ ಒಳಪಟ್ಟಿದ್ದ ಅಂದಿನ ಮೈಸೂರು ರಾಜ್ಯದಲ್ಲಿ ಅಂದರೆ ಬೆಂಗಳೂರಿನಲ್ಲೇ ಶಕುಂತಲಾ ಜನನವಾಗಿದ್ದು. 5 ವರ್ಷ ವಯಸ್ಸಿನಲ್ಲಿದ್ದಾಗಲೇ ಶಕುಂತಲಾ 18 ವರ್ಷದ ವಿದ್ಯಾರ್ಥಿಗಳ ಲೆಕ್ಕವನ್ನು ಪರಿಹರಿಸಿದ್ದರು. ಆಗಲೇ ಎಲ್ಲರಿಗೂ ಅವರ ಬುದ್ಧಿಮಟ್ಟದ ಅರಿವಾಗಿದ್ದು. 1982ರಲ್ಲಿ ಶಕುಂತಲಾ 'ದಿ ಗಿನ್ನಿಸ್ ಬುಕ್ ಆಫ್ ವಲ್ಡ್‌ ರೆಕಾರ್ಡ್ಸ್'ನಲ್ಲಿ ಜಾಗ ಪಡೆದುಕೊಂಡಿದ್ದಾರೆ. ಗಣಿತ ಪಜಲ್ಸ್, ಆಸ್ಟ್ರೋಲಜಿ ಬಗ್ಗೆ ಶಕುಂತಲಾ ಸಾಕಷ್ಟು ಪುಸ್ತಕ ಬರೆದಿದ್ದಾರೆ. ಕಿಡ್ನಿ, ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಶಕುಂತಲಾ ದೇವಿ 2013ರಲ್ಲಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. 2013ರ ನವೆಂಬರ್ 4 ರಂದು ಅವರ 84ನೇ ಹುಟ್ಟುಹಬ್ಬದ ನಿಮಿತ್ತ 'ಗೂಗಲ್ ಡೂಡಲ್' ಗೌರವ ನೀಡಿತ್ತು.

'ಶಕುಂತಲಾ ದೇವಿ' ಜೀವನಾಧರಿತ ಈ ಚಿತ್ರ 2020ರ ಹೊತ್ತಿಗೆ ರಿಲೀಸ್ ಆಗಲಿದೆ. ವಿಕ್ರಮ್ ಮಲ್ಹೋತ್ರಾ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌